- Home
- News
- India News
- ಪಿಎಂ ಸಿಎಂ ಅಲ್ಲ, ನಾನು ನಿಮ್ಮ ಕುಟುಂಬ ಸದಸ್ಯ, ದಾವೂದಿ ಬೋಹ್ರಾ ಕ್ಯಾಂಪಸ್ ಉದ್ಘಾಟಿಸಿ ಮೋದಿ ಭಾಷಣ!
ಪಿಎಂ ಸಿಎಂ ಅಲ್ಲ, ನಾನು ನಿಮ್ಮ ಕುಟುಂಬ ಸದಸ್ಯ, ದಾವೂದಿ ಬೋಹ್ರಾ ಕ್ಯಾಂಪಸ್ ಉದ್ಘಾಟಿಸಿ ಮೋದಿ ಭಾಷಣ!
ಮುಂಬೈನಲ್ಲಿ ದಾವೂದಿ ಬೋಹ್ರಾ ಮುಸ್ಲಿಮ್ ಸಮುದಾಯದ ಶಿಕ್ಷಣ ಸಂಸ್ಥೆಯ ಹೊಸ ಕ್ಯಾಂಪಸ್‌ನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ವೇಳೆ ದಾವುದಿ ಬೋಹ್ರಾ ಸಮುದಾಯ ಜೊತೆಗೆ ತಮಗಿರುವ ಸುದೀರ್ಘ ನಂಟನ್ನು ನೆನೆಪಿಸಿದ್ದಾರೆ. ಇಷ್ಟೇ ಅಲ್ಲ ದಾವುದಿ ಬೋಹ್ರಾ ಸಮುದಾಯದಲ್ಲಿ ನಾನೂ ಓರ್ವ ಸದಸ್ಯ ಎಂದಿದ್ದಾರೆ. ಮೋದಿ ಭಾಷಣದ ವಿವರ ಇಲ್ಲಿದೆ.

ನಿಮ್ಮ ಹತ್ತಿರ ಬರುವುದು ನನಗೆ ಕುಟುಂಬಕ್ಕೆ ಬಂದ ಸಂತಸ ಆಗುತ್ತಿದೆ. ನೀವು ಹಾಕಿದ ವಿಡಿಯೋ ನೋಡಿದೆ. ಇದರಲ್ಲಿ ಪ್ರತಿ ಬಾರಿ ನೀವು ಪ್ರಧಾನಿ, ಅಂದಿನ ಮುಖ್ಯಮಂತ್ರಿ ಎಂದು ಹಲವು ಬಾರಿ ಹೇಳಿದ್ದಾರೆ. ಸಾಧ್ಯವಾದರೆ ಈ ವಿಡಿಯೋದಿಂದ ಪಿಎಂ ಸಿಎಂ ತೆಗೆದು ಹಾಕಿ. ನಾನು ನಿಮ್ಮ ಕುಟುಂಬ ಸದಸ್ಯ ಎಂದು ಮೋದಿ ಹೇಳಿದ್ದಾರೆ.
ಈ ಸೌಭಾಗ್ಯ ಕೆಲವೇ ಕೆಲವರಿಗೆ ಮಾತ್ರ ಲಭಿಸಿದೆ. ಈ ಪರಿವಾರದ ನಾಲ್ಕು ತಲೆಮಾರು ಜೊತೆ ಆತ್ಮೀಯ ಸಂಬಂಧ ಹೊಂದಿದ್ದೇನೆ. ವಿಶೇಷ ಅಂದರೆ ಈ ನಾಲ್ಕು ತಲೆಮಾರಿನ ಮುಖಂಡರು ನನ್ನ ಮನೆಗೆ ಆಗಮಿಸಿದ್ದಾರೆ. ನಾನು ನಿಮ್ಮ ಪರಿಪಾರದ ಸದಸ್ಯ. ಹೀಗಾಗಿ ಈ ಪರಿವಾರಕ್ಕೆ ಭೇಟಿ ನೀಡುವ ಸಂದರ್ಭ ನನ್ನ ಸಂತಸ ಇಮ್ಮಡಿಗೊಂಡಿದೆ ಎಂದರು.
ಸಮಯದಾಯ ಜೊತೆ ಪರಿವರ್ತನೆ ಹಾಗೂ ಅಭಿವೃದ್ಧಿ ಚಿಂತನೆ ಮಾಡುವಲ್ಲಿ ದಾವುದಿ ಬೋಹ್ರಾ ಸಮುದಾಯ ಮುಂಚೂಣಿಯಲ್ಲಿದೆ. ಇಂದು ಅಲ್ಜಮಯ ತಸ್ ಸೈಫಿಯಾ ಶಿಕ್ಷಣ ಕ್ಯಾಂಪಸ್ ವಿಸ್ತರಣೆ ಇದಕ್ಕೆ ಊದಾಹರಣೆಯಾಗಿದೆ.
ದಾವುದಿ ಬೋಹ್ರಾ ಸಮುದಾಯ ಹಾಗೂ ನನ್ನ ನಡುವಿನ ಸಂಬಂಧಕ್ಕೆ ಸುದೀರ್ಘ ಇತಿಹಾಸವಿದೆ. ಒಂದು ಬಾರಿ ದಾವುದಿ ಬೋಹ್ರಾ ಕ್ಯಾಂಪಸ್‌ಗೆ ಬೇಟಿ ನೀಡಿದಾಗ ಸಮುದಾಯದ ಮುಖಂಡರ ವಯಸ್ಸು 99. ಅವರ ಕಮಿಟ್‌ಮೆಂಟ್ ಅಂದರೆ 99ರ ಇಳಿವಯಸ್ಸಿನಲ್ಲೂ ಮಕ್ಕಳಿಗೆ ಪಾಠ ಮಾಡುತ್ತಿದ್ದರು. 1000 ಮಕ್ಕಳು ಕುಳಿತು ಕೇಳುತ್ತಿದ್ದರು. ಈ ದೃಶ್ಯ ನಾನು ಯಾವತ್ತೂ ಮರೆಯುವುದಿಲ್ಲ ಎಂದರು.
ಕುಪೋಶಣೆಯಿಂದ ಜಲಸಂರಕ್ಷಣೆ ಅಭಿಯಾನದ ವರೆಗೆ ಸಮಾಜ ಹಾಗೂ ಸರ್ಕಾರ ಜೊತೆಯಾಗಿ ಹೇಗೆ ಕೆಲಸ ಮಾಡುತ್ತದೆ ಎಂದು ಗುಜರಾತ್ ದಾವುದಿ ಬೋಹ್ರಾ ತೋರಿಸಿಕೊಟ್ಟಿದೆ. ಇದರಿಂದ ಗುಜರಾತ್‌ನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ದಾವುದಿ ಬೋಹ್ರಾ ಸಮುದಾಯ ಸಾಥ್ ನೀಡಿದೆ ಎಂದರು.
ವಿದೇಶದಲ್ಲೂ ಯಾವುದೇ ಭಾಗಕ್ಕೂ ತೆರಳಿದರೂ ದಾವುದಿ ಬೋಹ್ರಾ ಸಮುದಾಯ ಸದಸ್ಯರು ಭೇಟಿ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕೆಲವೊಮ್ಮೆ ಅತೀವ ಚಳಿಯಲ್ಲೂ ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತ ಕೋರಿದ್ದಾರೆ. ಈ ವೇಳೆ ನೀವು ಬಂದ್ದಿದ್ದೀರಿ. ಹಾಗಾಗಿ ನಾವು ಬಂದಿದ್ದೇವೆ ಎಂದಿದ್ದಾರೆ ಎಂದು ಮೋದಿ ಹೇಳಿದರು.
ಭಾರತ ಇನ್ನೂ ಸ್ವಾತಂತ್ರ್ಯಗೊಂಡಿರಲಿಲ್ಲ. ಗಲಾಮಿ ಸಂಸ್ಕೃತಿಯಲ್ಲಿದ್ದ ಭಾರತದಲ್ಲಿ ಅಂದೇ ದಾವುದಿ ಬೋಹ್ರಾ ಸಮುದಾಯ ಶಿಕ್ಷಣಕ್ಕೆ ಮಹತ್ವ ನೀಡಿತ್ತು. ಇಂದು ಅಜಾದಿಕಾ ಅಮೃತ ಮಹೋತ್ಸವ ಕಾಲದಲ್ಲಿ ಈ ಸಮುದಾಯ ಶಿಕ್ಷಣ ಕೊಡುಗೆ ಮತ್ತಷ್ಟು ಹೆಚ್ಚಾಗಿದೆ.
ಮಹಾತ್ಮಾ ಗಾಂಧಿ ದಾಂಡಿ ಉಪ್ಪಿನ ಯಾತ್ರೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ತಿರುವು ನೀಡಿದ ಆಂದೋಲನವಾಗಿದೆ. ದಾಂಡಿ ಯಾತ್ರೆ ಆರಂಭಕ್ಕೂ ಮೊದಲು ಗಾಂಧಿ ದಾಂಡಿಯಲ್ಲಿರುವ ದಾವುದಿ ಬೋಹ್ರಾ ಸಮುದಾಯದ ಸೈಯದ್ ಸಾಬ್ ಮನೆಯಲ್ಲಿ ಉಳಿದುಕೊಂಡಿದ್ದರು. ನಾನು ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ದಾವುದಿ ಸಮುದಾಯದ ಸೈಯದ್ ಸಾಬ್ ಅವರಲ್ಲಿ ಮನವಿ ಮಾಡಿದೆ. ನನಗೆ ಮರುಮಾತಿಲ್ಲದೇ ಈ ಮನೆ ಕೊಟ್ಟಿದ್ದಾರೆ. ಈಗ ನೀವು ದಾಂಡಿಗೆ ತೆರಳಿ ನೋಡಿ, ಅತೀ ದೊಡ್ಡ ಸ್ಮಾರಕ ನಿರ್ಮಾಣವಾಗಿದೆ ಎಂದು ಮೋದಿ ಹೇಳಿದರು.