IPL 2020: ಪಂಜಾಬ್ ವಿರುದ್ಧದ ಪಂದ್ಯಕ್ಕೆ RCB ತಂಡದಲ್ಲಿ ಒಂದು ಬದಲಾವಣೆ..?
ದುಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅದ್ದೂರಿಯಾಗಿಯೇ ಶುಭಾರಂಭ ಮಾಡಿದೆ. ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ 10 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು.
ಇದೀಗ ಇಂದು ಕರ್ನಾಟಕದ ಆಟಗಾರರಿಂದಲೇ ಕೂಡಿರುವ ಕಿಂಗ್ಸ್ ಇಲೆವನ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದು, ದುಬೈನ ಅಂತಾರಾಷ್ಟ್ರೀಯ ಮೈದಾನ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗುವ ಸಾಧ್ಯತೆ. ಇಂದಿನ ಪಂದ್ಯಕ್ಕೆ ವಿರಾಟ್ ಕೊಹ್ಲಿ ಒಂದು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆಯಿದೆ.
1. ದೇವದತ್ ಪಡಿಕ್ಕಲ್: ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಗಮನ ಸೆಳೆದ ಕರ್ನಾಟಕದ ಯುವ ಪ್ರತಿಭೆ
2. ಆ್ಯರೋನ್ ಫಿಂಚ್: ಅನುಭವಿ ಆರಂಭಿಕ ಬ್ಯಾಟ್ಸ್‌ಮನ್. ಹೈದರಾಬಾದ್ ವಿರುದ್ಧ 29 ರನ್ ಗಳಿಸಿದ್ದರು.
3. ವಿರಾಟ್ ಕೊಹ್ಲಿ: ನಾಯಕ, ತಂಡದ ರನ್ ಮಷೀನ್
4. ಎಬಿ ಡಿವಿಲಿಯರ್ಸ್: ಆರ್‌ಸಿಬಿಯ ನಂಬಿಕಸ್ಥ ಬ್ಯಾಟ್ಸ್‌ಮನ್. ಮೊದಲ ಪಂದ್ಯದಲ್ಲಿಯೇ ಸ್ಫೋಟಕ ಅರ್ಧಶತಕ ಬಾರಿಸಿದ್ದರು.
5. ಶಿವಂ ದುಬೆ: ಆಲ್ರೌಂಡರ್. ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದರೂ, ಬೌಲಿಂಗ್‌ನಲ್ಲಿ 15 ರನ್ ನೀಡಿ 2 ವಿಕೆಟ್ ಪಡೆದಿದ್ದರು.
6. ಜೋಶ್ ಫಿಲಿಪ್ಪೆ: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅಷ್ಟೇನು ಅವಕಾಶ ಸಿಕ್ಕಿರಲಿಲ್ಲ. ಇಂದು ಮತ್ತೊಂದು ಚಾನ್ಸ್ ಸಿಗುವ ಸಾಧ್ಯತೆ.
7. ವಾಷಿಂಗ್ಟನ್ ಸುಂದರ್: ಆಲ್ರೌಂಡರ್. ಪವರ್ ಪ್ಲೇನಲ್ಲೂ ಬೌಲಿಂಗ್ ಮಾಡಿ ವಿಕೆಟ್ ಕಬಳಿಸಬಲ್ಲ ಆಫ್‌ಸ್ಪಿನ್ನರ್.
8. ನವದೀಪ್ ಸೈನಿ: ಡೆತ್ ಓವರ್ ಸ್ಪೆಷಲಿಸ್ಟ್, ಹೈದರಾಬಾದ್ ವಿರುದ್ಧ 2 ವಿಕೆಟ್ ಕಬಳಿಸಿ ಮಿಂಚಿದ್ದರು.
9. ಮೊಹಮ್ಮದ್ ಸಿರಾಜ್: ಮೊದಲ ಪಂದ್ಯದಲ್ಲಿ ಉಮೇಶ್ ಯಾದವ್ 4 ಓವರ್‌ನಲ್ಲಿ 48 ರನ್ ನೀಡಿ ದುಬಾರಿ ಆಗಿದ್ದರು. ಹೀಗಾಗಿ ಅವರ ಬದಲಿಗೆ ಮೊಹಮ್ಮದ್ ಸಿರಾಜ್‌ಗೆ ಅವಕಾಶ ಸಿಗುವ ಸಾಧ್ಯತೆ.
10. ಡೇಲ್ ಸ್ಟೇನ್: ಬಲಗೈ ಮಾರಕ ವೇಗಿ. ಮೊದಲ ಪಂದ್ಯದಲ್ಲಿ ಕೊಂಚ ದುಬಾರಿಯಾಗಿದ್ದರೂ ವಿಕೆಟ್ ಕಬಳಿಸುವ ಸಾಮರ್ಥ್ಯವಿರುವ ವೇಗದ ಬೌಲರ್.
11. ಯುಜುವೇಂದ್ರ ಚಹಲ್: ಚಾಣಾಕ್ಷ ಲೆಗ್ ಸ್ಪಿನ್ನರ್, ಹೈದರಾಬಾದ್ ವಿರುದ್ಧ ಪ್ರಮುಖ 3 ವಿಕೆಟ್ ಕಬಳಿಸಿ ಪಂದ್ಯದ ದಿಕ್ಕನ್ನೇ ಬದಲಿಸಿದ ಆಟಗಾರ.