ಯುದ್ಧದ ವೇಳೆ ಭಾರತೀಯ ಸೇನೆ ಸಾವಿರಾರು ಕಾಂಡೋಮ್ ಆರ್ಡರ್ ಮಾಡಿದ್ದೇಕೆ? ಇವುಗಳ ಬಳಕೆಯಾಗಿದ್ದೆಲ್ಲಿ?
Indian Army order condoms: 1971ರ ಯುದ್ಧದಲ್ಲಿ ಭಾರತೀಯ ಸೇನೆ ಅಪಾರ ಪ್ರಮಾಣದಲ್ಲಿ ಕಾಂಡೋಮ್‌ಗಳನ್ನು ಏಕೆ ಆರ್ಡರ್ ಮಾಡಿತು?
ಭಾರತೀಯ ಸೇನೆ ತನ್ನ ಶೌರ್ಯ ಮತ್ತು ಯುದ್ಧದ ಕೌಶಲ್ಯತೆಯಿಂದಲೇ ಗುರುತಿಸಿಕೊಂಡಿದೆ. ಭಾರತದತ್ತ ಕಣ್ಣೆತ್ತಿ ನೋಡಿದ ವೈರಿ ರಾಷ್ಟ್ರಕ್ಕೆ ನಮ್ಮ ಸೈನಿಕರು ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದಾರೆ. ಇಂದಿಗೂ ಗಡಿಯಲ್ಲಿ ಮೊಂಡಾಟ ಮಾಡುವ ಪಾಕಿಸ್ತಾನ ತಕ್ಕ ಉತ್ತರವನ್ನು ನೀಡುತ್ತಲೇ ಬಂದಿದೆ.
ಇಂದು ನಾವು ನಿಮಗೆ ಭಾರತೀಯ ಸೇನೆಗೆ ಸಂಬಂಧಿಸಿದ ಕುತೂಹಲಕಾರಿ ವಿಷಯ ಹೇಳುತ್ತಿದ್ದೇವೆ. ಈ ವಿಷಯ ತಿಳಿದ್ರೆ ಒಂದು ಕ್ಷಣ ನೀವು ಶಾಕ್ ಆಗೋದು ಫಿಕ್ಸ್. ಏನು ಆ ವಿಷಯ?
ಪಾಕಿಸ್ತಾನದ ಜೊತೆಗಿಯ ಯುದ್ಧದ ಸಮಯದಲ್ಲಿ ಭಾರತೀಯ ಸೇನೆ ಅಪಾರ ಪ್ರಮಾಣದಲ್ಲಿ ಕಾಂಡೋಮ್‌ಗಳನ್ನು ಆರ್ಡರ್ ಮಾಡಿಕೊಂಡಿತ್ತು. ಯಾಕೆ ಇಷ್ಟು ಕಾಂಡೋಮ್ ಆರ್ಡರ್ ಮಾಡಿದ್ದು? ಇವುಗಳ ಬಳಕೆಯಾಗಿದ್ದು ಎಲ್ಲಿ ಗೊತ್ತಾ?
ಇದು 3ನೇ ಡಿಸೆಂಬರ್ 1971ರಂದು ನಡೆದ ಘಟನೆ. ಡಿಸೆಂಬರ್ 3ರಂದು ಆರಂಭವಾದ ಯದ್ಧ ಡಿಸೆಂಬರ್ 16ರವರೆಗೆ ನಡೆದಿತ್ತು. ಈ ಯುದ್ಧದಲ್ಲಿ ಪಾಕಸ್ತಾನದ ಸೇನೆ ಭಾರತದ ವಾಯುನೆಲೆಯನ್ನು (ಏರ್‌ಬೇಸ್) ಟಾರ್ಗೆಟ್ ಮಾಡಿಕೊಂಡಿತ್ತು.
ಮತ್ತೊಂದೆಡೆ ಭಾರತೀಯ ಸೇನೆ ತನ್ನ ತಂತ್ರಗಾರಿಕೆಯಂತೆ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿತ್ತು. ಭಾರತೀಯ ಸೇನೆ ಹಲವು ಕಡೆಗಳಿಂದ ಪಾಕಿಸ್ತಾನಿ ಸೈನಿಕರ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿಯೇ ಸಾವಿರಾರು ಕಾಂಡೋಮ್‌ಗಳನ್ನು ಆರ್ಡರ್ ಮಾಡಲಾಗಿತ್ತು.
ಭಾರತೀಯ ಸೇನೆ ಚಿತ್ತಗಾಂಗ್ ಬಂದರನ್ನು ಗುರಿಯಾಗಿಸಿಕೊಂಡಿತ್ತು. ಪಾಕಿಸ್ತಾನದ ಹಡಗುಗಳನ್ನು ಗುರಿಯಾಗಿಸುವುದು ಭಾರತೀಯ ಸೈನಿಕರ ಯೋಜನೆಯಾಗಿತ್ತು. ಆದರೆ ಈ ಹಡಗುಗಳನ್ನು ಉಡಾಯಿಸೋದು ಅಷ್ಟು ಸುಲಭವಾಗಿರಲಿಲ್ಲ.
ಯುದ್ಧದ ಸಮಯದಲ್ಲಿ ಹಡುಗಗಳನ್ನು ಸ್ಪೋಟಿಸಲು ಕೆಳಗೆ limpet mine ಎಂಬ ವಸ್ತುವನ್ನು ಇರಿಸಬೇಕಾಗುತ್ತಿತ್ತು. ಆದ್ರೆ ಇದು ಕೇವಲ 30 ನಿಮಿಷದಲ್ಲಿಯೇ ತುಂಡಾಗುತ್ತಿತ್ತು. ಈ ಸಮಸ್ಯೆಗೆ ತಾತ್ಕಲಿಕ ಪರಿಹಾರ ಕಂಡುಕೊಂಡಿದ್ದ ಸೇನೆ limpet mine ಬದಲಾಗಿ ಕಾಂಡೋಮ್ ಇರಿಸಿ ಸ್ಪೋಟಿಸಲು ನಡೆಸಲು ಸೂಚಿಸಲಾಗಿತ್ತು.
ವರದಿಗಳ ಪ್ರಕಾರ, ಇದಕ್ಕಾಗಿ ಭಾರತೀಯ ಸೇನೆ ಕಾಂಡೋಮ್‌ಗಳನ್ನು ಆರ್ಡರ್ ಮಾಡಿಕೊಂಡಿತ್ತು. ಮಿಷನ್ ಅಡಿಯಲ್ಲಿ ಪಾಕಿಸ್ತಾನದ ಹಡಗುಗಳನ್ನು ಸ್ಫೋಟಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯೂ ಪ್ರಮುಖ ಪಾತ್ರ ವಹಿಸಿತ್ತು.