ಹರ್ಭಜನ್ ಸಿಂಗ್ To ರವೀಂದ್ರ ಜಡೇಜಾ; IPLನಿಂದ ಬ್ಯಾನ್ ಆಗಿದ್ದ ಐವರು ಕ್ರಿಕೆಟರ್ಸ್!
ಐಪಿಎಲ್ ಕ್ರಿಕೆಟ್ ಹಲವು ಕ್ರಿಕೆಟ್ ಬಹುತೇಕಾ ಎಲ್ಲಾ ಕ್ರಿಕೆಟಿಗರಿಗೆ ಹೊಸ ಬದುಕು ಕಟ್ಟಿಕೊಟ್ಟಿದೆ. ಯುವ ಕ್ರಿಕೆಟಿಗರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಮಾತ್ರವಲ್ಲ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಅವಕಾಶ ಮಾಡಿಕೊಟ್ಟಿದೆ. ಆದರೆ ಇದೇ ಐಪಿಎಲ್ ಟೂರ್ನಿ ಹಲವರಿಗೆ ಮರೆಯಲಾಗದ ಕಹಿ ನೆನಪನ್ನು ಕಟ್ಟಿಕೊಟ್ಟಿದೆ. ಐಪಿಎಲ್‌ನಿಂದ ಬ್ಯಾನ್ ಆದ ಐವರು ಕ್ರಿಕೆಟರ್ ವಿವರ ಇಲ್ಲಿದೆ.
ಆಸ್ಟ್ರೇಲಿಯಾ ಕ್ರಿಕೆಟಿಗ ಲ್ಯೂಕ್ ಪೊಮರ್ಶ್‌ಬ್ಯಾಶ್ 2012ರಲ್ಲಿ ಐಪಿಎಲ್ ಟೂರ್ನಿಯಿಂದ ಬ್ಯಾನ್ ಆಗಿದ್ದಾರೆ
ಮಹಿಳೆ ನೀಡಿದ ಲೈಂಗಿಕ ಕಿರುಕುಳ ಹಾಗೂ ಹಲ್ಲೆ ದೂರಿನಿಂದ RCB ತಂಡದಲ್ಲಿದ್ದ ಲ್ಯೂಕ್ ಮೇಲೆ ನಿಷೇಧ ಹೇರಿದ್ದ IPL
2008ರ ಆವೃತ್ತಿಯಲ್ಲಿ ಕಾಣಿಸಿಕೊಂಡ ಪಾಕ್ ವೇಗಿ ಮೊಹಮ್ಮದ್ ಆಸಿಫ್ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿ ಬಿದ್ದು ಬ್ಯಾನ್ ಆಗಿದ್ದಾರೆ
2009ರ ಐಪಿಎಲ್‌ಗೆ ಆಸಿಫ್ ಆಲಿ ಬ್ಯಾನ್ ಮಾಡಲಾಯಿತು ಆದರೆ 2008 ಮುಂಬೈ ದಾಳಿ ಬಳಿಕ ಪಾಕ್ ಕ್ರಿಕೆಟಿಗರಿಗೆ ಐಪಿಎಲ್‌ನಿಂದ ನಿರ್ಬಂಧ ಹೇರಲಾಗಿದೆ
2008-09ರಲ್ಲಿ ರಾಜಸ್ಥಾನ ತಂಡದಲ್ಲಿ ರವೀಂದ್ರ ಜಡೇಜಾ 2010ರ ಐಪಿಎಲ್ ಟೂರ್ನಿಯಿಂದ ಬ್ಯಾನ್ ಆಗಿದ್ದರು
ರಾಜಸ್ಥಾನದಲ್ಲಿದ್ದುಕೊಂಡು ಬೇರೆ ಫ್ರಾಂಚೈಸಿ ಜೊತೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಕಾರಣಕ್ಕೆ ಜಡೇಜಾಗೆ ನಿಷೇಧ
2020ರ ಹರಾಜಿನಲ್ಲಿ ಕೆಕೆಆರ್ ತಂಡ 48 ವರ್ಷದ ಪ್ರವೀಣ್ ತಾಂಬೆ ಆಯ್ಕೆ ಮಾಡಿತ್ತು, ಆದರೆ ಈ ಬಾರಿಯ ಐಪಿಎಲ್‌ನಿಂದ ಬ್ಯಾನ್ ಆಗಿದ್ದಾರೆ
ತಾಂಬೆ ನಿವೃತ್ತಿ ಪಡೆದು ದುಬೈನ ಟಿ10 ಲೀಗ್ ಆಡಿದ ತಾಂಬೆ, ಟೂರ್ನಿ ಬಳಿಕ ನಿವೃತ್ತಿ ಹಿಂಪಡೆದು ಬಿಸಿಸಿಐ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬ್ಯಾನ್
2008ರ ಮೊದಲ ಐಪಿಎಲ್ ಆವೃತ್ತಿಯಲ್ಲಿ ವೇಗಿ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ ಕಾರಣಕ್ಕೆ ಹರ್ಭಜನ್ ಸಿಂಗ್‌ಗೆ ನಿಷೇಧ
2008 ಅಂತಿಮ ಪಂದ್ಯಗಳಿಂದ ಹಾಗೂ 5 ಏಕದಿನ ಪಂದ್ಯದಿಂದ ಭಜ್ಜಿಗೆ ನಿಷೇಧ