MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಸನಾತನ ಧರ್ಮ ನಿರ್ಮೂಲನೆ ಮಾಡಲೆಂದೇ ನಾವು ಹುಟ್ಟಿದ್ದು; ನಾಲಿಗೆ ಹರಿ ಬಿಟ್ಟ ಸಿಎಂ ವಿಜಯ್ ಜೋಸೆಫ್ ಪಕ್ಷದ ಶಾಸಕ ಮುಸ್ತಫಾ

ಸನಾತನ ಧರ್ಮ ನಿರ್ಮೂಲನೆ ಮಾಡಲೆಂದೇ ನಾವು ಹುಟ್ಟಿದ್ದು; ನಾಲಿಗೆ ಹರಿ ಬಿಟ್ಟ ಸಿಎಂ ವಿಜಯ್ ಜೋಸೆಫ್ ಪಕ್ಷದ ಶಾಸಕ ಮುಸ್ತಫಾ

ತಮಿಳುನಾಡಿನಲ್ಲಿ ಸನಾತನ ಧರ್ಮ ನಿರ್ಮೂಲನೆ ಕುರಿತ ಉದಯನಿಧಿ ಸ್ಟಾಲಿನ್ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಇದಕ್ಕೆ ಟಿವಿಕೆ ಶಾಸಕ ಮುಸ್ತಫಾ ಬೆಂಬಲ ಸೂಚಿಸಿದ್ದು, ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ರಾಜಕೀಯ ಸಂಘರ್ಷವು ರಾಜ್ಯದಲ್ಲಿ ಚರ್ಚೆಯ ಬಿರುಗಾಳಿಯನ್ನೇ ಎಬ್ಬಿಸಿದೆ.

2 Min read
Author : Gowthami K
Published : May 14 2026, 04:04 PM IST
Share this Photo Gallery
  • FB
  • TW
  • Linkdin
  • Whatsapp
16
ಸನಾತನ ಧರ್ಮ ನಿರ್ಮೂಲನೆ ವಿವಾದ
Image Credit : Asianet News

ಸನಾತನ ಧರ್ಮ ನಿರ್ಮೂಲನೆ ವಿವಾದ

ತಮಿಳುನಾಡಿನಲ್ಲಿ ಸನಾತನ ಧರ್ಮ ಕುರಿತ ಹೇಳಿಕೆಗಳು ರಾಜಕೀಯ ವಾತಾವರಣವನ್ನು ಮತ್ತೊಮ್ಮೆ ಕಾವು ಕೊಡುತ್ತಿವೆ. ತಮಿಳು ನಟ, ರಾಜಕೀಯ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿ ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಇತ್ತೀಚೆಗೆ ತಮಿಳುನಾಡು ಸದನದಲ್ಲೇ ಹೇಳಿದ್ದರು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ತಮಿಳು ನಟ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಕೂಡ ಬೆಂಬಲ ನೀಡಿದ್ದರು. ಇದೀಗ ಆಡಳಿತ ಪಕ್ಷವಾದ ಟಿವಿಕೆಯ ವಿ.ಎಂ.ಎಸ್. ಮುಸ್ತಫಾ ನೀಡಿದ ಹೇಳಿಕೆ ಹಾಗೂ ಅದಕ್ಕೆ ಬೆಂಬಲವಾಗಿ ವ್ಯಕ್ತವಾದ ಅಭಿಪ್ರಾಯಗಳು ಭಾರೀ ಚರ್ಚೆಗೆ ಕಾರಣವಾಗಿವೆ.

Add Asianetnews Kannada as a Preferred SourcegooglePreferred
26
ಟಿವಿಕೆ ಶಾಸಕ ಮುಸ್ತಫಾ ಹೇಳಿಕೆಯಿಂದ ವಿವಾದ
Image Credit : Asianet News

ಟಿವಿಕೆ ಶಾಸಕ ಮುಸ್ತಫಾ ಹೇಳಿಕೆಯಿಂದ ವಿವಾದ

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ವಿ.ಎಂ.ಎಸ್. ಮುಸ್ತಫಾ, ತಮ್ಮ ಪಕ್ಷವು ಪೆರಿಯಾರ್ ಇವಿ ರಾಮಸಾಮಿ ಹಾಗೂ ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸುತ್ತಿದ್ದು ಸನಾತನ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಹೋರಾಟಕ್ಕೆ ನಾವು ಕೂಡ ಪ್ರವೇಶಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಮಧುರೈ ಕೇಂದ್ರ ಕ್ಷೇತ್ರದಿಂದ ಆಯ್ಕೆಯಾದ ಮುಸ್ತಫಾ, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಮಾಜದಲ್ಲಿ ಅಸಮಾನತೆ ಉಂಟುಮಾಡುವ ವ್ಯವಸ್ಥೆಗಳ ವಿರುದ್ಧ ಹೋರಾಡುವುದು ನಮ್ಮ ಉದ್ದೇಶ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ತಕ್ಷಣವೇ ರಾಜಕೀಯ ವಲಯದಲ್ಲಿ ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಯಿತು.

Related Articles

Related image1
ಜನರನ್ನು ಬೇರ್ಪಡಿಸುವ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು: ಶಾಸಕ ಉದಯನಿಧಿ ಸ್ಟಾಲಿನ್
Related image2
ಸನಾತನ ಧರ್ಮ ಸ್ವೀಕರಿಸಿದ ಮೊಹಮ್ಮದ್ ಶೆಹಝಾದ್ ಕುಟುಂಬ, ಹರಿದ್ವಾರದಲ್ಲಿ ಧಾರ್ಮಿಕ ಕಾರ್ಯ
36
ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬೆಂಬಲ
Image Credit : X

ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಬೆಂಬಲ

ಉದಯನಿಧಿ ಸ್ಟಾಲಿನ್ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಬೆಂಬಲವಾಗಿ ಮುಸ್ತಫಾ ಅವರ ಹೇಳಿಕೆ ಇದೆ. ಉದಯನಿಧಿ ಸ್ಟಾಲಿನ್, “ಜನರನ್ನು ವಿಭಜಿಸುವ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎಂದು ತಮಿಳುನಾಡು ವಿಧಾನಸಭೆಯಲ್ಲಿ ಹೇಳಿದ್ದರು. ಅವರ ಈ ಹೇಳಿಕೆ ಈಗಾಗಲೇ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಮುಸ್ಲಿಂ ಸಮುದಾಯದ ನಾಯಕ ಮುಸ್ತಫಾ ಅವರು ಉದಯನಿಧಿ ಸ್ಟಾಲಿನ್ ಅವರು ಹೇಳಿಕೆಯನ್ನು ಬೆಂಬಲಿಸಿ ಮಾತನಾಡಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

46
ಬಿಜೆಪಿ ನಾಯಕರಿಂದ ತೀವ್ರ ವಿರೋಧ
Image Credit : X

ಬಿಜೆಪಿ ನಾಯಕರಿಂದ ತೀವ್ರ ವಿರೋಧ

ಈ ಹೇಳಿಕೆಗಳಿಗೆ ಭಾರತೀಯ ಜನತಾ ಪಕ್ಷ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಕ್ತಾರರು ಹಾಗೂ ರಾಜ್ಯ ನಾಯಕರು, ಈ ಹೇಳಿಕೆಗಳು ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತವೆ ಎಂದು ಆರೋಪಿಸಿದ್ದಾರೆ. ಕೆಲ ನಾಯಕರು ಇದನ್ನು “ವಿಭಜಕ ರಾಜಕೀಯ” ಎಂದು ಕರೆದಿದ್ದು, ಇಂತಹ ಹೇಳಿಕೆಗಳು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ತೆಲಂಗಾಣ ಉಪಾಧ್ಯಕ್ಷ ಶಾಂತಿ ಕುಮಾರ್, “ಟಿವಿಕೆ ತನ್ನ ನಿಜವಾದ ಕಾರ್ಯಸೂಚಿಯನ್ನು ಬಹಿರಂಗಪಡಿಸುತ್ತಿದೆ” ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವು ನಾಯಕರು, “ಇಂತಹ ಹೇಳಿಕೆಗಳು ಇತರ ಧರ್ಮಗಳ ಬಗ್ಗೆ ಏಕೆ ಮಾಡಲಾಗುವುದಿಲ್ಲ?” ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

56
ವಿಜಯ್ ಮೌನದ ಬಗ್ಗೆ ಪ್ರಶ್ನೆಗಳು
Image Credit : CMO Tamilnadu X

ವಿಜಯ್ ಮೌನದ ಬಗ್ಗೆ ಪ್ರಶ್ನೆಗಳು

ಟಿವಿಕೆ ಪಕ್ಷದ ನಾಯಕ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೋಸೆಫ್ ಈ ವಿಚಾರದಲ್ಲಿ ಮೌನ ತಾಳಿರುವುದು ಕೂಡ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪಕ್ಷದ ಶಾಸಕರು ಇಂತಹ ಹೇಳಿಕೆ ನೀಡುತ್ತಿರುವಾಗ ವಿಜಯ್ ಏಕೆ ಪ್ರತಿಕ್ರಿಯೆ ನೀಡುತ್ತಿಲ್ಲ? ಹಿಂದೂ ಮತಗಳಿಂದ ಅಧಿಕಾರಕ್ಕೆ ಬಂದ ನಂತರ ಈಗ ಪಕ್ಷದ ನಿಲುವು ಬದಲಾಗಿದೆಯೇ? ಎಂದು ಬಿಜೆಪಿ ನಾಯಕರು ಖಾರವಾಗಿ ಪ್ರಶ್ನಿಸಿದ್ದಾರೆ.

66
ತಮಿಳುನಾಡಿನಲ್ಲಿ ಮತ್ತೊಮ್ಮೆ ರಾಜಕೀಯ ಸಂಘರ್ಷ
Image Credit : ANI

ತಮಿಳುನಾಡಿನಲ್ಲಿ ಮತ್ತೊಮ್ಮೆ ರಾಜಕೀಯ ಸಂಘರ್ಷ

ಒಟ್ಟಿನಲ್ಲಿ, ಸನಾತನ ಧರ್ಮ ಕುರಿತ ಹೇಳಿಕೆಗಳು ತಮಿಳುನಾಡಿನಲ್ಲಿ ಮತ್ತೊಮ್ಮೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿವೆ. ಟಿವಿಕೆ ಹಾಗೂ ಡಿಎಂಕೆ ನಾಯಕರು ತಮ್ಮ ನಿಲುವುಗಳನ್ನು ಸಮರ್ಥಿಸಿಕೊಂಡರೆ, ಬಿಜೆಪಿ ಈ ವಿಷಯವನ್ನು ತೀವ್ರವಾಗಿ ವಿರೋಧಿಸುತ್ತಿದೆ. ಈ ವಿವಾದ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದ್ದು, ರಾಜ್ಯ ರಾಜಕೀಯದಲ್ಲಿ ಇದರ ಪರಿಣಾಮ ಹೇಗಿರುತ್ತದೆ ಎಂಬುದು ಗಮನಾರ್ಹವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ತಮಿಳುನಾಡು
ತಮಿಳಗ ವೆಟ್ರಿ ಕಳಗಂ
ದಳಪತಿ ವಿಜಯ್
ಧರ್ಮ
ಸುದ್ದಿ

Latest Videos
Recommended Stories
Recommended image1
Brahmagantu ರೋಚಕ ಟ್ವಿಸ್ಟ್​: ವರ್ಷಗಳಿಂದ ಕಾಯ್ತಿದ್ದ ಅನಾಮಿಕ ನಾಯಕನ ಎಂಟ್ರಿ! ಯಾರೀ ಗುರು
Recommended image2
ಯುಪಿಯಲ್ಲಿ ಚಂಡಮಾರುತ ಆರ್ಭಟ, ತಗಡಿನ ಶೆಡ್ ಸಮೇತ ಹಾರಿಹೋದ ವ್ಯಕ್ತಿ, 50ಅಡಿ ಎತ್ತರ 300 ಮೀಟರ್ ದೂರ ಬಿದ್ದು ಬದುಕಿತು ಗಟ್ಟಿ ಜೀವ
Recommended image3
9ರ ಬಾಲಕನ ಕಿಡ್​ನ್ಯಾಪ್- ಮತಾಂತರ, ಉಗ್ರರ ತರಬೇತಿ! ಆಧಾರ್​ ಕಾರ್ಡ್​ನಿಂದ ಸಿಕ್ಕವನ ಕರುಳುಹಿಂಡುವ ಸ್ಟೋರಿ
Related Stories
Recommended image1
ಜನರನ್ನು ಬೇರ್ಪಡಿಸುವ ಸನಾತನ ಧರ್ಮ ನಿರ್ಮೂಲನೆ ಮಾಡಬೇಕು: ಶಾಸಕ ಉದಯನಿಧಿ ಸ್ಟಾಲಿನ್
Recommended image2
ಸನಾತನ ಧರ್ಮ ಸ್ವೀಕರಿಸಿದ ಮೊಹಮ್ಮದ್ ಶೆಹಝಾದ್ ಕುಟುಂಬ, ಹರಿದ್ವಾರದಲ್ಲಿ ಧಾರ್ಮಿಕ ಕಾರ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved