ವಿಶ್ವದ ಟಾಪ್ 10 ಪವರ್‌ಫುಲ್ ಪಾಸ್‌ಪೋರ್ಟ್: ಸಿಂಗಾಪುರ ಮೊದಲ ಸ್ಥಾನದಲ್ಲಿದೆ! ಭಾರತಕ್ಕೆ ಎಷ್ಟನೆ ಸ್ಥಾನ?
ವಿಶ್ವದ ಅತಿ ಹೆಚ್ಚು ಪವರ್‌ಫುಲ್ ಪಾಸ್‌ಪೋರ್ಟ್‌ಗಳು ಯಾವುವು? ಒಂದು ದೇಶದ ಪಾಸ್‌ಪೋರ್ಟ್ ಎಷ್ಟು ಸ್ಟ್ರಾಂಗ್ ಅನ್ನೋದು ಅದು ಎಷ್ಟು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಲು ಅವಕಾಶ ಕೊಡುತ್ತೆ ಅನ್ನೋದರ ಮೇಲೆ ನಿರ್ಧಾರ ಆಗುತ್ತೆ. ಈ ಲಿಸ್ಟ್‌ನಲ್ಲಿ ವಿಶ್ವದ ಟಾಪ್ 10 ಪವರ್‌ಫುಲ್ ಪಾಸ್‌ಪೋರ್ಟ್‌ಗಳ ಬಗ್ಗೆ ತಿಳಿದುಕೊಳ್ಳೋಣ.
2025ರ ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ ಪ್ರಕಾರ, ಸಿಂಗಾಪುರ ವಿಶ್ವದ ಅತ್ಯಂತ ಪವರ್‌ಫುಲ್ ಪಾಸ್‌ಪೋರ್ಟ್ ಹೊಂದಿದೆ. ಸಿಂಗಾಪುರ ಪಾಸ್‌ಪೋರ್ಟ್‌ನೊಂದಿಗೆ 195 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ನಲ್ಲಿ ಜಪಾನ್ ಎರಡನೇ ಸ್ಥಾನದಲ್ಲಿದೆ. ಜಪಾನ್ ಪಾಸ್‌ಪೋರ್ಟ್‌ನೊಂದಿಗೆ 193 ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು.
ಫಿನ್‌ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ದಕ್ಷಿಣ ಕೊರಿಯಾ ಮತ್ತು ಸ್ಪೇನ್ ಮೂರನೇ ಸ್ಥಾನವನ್ನು ಹಂಚಿಕೊಳ್ಳುತ್ತವೆ. ಈ ಆರು ದೇಶಗಳ ಪಾಸ್‌ಪೋರ್ಟ್‌ಗಳಿಂದ 192 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್‌ಲ್ಯಾಂಡ್ಸ್, ನಾರ್ವೆ ಮತ್ತು ಸ್ವೀಡನ್ ನಾಲ್ಕನೇ ಸ್ಥಾನದಲ್ಲಿವೆ. ಈ ದೇಶಗಳ ಪಾಸ್‌ಪೋರ್ಟ್‌ಗಳಿಂದ 191 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಬೆಲ್ಜಿಯಂ, ನ್ಯೂಜಿಲೆಂಡ್, ಪೋರ್ಚುಗಲ್, ಸ್ವಿಟ್ಜರ್‌ಲ್ಯಾಂಡ್ ಮತ್ತು ಬ್ರಿಟನ್ ಐದನೇ ಸ್ಥಾನದಲ್ಲಿವೆ. ಈ ದೇಶಗಳ ಪಾಸ್‌ಪೋರ್ಟ್‌ಗಳಿಂದ 190 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಆಸ್ಟ್ರೇಲಿಯಾ ಮತ್ತು ಗ್ರೀಸ್ ಆರನೇ ಸ್ಥಾನದಲ್ಲಿವೆ. ಈ ದೇಶಗಳ ಪಾಸ್‌ಪೋರ್ಟ್‌ಗಳಿಂದ 189 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಕೆನಡಾ, ಮಾಲ್ಟಾ ಮತ್ತು ಪೋಲೆಂಡ್ ಏಳನೇ ಸ್ಥಾನದಲ್ಲಿವೆ. ಈ ದೇಶಗಳ ಪಾಸ್‌ಪೋರ್ಟ್‌ಗಳಿಂದ 188 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಯುಎಇ ಪಾಸ್‌ಪೋರ್ಟ್ ವಿಶ್ವದಲ್ಲೇ ಪವರ್‌ಫುಲ್
ಚೆಕ್ ಗಣರಾಜ್ಯ ಮತ್ತು ಹಂಗೇರಿ ಎಂಟನೇ ಸ್ಥಾನದಲ್ಲಿವೆ. ಈ ದೇಶಗಳ ಪಾಸ್‌ಪೋರ್ಟ್‌ಗಳಿಂದ 187 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಅಮೆರಿಕ ಮತ್ತು ಎಸ್ಟೋನಿಯಾ ಒಂಬತ್ತನೇ ಸ್ಥಾನದಲ್ಲಿವೆ. ಈ ದೇಶಗಳ ಪಾಸ್‌ಪೋರ್ಟ್‌ಗಳಿಂದ 186 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಲಾಟ್ವಿಯಾ, ಲಿಥುವೇನಿಯಾ, ಸ್ಲೊವೇನಿಯಾ ಮತ್ತು ಯುಎಇ ಹತ್ತನೇ ಸ್ಥಾನದಲ್ಲಿವೆ. ಈ ದೇಶಗಳ ಪಾಸ್‌ಪೋರ್ಟ್‌ಗಳಿಂದ 185 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು.
ಭಾರತ 85ನೇ ಸ್ಥಾನದಲ್ಲಿದೆ. ಕೇವಲ 57 ದೇಶಗಳಿಗೆ ಮಾತ್ರ ವೀಸಾ ಇಲ್ಲದೆ ಪ್ರಯಾಣಿಸಬಹುದು.