ಕೊರೋನಾ ನಡುವೆ ಆಯೋಜಿಸಿದ IPL 2020ಯಿಂದ BCCI ಗಳಿಸಿದ ಆದಾಯವೆಷ್ಟು?
ಐಪಿಎಲ್ 2020 ಟೂರ್ನಿ ಮುಗಿಸಿರುವ ಬಿಸಿಸಿಐ ಇದೀಗ ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ಟೂರ್ನಿಗೆ ಕಳುಹಿಸಿದೆ. ಕೊರೋನಾ ವೈರಸ್ ನಡುವೆ ಐಪಿಎಲ್ ಟೂರ್ನಿ ಆಯೋಜನೆ ಬಹುದೊಡ್ಡ ಸವಾಲಾಗಿತ್ತು. ಎಲ್ಲಾ ಕ್ರಿಕೆಟ್ ಟೂರ್ನಿಗಳು ರದ್ದಾಗಿತ್ತು. ಟಿ20 ವಿಶ್ವಕಪ್ ಟೂರ್ನಿಯನ್ನೇ ರದ್ದು ಮಾಡಲಾಗಿತ್ತು. ಈ ಕಠಿಣ ಸಂದರ್ಭದಲ್ಲಿ ಬಿಸಿಸಿಐ ಟೂರ್ನಿ ಆಯೋಜಿಸಿ ಯಶಸ್ವಿಯಾಗಿದೆ. ಈ ಬಾರಿಯ ಟೂರ್ನಿಯಿಂದ ಬಿಸಿಸಿಐ ಗಳಿಸಿದ ಆದಾಯವೆಷ್ಟು ಇಲ್ಲಿದೆ. ವಿವರ.
ಕೊರೋನಾ ವೈರಸ್ ಕಾರಣ ಹಲವು ಬಾರಿ ಮುಂದೂಡಿಕೆಯಾಗಿದ್ದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಯಾವುದೇ ಅಡೆ ತಡೆ ಇಲ್ಲದೆ ಯಶಸ್ವಿಯಾಗಿ ಮುಗಿಸಿದೆ
ಕೊರೋನಾ ವೈರಸ್ ನಡುವೆ, ಹಲವು ಮಾರ್ಗಸೂಚಿ, ನಿರ್ಬಂಧಗಳ ನಡುವೆ ಬಿಸಿಸಿಐ ಅಚ್ಚುಕಟ್ಟಾಗಿ ಟೂರ್ನಿ ಆಯೋಜಿಸಿದೆ. ಈ ಬಾರಿಯ ಟೂರ್ನಿಯಿಂದ ಬಿಸಿಸಿಐ 4,000 ಕೋಟಿ ಆದಾಯ ಗಳಿಸಿದೆ.
ಬಿಸಿಸಿಐ ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡಾ 35ರಷ್ಟು ಖರ್ಚು ವೆಚ್ಚವನ್ನು ಕಡಿಮೆ ಮಾಡಿದೆ. ಕೊರೋನಾ ಸಮಯದಲ್ಲಿ 4ಸಾವಿರ ಕೋಟಿ ಆದಾಯಗಳಿಸಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ದುಮಾಲ್ ಹೇಳಿದ್ದಾರೆ.
ಕೊರೋನಾ ಆತಂಕದ ಕಾರಣ ಭಾರತದಿಂದ ಸಂಪೂರ್ಣ ಟೂರ್ನಿಯನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಇದಕ್ಕಾಗಿ ಯುನೈಟೆಡ್ ಅರಬ್ ಕ್ರಿಕೆಟ್ ಮಂಡಳಿಗೆ 100 ಕೋಟಿ ರೂಪಾಯಿ ನೀಡಿದೆ.
ಕಳದೆ ಆವೃತ್ತಿಗಳಿಗೆ ಹೋಲಿಸಿದರೆ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಶೇಕಡಾ 25ರಷ್ಟು ಹೆಚ್ಚಳವಾಗಿದೆ. ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಉದ್ಘಾಟನಾ ಪಂದ್ಯ ದಾಖಲೆ ಪ್ರಮಾಣದ ವೀಕ್ಷಕರ ಸಂಖ್ಯೆ ಹೊಂದಿದೆ.
ಮುಂಬೈ ಇಂಡಿಯನ್ಸ್ ಟ್ರೋಫಿ ಗೆಲ್ಲೋ ಮೂಲಕ ಇತಿಹಾಸ ರಚಿಸಿದೆ. ಇತ್ತ ಬಿಸಿಸಿಐ ಅತ್ಯಂತ ಕಠಿಣ ಸಂದರ್ಭದಲ್ಲೂ ಟೂರ್ನಿ ಆಯೋಜಿಸುವ ಮೂಲಕ ವಿಶ್ವಕ್ಕೆ ದೊಡ್ಡಣ್ಣ ಎಂಬುದನ್ನು ಸಾರಿ ಹೇಳಿದೆ.
ಟೂರ್ನಿ ಆಯೋಜನೆಗೆ ಎಲ್ಲಾ ತಯಾರಿ ಮಾಡಿಕೊಂಡ ಬಿಸಿಸಿಐ ಅಂತಿಮ ಹಂತದಲ್ಲಿ ಆತಂಕಕ್ಕೆ ಒಳಗಾಗಿತ್ತು. ಟೆನಿಸ್ ದಿಗ್ಗಜ ನೋವಾಕ್ ಜೋಕೊವಿಚ್ ಕೊರೋನಾ ಪಾಸಿಟೀವ್ ಸುದ್ದಿ ತಿಳಿದಾಗ, ಆಟಗಾರರ ಆರೋಗ್ಯ ಕುರಿತು ಬಿಸಿಸಿಐ ಮತ್ತೆ ಸಭೆ ನಡೆಸಿತು.
ಐಪಿಎಲ್ ಟೂರ್ನಿ ವೇಳೆ ಬಿಸಿಸಿಐ 30,00 ಆರ್‌ಟಿಪಿಸಿಆರ್ ಕೊರೋನಾ ಟೆಸ್ಟ್ ಮಾಡಿಸಿದೆ. ಮುಂಜಾಗ್ರತ ಕ್ರಮವಾಗಿ ಬಿಸಿಸಿಐ ಹೆಚ್ಚುವರಿ 200 ಹೊಟೆಲ್ ಕೊಠಡಿಗಳನ್ನು ಬುಕ್ ಮಾಡಿತ್ತು.