ಹೊಸ ಮನೆಗಳಿಗೆ ಕಿಟಕಿ ಇರಬಾರದು, ಮಹಿಳೆಯರ ವಿರುದ್ಧ ತಾಲಿಬಾನ್ ಸರ್ಕಾರ ಹೊಸ ಆದೇಶ!
ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಬಂದ ನಂತರ ಷರಿಯಾ ಕಾನೂನಿಂತೆ ಅಲ್ಲಿನ ಸರ್ಕಾರ ಮಹಿಳೆಯರ ವಿರುದ್ಧ ವಿಚಿತ್ರ ಕಾನೂನುಗಳನ್ನು ತರಲಾರಂಭಿಸಿದ್ದಾರೆ. ಮೊದಲು ಮಹಿಳೆಯರು ಬ್ಯೂಟಿ ಪಾರ್ಲರ್, ಸೆಲ್ಯೂನ್ ಗಳಿಗೆ ಹೋಗುವಂತಿಲ್ಲ, ಮೇಕಪ್ ಮಾಡಿಕೊಳ್ಳುವಂತಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ತೆಗೆಯುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು ಬಳಿಕ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬೇರೆಯವರಿಗೆ ಕೇಳುವಂತೆ ಮಾತನಾಡಬಾರದು ಎಂಬ ವಿಚಿತ್ರ ಆದೇಶ ಹೊರಡಿಸಿದರು. ಆದರೀಗ ಮತ್ತೊಂದು ಆದೇಶ ಹೊರಡಿಸುವ ಮೂಲಕ ಆಫ್ಘಾನ್ ಮಹಿಳೆಯರಿಗೆ ಶಾಕ್ ನೀಡಿದ್ದಾರೆ.

ಮಹಿಳೆಯರ ವಿರುದ್ಧ ತಾಲಿಬಾನ್ ಹೊಸ ಕಾನೂನು: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮಹಿಳೆಯರ ವಿರುದ್ಧ ಹೊಸ ಆದೇಶವನ್ನು ಹೊರಡಿಸಿದೆ. ತಾಲಿಬಾನ್ ಸರ್ಕಾರದ ಪರಮೋಚ್ಚ ನಾಯಕ ಈ ಕುರಿತು ಆದೇಶ ಹೊರಡಿಸಿದ್ದು, ಹೊಸ ತಾಲಿಬಾನ್ ಕಾನೂನಿನ ಪ್ರಕಾರ, ಅಫ್ಘಾನಿಸ್ತಾನದಲ್ಲಿ ನಿರ್ಮಿಸುತ್ತಿರುವ ಹೊಸ ಮನೆಗಳಿಗೆ ಕಿಟಕಿಗಳು ಇರಬಾರದು. ಮಹಿಳೆಯರು ಮನೆಯಿಂದ ಹೊರಗೆ ಕಾಣದಂತೆ ತಾಲಿಬಾನ್ ಈ ಆದೇಶ ನೀಡಿದೆ. ಮಹಿಳೆಯರನ್ನ ನೋಡುವುದರಿಂದ ಅಶ್ಲೀಲ ಕೃತ್ಯಗಳು ಎಸಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು X ನಲ್ಲಿ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ. ಹೊಸ ಮನೆಗಳಲ್ಲಿ ಅಂಗಳ, ಅಡುಗೆ ಮನೆ, ಅಕ್ಕಪಕ್ಕದವರ ಬಾವಿ ಅಥವಾ ಮಹಿಳೆಯರು ಬಳಸುವ ಯಾವುದೇ ಸ್ಥಳದಲ್ಲಿ ಮಹಿಳೆಯರು ಕಾಣಿಸುವಂಥ ಕಿಟಕಿಗಳನ್ನು ಹೊಂದಿರಬಾರದು. ಅಡುಗೆಮನೆಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೋಡುವುದು, ವರಾಂಡಾದಲ್ಲಿ ಬರುವುದು ಮತ್ತು ಹೋಗುವುದು ಅಥವಾ ಬಾವಿಯಿಂದ ನೀರು ಸೇದುವುದು ಅಶ್ಲೀಲ ಕೃತ್ಯಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಈ ಕುರಿತು ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳು ನಿಗಾ ವಹಿಸಲಿದ್ದಾರೆ. ತಾಲಿಬಾನ್ ಸರ್ಕಾರದ ಪ್ರಕಾರ, ಪುರಸಭೆಯ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಇಲಾಖೆಗಳು ಹೊಸದಾಗಿ ನಿರ್ಮಿಸುತ್ತಿರುವ ಮನೆಗಳನ್ನು ಸಹ ಮೇಲ್ವಿಚಾರಣೆ ಮಾಡುತ್ತವೆ. ಈ ಮನೆಗಳಲ್ಲಿ ಕಿಟಕಿಗಳು ಅಥವಾ ಬಾಗಿಲುಗಳು ನೆರೆಹೊರೆಯವರ ಮನೆಗಳ ಕಡೆಗೆ ತೆರೆಯುವಂತೆ ಇರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
Taliban
ಈಗಾಗಲೇ ತೆರೆದ ಕಿಟಕಿ ಕ್ಲೋಸ್ ಮಾಡಲು ಕ್ರಮ:
ಯಾವುದೇ ಮನೆಯ ಯಾವುದೇ ಕಿಟಕಿ ಅಥವಾ ಬಾಗಿಲ ಪಕ್ಕದ ಮನೆಯ ಕಡೆಗೆ ತೆರೆದಿದ್ದರೆ, ಜನರು ಇದಕ್ಕೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಮನೆಯ ಯಜಮಾನನು ತನ್ನ ಮನೆಯ ಕಿಟಕಿಯ ಇರುವ ಕಡೆಗೆ ಗೋಡೆಯನ್ನು ನಿರ್ಮಿಸಬೇಕು ಅಥವಾ ಯಾವುದೇ ನೆರೆಹೊರೆಯವರು ಅಥವಾ ಹೊರಗಿನವರು ಆ ಕಿಟಕಿ ಅಥವಾ ಕಿಟಕಿಯ ಮೂಲಕ ಮನೆಯೊಳಗೆ ನೋಡದಂತೆ ಕೆಲವು ವಿಶೇಷ ವ್ಯವಸ್ಥೆಯನ್ನು ಮಾಡುವಂತೆ ಸೂಚಿಸಲಾಗಿದೆ.
taliban
ಅಧಿಕಾರಕ್ಕೆ ಬಂದ ನಂತರ ಮಹಿಳೆಯರ ಮೇಲೆ ಮಹಿಳೆಯರ ಮೇಲೆ ನಿರ್ಬಂಧ ಹೇರುವುದನ್ನು ಮುಂದುವರಿಸಿದೆ. ಆಗಸ್ಟ್ 2021 ರಿಂದ, ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿರುವ ತಾಲಿಬಾನ್ ಮಹಿಳೆಯರ ಹಕ್ಕುಗಳ ಮೇಲೆ ನಿರ್ಬಂಧಗಳನ್ನು ಹೇರುತ್ತಿದೆ ಎಂಬುದು ಗಮನಿಸಬೇಕಿದೆ. ವಿಶ್ವಸಂಸ್ಥೆ ಕೂಡ ಮಹಿಳೆಯರ ಕುರಿತ ತಾಲಿಬಾನ್ ನೀತಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಆದರೂ ಮಹಿಳೆಯರು ಕೆಲಸ ಮಾಡುವುದನ್ನು,ಪ್ರಾಥಮಿಕ ಶಿಕ್ಷಣ, ಉದ್ಯಾನವನಗಳು ಅಥವಾ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು, ಜೋರಾಗಿ ಮಾತನಾಡುವುದನ್ನ ಈಗಾಗಲೇ ತಾಲಿಬಾನ್ ಸರ್ಕಾರ ನಿಷೇಧಿಸಿದೆ.