MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಪೆಟ್ರೋಲ್‌ನಲ್ಲಿ ಎಥೆನಾಲ್‌ ಮಿಶ್ರಣ ಏಕೆ ಅಗತ್ಯ? ಕೇಂದ್ರದಿಂದ 6 ಅಂಶಗಳ ಸ್ಪಷ್ಟನೆ

ಪೆಟ್ರೋಲ್‌ನಲ್ಲಿ ಎಥೆನಾಲ್‌ ಮಿಶ್ರಣ ಏಕೆ ಅಗತ್ಯ? ಕೇಂದ್ರದಿಂದ 6 ಅಂಶಗಳ ಸ್ಪಷ್ಟನೆ

ಪೆಟ್ರೋಲ್‌ಗೆ ಶೇ.20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಸರ್ಕಾರದ ನೀತಿಯ ಬಗ್ಗೆ ಇರುವ ಗೊಂದಲಗಳಿಗೆ ಈ ಲೇಖನ ಸ್ಪಷ್ಟನೆ ನೀಡುತ್ತದೆ. ಹಳೆಯ ವಾಹನಗಳ ಮೇಲಿನ ಪರಿಣಾಮ, ಮೈಲೇಜ್ ಬದಲಾವಣೆ ಮತ್ತು ಈ ಯೋಜನೆಯಿಂದಾಗುವ ಆರ್ಥಿಕ ಹಾಗೂ ಪರಿಸರ ಪ್ರಯೋಜನಗಳನ್ನು ಇದು ವಿವರಿಸುತ್ತದೆ.

1 Min read
Author : Kannadaprabha News
Published : Jul 11 2026, 08:11 AM IST
Share this Photo Gallery
  • FB
  • TW
  • Linkdin
  • Whatsapp
17
ಎಥೆನಾಲ್‌ ಮಿಶ್ರಣ ಏಕೆ ಅಗತ್ಯ?
Image Credit : X/Twitter

ಎಥೆನಾಲ್‌ ಮಿಶ್ರಣ ಏಕೆ ಅಗತ್ಯ?

ಪೆಟ್ರೋಲ್‌ಗೆ ಶೇ.20ರಷ್ಟು ಎಥೆನಾಲ್‌ ಮಿಶ್ರಣಗೊಳಿಸುವ ಕೇಂದ್ರ ಸರ್ಕಾರದ ನೀತಿಯ ಕುರಿತಾಗಿ ಜನರಲ್ಲಿ ಕೆಲವು ಗೊಂದಲಗಳು ಮೂಡಿವೆ. ಈ ಕುರಿತು ಜೂ.23ರಂದೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟೀಕರಣ ನೀಡಿದರೂ ಜನರಲ್ಲಿ ಕಳವಳ ಮುಂದುವರಿದಿದೆ. ಹೀಗಾಗಿ ಈ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಗೊಂದಲ ಪರಿಹಾರಕ್ಕೆ ಸರ್ಕಾರ ಯತ್ನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
1. ಭಾರತ ಎಥೆನಾಲ್‌ ಮಿಶ್ರಣವನ್ನು ಏಕೆ ವೇಗಗೊಳಿಸಿದೆ?
Image Credit : X/Twitter

1. ಭಾರತ ಎಥೆನಾಲ್‌ ಮಿಶ್ರಣವನ್ನು ಏಕೆ ವೇಗಗೊಳಿಸಿದೆ?

ಈ ಯೋಜನೆ ಮೋದಿ ಅವಧಿಯಲ್ಲಿ ಆರಂಭವಾಗಿದ್ದಲ್ಲ. 2001ರಲ್ಲೇ ಚಾಲನೆ ನೀಡಿ, 2004ರಲ್ಲಿ ಅಧಿಕೃತವಾಗಿ ಘೋಷಿಸಿ, 2006ರಲ್ಲಿ ಇ5 ಅನ್ನು ಹಲವಾರು ರಾಜ್ಯಗಳಲ್ಲಿ ಜಾರಿಗೊಳಿಸಲಾಯಿತು. 2013ರ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಯಿತು.

Related Articles

Related image1
Supreme Court: ಸುಪ್ರೀಂನಲ್ಲಿ ಹೈಡ್ರಾಮಾ; ಕಡತ ಗಾಳಿಯಲ್ಲಿ ತೂರಿ; ನಾನೇ ನಿಮಗೆ ಆದೇಶಿಸುತ್ತೇನೆ ಎಂದು ನ್ಯಾಯಾಧೀಶರಿಗೆ ಧಮ್ಕಿ ಹಾಕಿದ ಭೂಪ! ಮುಂದೆ ನಡೆದಿದ್ದೇನು?
Related image2
ಇ20 ಪೆಟ್ರೋಲಿಂದ ಮೈಲೇಜ್‌ ಕುಸಿತ ನಿಜ, ಆದ್ರೆ ಎಥನಾಲ್‌ ರಹಿತ ಪೆಟ್ರೋಲ್‌ ಕೊಡಲ್ಲ: ಕೇಂದ್ರ
37
2. ಗ್ರಾಹಕರು ಶುದ್ಧ ಪೆಟ್ರೋಲ್‌, ಇ10 ಹಾಗೂ ಇ20 ನಡುವೆ ಏಕೆ ಆಯ್ಕೆ ಮಾಡಿಕೊಳ್ಳಬಾರದು?
Image Credit : X/Twitter

2. ಗ್ರಾಹಕರು ಶುದ್ಧ ಪೆಟ್ರೋಲ್‌, ಇ10 ಹಾಗೂ ಇ20 ನಡುವೆ ಏಕೆ ಆಯ್ಕೆ ಮಾಡಿಕೊಳ್ಳಬಾರದು?

ಇ10 ಮತ್ತು ಇ20 ಪರಿಚಯಕ್ಕೂ ಮುನ್ನ ಆಟೋಮೊಬೈಲ್ ಕಂಪನಿಗಳೊಂದಿಗೆ ಪ್ರತಿ ಹಂತದಲ್ಲೂ ಸಮಾಲೋಚನೆ ನಡೆಸಲಾಗಿದೆ. ವಾಹನ ತಯಾರಕರು ಈ ಬಗ್ಗೆ ಸಂಪೂರ್ಣವಾಗಿ ತೃಪ್ತರಾಗಿರದಿದ್ದರೆ, ಅವರು ಎಥೆನಾಲ್‌ ಪರವಾಗಿ ನಿಲ್ಲುತ್ತಿರಲಿಲ್ಲ ಅಥವಾ ವಾಹನಗಳ ವಾರಂಟಿ ನೀಡುತ್ತಿರಲಿಲ್ಲ.

47
3. ಹಳೆಯ ವಾಹನಗಳ ಕಥೆಯೇನು?
Image Credit : X/Twitter

3. ಹಳೆಯ ವಾಹನಗಳ ಕಥೆಯೇನು?

ಮಾರುತಿ ಸುಜುಕಿ 2025-26ರಲ್ಲಿ 2.84 ಕೋಟಿ ವಾಹನಗಳಿಗೆ ಸರ್ವಿಸ್ ನೀಡಿದೆ. ಇದರಲ್ಲಿ 1.5 ಕೋಟಿ ಹಳೆಯ, ಇ20 ಪ್ರಮಾಣೀಕೃತವಲ್ಲದ ವಾಹನಗಳಿದ್ದವು. ಇ20ನಿಂದಾಗಿ ಕೊರೋಷನ್ ಅಥವಾ ಹಾನಿ ಆಗಿಲ್ಲ. ಹೀರೋ ಮೋಟೋಕಾರ್ಪ್‌ನಲ್ಲೂ ಇದೇ ಅನುಭವವಾಗಿದೆ.

57
4. ಇ20ಯಿಂದ ಮೈಲೇಜ್ ಕಡಿಮೆಯಾಗುತ್ತದೆಯೇ?
Image Credit : X/Twitter

4. ಇ20ಯಿಂದ ಮೈಲೇಜ್ ಕಡಿಮೆಯಾಗುತ್ತದೆಯೇ?

ಕೆಲವು ವಾಹನಗಳಲ್ಲಿ ಶೇ.3-5 ಮೈಲೇಜ್ ಕಡಿಮೆಯಾಗಬಹುದು. ಆದರೆ ಇ20 ಹೆಚ್ಚು ಆಕ್ಟೇನ್ ರೇಟಿಂಗ್, ಉತ್ತಮ ಪಿಕಪ್, ಸ್ಮೂತ್ ಆಕ್ಸೆಲರೇಷನ್, ಕಡಿಮೆ ಪಾರ್ಟಿಕ್ಯುಲೇಟ್ ಎಮಿಷನ್ ಮತ್ತು ಸುಮಾರು ಶೇ.40 ಕಾರ್ಬನ್ ಹೊರಸೂಸುವಿಕೆ ಕಡಿಮೆ ಮಾಡುತ್ತದೆ.

67
5. ಶುದ್ಧ ಪೆಟ್ರೋಲ್, ಇ10 ಮತ್ತು ಇ20 ಎಲ್ಲವನ್ನೂ ಏಕೆ ಒಟ್ಟಿಗೆ ಪೂರೈಕೆ ಮಾಡಬಾರದು?
Image Credit : Gemini AI

5. ಶುದ್ಧ ಪೆಟ್ರೋಲ್, ಇ10 ಮತ್ತು ಇ20 ಎಲ್ಲವನ್ನೂ ಏಕೆ ಒಟ್ಟಿಗೆ ಪೂರೈಕೆ ಮಾಡಬಾರದು?

ಪ್ರತ್ಯೇಕ ಸರಬರಾಜು ಮಾಡುವುದರಿಂದ ದೊಡ್ಡ ಲಾಜಿಸ್ಟಿಕ್ ಸವಾಲು ಎದುರಾಗುತ್ತದೆ. ನಿರ್ವಹಣೆ ಮತ್ತು ಕಾರ್ಯಾಚರಣೆಯ ವೆಚ್ಚವೂ ಹೆಚ್ಚುತ್ತದೆ.

77
6. ಇ20 ಮುಂದುವರಿಸುವುದು ಏಕೆ?
Image Credit : Getty

6. ಇ20 ಮುಂದುವರಿಸುವುದು ಏಕೆ?

ಎಥನಾಲ್ ಉತ್ಪಾದನೆಗೆ ಸಾರ್ವಜನಿಕ ಬ್ಯಾಂಕ್‌ಗಳು ಸುಮಾರು 1 ಲಕ್ಷ ಕೋಟಿ ರು. ಹೂಡಿಕೆ ಮಾಡಿವೆ. ರೈತರು, ಸಹಕಾರ ಸಂಸ್ಥೆಗಳು, ಉದ್ಯಮಿಗಳು ಹೂಡಿಕೆ ಮಾಡಿದ್ದಾರೆ. ಈಗ ಹಿಂದಕ್ಕೆ ಹೋಗುವುದು ಸಾಧ್ಯವಿಲ್ಲ. ಇ20 ಶುದ್ಧವಾದ ಮತ್ತು ಕಡಿಮೆ ಹೊರಸೂಸುವಿಕೆ, ಕಡಿಮೆ ಕಚ್ಚಾತೈಲ ಆಮದು, ರೈತರ ಆದಾಯ ಹೆಚ್ಚಳ ಮತ್ತು ದೇಶದ ಇಂಧನ ಶಕ್ತಿ ಸುರಕ್ಷತೆಗೆ ಕಾರಣವಾಗುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಪೆಟ್ರೋಲ್ ಬೆಲೆ
ನಿತಿನ್ ಗಡ್ಕರಿ
ಕೇಂದ್ರ ಸರ್ಕಾರ

Latest Videos
Recommended Stories
Recommended image1
ತೀವ್ರ ಬಿಸಿಲ ಅಪಾಯದಲ್ಲಿರೋ ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗಳೂರು; ಭಾರತದ 14 ನಗರಗಳು
Recommended image2
ಇ20 ಪೆಟ್ರೋಲಿಂದ ಮೈಲೇಜ್‌ ಕುಸಿತ ನಿಜ, ಆದ್ರೆ ಎಥನಾಲ್‌ ರಹಿತ ಪೆಟ್ರೋಲ್‌ ಕೊಡಲ್ಲ: ಕೇಂದ್ರ
Recommended image3
India Latest News Live: ತೀವ್ರ ಬಿಸಿಲ ಅಪಾಯದಲ್ಲಿರೋ ವಿಶ್ವದ ಟಾಪ್ 50 ನಗರಗಳಲ್ಲಿ ಬೆಂಗಳೂರು; ಭಾರತದ 14 ನಗರಗಳು
Related Stories
Recommended image1
Supreme Court: ಸುಪ್ರೀಂನಲ್ಲಿ ಹೈಡ್ರಾಮಾ; ಕಡತ ಗಾಳಿಯಲ್ಲಿ ತೂರಿ; ನಾನೇ ನಿಮಗೆ ಆದೇಶಿಸುತ್ತೇನೆ ಎಂದು ನ್ಯಾಯಾಧೀಶರಿಗೆ ಧಮ್ಕಿ ಹಾಕಿದ ಭೂಪ! ಮುಂದೆ ನಡೆದಿದ್ದೇನು?
Recommended image2
ಇ20 ಪೆಟ್ರೋಲಿಂದ ಮೈಲೇಜ್‌ ಕುಸಿತ ನಿಜ, ಆದ್ರೆ ಎಥನಾಲ್‌ ರಹಿತ ಪೆಟ್ರೋಲ್‌ ಕೊಡಲ್ಲ: ಕೇಂದ್ರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved