ಹಲಾಲ್ ಟ್ಯಾಗ್ ಎಂದರೇನು? ಉತ್ತರ ಪ್ರದೇಶ ಸರ್ಕಾರ ನಿಷೇಧಿಸಿದ್ದೇಕೆ ನೋಡಿ..
ಯೋಗಿ ಆದಿತ್ಯನಾಥ್ ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಹಲಾಲ್ ಪ್ರಮಾಣೀಕರಣದೊಂದಿಗೆ ಆಹಾರ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟ ನಿಷೇಧಿಸಿದೆ. ಕಾರಣ ಇಲ್ಲಿದೆ..
ಹಲಾಲ್ ಟ್ಯಾಗ್ ಹೊಂದಿರುವ ಉತ್ಪನ್ನಗಳನ್ನು ನಿಷೇಧಿಸುವ ಉತ್ತರ ಪ್ರದೇಶ ಸರ್ಕಾರದ ಕ್ರಮವು ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ ಹಲಾಲ್ ಪ್ರಮಾಣೀಕರಣದೊಂದಿಗೆ ಆಹಾರ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟ ನಿಷೇಧಿಸಿದೆ. ಆದರೂ, ಈ ಆದೇಶವು ರಫ್ತಿಗಾಗಿ ತಯಾರಿಸಿದ ಉತ್ಪನ್ನಗಳಿಗೆ ವಿನಾಯಿತಿ ನೀಡುತ್ತದೆ.
ಹಲಾಲ್ ಎಂದರೇನು?
ಹಲಾಲ್ ಅಂದ್ರೆ ಅರೇಬಿಕ್ ಪದವಾಗಿದ್ದು, ಅನುಮತಿ ಎಂದರ್ಥ. ಇಸ್ಲಾಮಿಕ್ ನಂಬಿಕೆ ವ್ಯವಸ್ಥೆಯ ಗೋಳದೊಳಗೆ, ಇದು "ಹರಾಮ್" ಅಂದರೆ "ನಿಷೇಧಿತ"ಕ್ಕೆ ವಿರುದ್ಧವಾಗಿದೆ. ಮುಸ್ಲಿಮರಿಗೆ, ಹಲಾಲ್ ಹೆಚ್ಚಾಗಿ ಆಹಾರ ಪದ್ಧತಿಗೆ ಸಂಬಂಧಿಸಿದೆ, ವಿಶೇಷವಾಗಿ ಮಾಂಸದ ಸಂಸ್ಕರಣೆ ವಿಚಾರದಲ್ಲಿ. ಮುಸ್ಲಿಮರು ಸೇವಿಸದ ಪ್ರಾಣಿಗಳ ಉಪ-ಉತ್ಪನ್ನಗಳನ್ನು ಒಳಗೊಂಡಿರುವ ಹಲವಾರು ರೀತಿಯ ಸೌಂದರ್ಯವರ್ಧಕಗಳು ಮತ್ತು ಔಷಧಿಗಳನ್ನು ಸಹ ಹಲಾಲ್ ಪ್ರಮಾಣೀಕರದಡಿ ನಿಷೇಧಿಸಲಾಗಿದೆ.
ಯಾವುದಕ್ಕೆ ನಿಷೇಧ, ಯಾವುದಕ್ಕೆ ಇಲ್ಲ?
ಹಂದಿಮಾಂಸವು ಖುರಾನ್‌ನಿಂದ ನಿರ್ದಿಷ್ಟವಾಗಿ ನಿಷೇಧಿಸಲ್ಪಟ್ಟ ಏಕೈಕ ಮಾಂಸವಾಗಿದೆ. ಆದರೆ ಪ್ರಾಣಿಗಳ ಮಾಂಸವು ಹಲಾಲ್ ಚೆಕ್ ಪಾಸಾಗಲು, ಇಸ್ಲಾಮಿಕ್ ಕಾನೂನಿಗೆ ಅನುಗುಣವಾಗಿ ಸಂಸ್ಕರಿಸಿ ಸಂಗ್ರಹಿಸಬೇಕಾಗುತ್ತದೆ. ಹಲಾಲ್ ಮಾಂಸದ ಮಾನದಂಡವು ಪ್ರಾಣಿಗಳ ಸಾವಿನ ವಿಧಾನವನ್ನು ಒಳಗೊಂಡಿದೆ. ಸಸ್ಯಾಹಾರಿ ಭಕ್ಷ್ಯಗಳು ಆಲ್ಕೋಹಾಲ್ ಅನ್ನು ಹೊಂದಿರದ ಹೊರತು ಸಾಮಾನ್ಯವಾಗಿ ಹಲಾಲ್ ಎಂದು ಪರಿಗಣಿಸಲಾಗುತ್ತದೆ.
what is Halal
ಈ ನಿಷೇಧವು ಸೌಂದರ್ಯವರ್ಧಕ ಮತ್ತು ಔಷಧಿಗಳಿಗೂ ಇದೆ. ಅವುಗಳಲ್ಲಿ ಹಲವು ಪ್ರಾಣಿಗಳ ಉಪ - ಉತ್ಪನ್ನಗಳನ್ನು ಒಳಗೊಂಡಿರುತ್ತವೆ. ಆದರೂ ಒಬ್ಬ ಮುಸಲ್ಮಾನನು ಹಲಾಲ್ ಅಲ್ಲದ ಆಹಾರ ಪದಾರ್ಥ ಸೇವನೆ ಮಾಡ್ಬೇಕು ಅಂದ್ರೆ ಹಸಿವಿನಿಂದ ಸಾಯುವಾಗ ಮಾತ್ರ ಅನುಮತಿಸಲಾಗಿದೆ.
ಹಲಾಲ್ ಮಾಂಸ ಹೇಗೆ ಭಿನ್ನವಾಗಿದೆ?
ಹಲಾಲ್ ಉತ್ಪನ್ನಗಳ ಮೇಲ್ವಿಚಾರಣೆ ಮತ್ತು ಪ್ರಮಾಣೀಕರಣದಲ್ಲಿ ತೊಡಗಿರುವ ಬಹು ಜಾಗತಿಕ ಸಂಸ್ಥೆಗಳು ಆಹಾರ ಪದಾರ್ಥವನ್ನು ಹಲಾಲ್ ಎಂದು ಪರಿಗಣಿಸುವ ಮಾನದಂಡಗಳಿಗೆ ಮಾರ್ಗಸೂಚಿಗಳನ್ನು ರೂಪಿಸುತ್ತವೆ. ಹಲಾಲ್ ಮಾಂಸವಾಗಿ ಅರ್ಹತೆ ಪಡೆಯಲು ಪ್ರಾಣಿ ಹತ್ಯೆಯ ಸಮಯದಲ್ಲಿ ಜೀವಂತವಾಗಿರಬೇಕು ಎಂದು ಐರಿಶ್ ಪ್ರಮಾಣೀಕರಣ ಸಂಸ್ಥೆಯಾದ ಹಲಾಲ್ ಪ್ರಮಾಣೀಕರಣ ಇಲಾಖೆ ಹೇಳುತ್ತದೆ.
ವಧೆ ಮಾಡುವ ವಿಧಾನದ ಪರಿಭಾಷೆಯಲ್ಲಿ ಹಲವಾರು ಇತರ ಮಾನದಂಡಗಳ ಹೊರತಾಗಿ, ವಿವೇಕಯುತ ವಯಸ್ಕ ಮುಸ್ಲಿಮರಿಂದ ವಧೆಗೊಳಗಾದ ಪ್ರಾಣಿ ಮಾತ್ರ ಹಲಾಲ್ ಆಗಿರುತ್ತದೆ, ಅಂದರೆ ಮುಸ್ಲಿಮೇತರರಿಂದ ಸಂಸ್ಕರಿಸಿದ ಮಾಂಸವು ಹರಾಮ್ ಆಗಿರುತ್ತದೆ ಎಂದು ನಿಯಮಗಳು ಹೇಳುತ್ತವೆ. ಯಂತ್ರಗಳಲ್ಲಿ ಕೊಲ್ಲಲ್ಪಟ್ಟ ಪ್ರಾಣಿಗಳು ಅರ್ಹತೆ ಪಡೆಯುವುದಿಲ್ಲ.
ಭಾರತದಲ್ಲಿ ಹಲಾಲ್ ಪ್ರಮಾಣೀಕರಣ
ಭಾರತವು ಕಡ್ಡಾಯ ಹಲಾಲ್ ಪ್ರಮಾಣೀಕರಣ ವ್ಯವಸ್ಥೆ ಹೊಂದಿಲ್ಲ ಮತ್ತು ಆಮದು ಮಾಡಿಕೊಳ್ಳುವ ಹಲಾಲ್ ಆಹಾರ ಉತ್ಪನ್ನಗಳಿಗೆ ಯಾವುದೇ ನಿರ್ದಿಷ್ಟ ಲೇಬಲಿಂಗ್ ಅವಶ್ಯಕತೆಗಳಿಲ್ಲ. ಆದರೆ, ಕೆಲವು ಖಾಸಗಿ ಕಂಪನಿಗಳು ಹಲಾಲ್ ಪ್ರಮಾಣೀಕರಣವನ್ನು ನೀಡುತ್ತವೆ.
ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಮಂಡಳಿಯಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪ್ರಮಾಣಪತ್ರವನ್ನು ಹೊಂದಿರುವ ಸೌಲಭ್ಯದಲ್ಲಿ ಸಂಸ್ಕರಿಸಿ ಪ್ಯಾಕ್ ಮಾಡಿದರೆ ಮಾತ್ರ ಮಾಂಸ ಉತ್ಪನ್ನಗಳನ್ನು 'ಹಲಾಲ್ ಪ್ರಮಾಣೀಕೃತ' ಎಂದು ರಫ್ತು ಮಾಡಲು ಅನುಮತಿಸಲಾಗುವುದು ಎಂದು ವಾಣಿಜ್ಯ ಸಚಿವಾಲಯ ಈ ವರ್ಷದ ಆರಂಭದಲ್ಲಿ ಹೇಳಿದೆ.
ಯುಪಿ ಹಲಾಲ್ ನಿಷೇಧಿಸಿದ್ದೇಕೆ?
ಆಹಾರ ಉತ್ಪನ್ನಗಳ ಹಲಾಲ್ ಪ್ರಮಾಣೀಕರಣವು ಗೊಂದಲವನ್ನು ಸೃಷ್ಟಿಸುವ ಸಮಾನಾಂತರ ವ್ಯವಸ್ಥೆಯಾಗಿದೆ ಮತ್ತು ಆಹಾರ ಕಾನೂನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯ ಸೆಕ್ಷನ್ 89 ರ ಅಡಿಯಲ್ಲಿ ಸಮರ್ಥನೀಯವಲ್ಲ ಎಂದು ಯುಪಿ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಹಲಾಲ್ ಪ್ರಮಾಣಪತ್ರ ಹೊಂದಿರದ ಉತ್ಪನ್ನಗಳ ಕಡಿಮೆ ಮಾರಾಟ ಸಂಭಾವ್ಯ ಪಿತೂರಿಯನ್ನು ಆರೋಪಿಸಿದ ದೂರಿನ ಬಳಿಕ ಯುಪಿ ಸರ್ಕಾರ ಈ ಆದೇಶ ನೀಡಿದೆ. ಇದರಿಂದ ಇತರ ಸಮುದಾಯಗಳ ವ್ಯಾಪಾರ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದುರುದ್ದೇಶಪೂರಿತ ಪ್ರಯತ್ನವು ಸಾಮಾನ್ಯ ನಾಗರಿಕರಿಗೆ ಉದ್ದೇಶಿಸಲಾದ ವಸ್ತುಗಳಿಗೆ ಹಲಾಲ್ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಅನ್ಯಾಯದ ಆರ್ಥಿಕ ಪ್ರಯೋಜನಗಳನ್ನು ಪಡೆಯುವುದು ಮಾತ್ರವಲ್ಲದೆ ವರ್ಗ ದ್ವೇಷವನ್ನು ಬಿತ್ತಲು, ಸಮಾಜದಲ್ಲಿ ಒಡಕುಗಳನ್ನು ಸೃಷ್ಟಿಸಲು ಮತ್ತು ದೇಶವನ್ನು ದುರ್ಬಲಗೊಳಿಸಲು ಪೂರ್ವ ಯೋಜಿತ ಕಾರ್ಯತಂತ್ರದ ಭಾಗವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.