ಬರ್ಬರ ಹತ್ಯೆಯಾದ ಸಾಧುಗಳ ಪರ ವಾದಿಸುತ್ತಿದ್ದ ವಕೀಲ ನಿಗೂಢ ಸಾವು!
ಮುಂಬೈ (ಮೇ 15) ಕಳೆದ ತಿಂಗಳು ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಗಡ್ಚಿಂಚಾಲೆ ಎಂಬ ಗ್ರಾಮದಲ್ಲಿ ನಡೆದಿದ್ದ ಇಬ್ಬರು ಸಾಧುಗಳ ಹತ್ಯಾಕಾಂಡದ ಹಿಂದೆ ಯಾರ ಕೈವಾಡ ಇದೆ ಎಂಬ ತನಿಖೆ ಪ್ರಗತಿಯಲ್ಲಿ ಇರುವಾಗಲೇ ಮತ್ತೊಂದು ದುರಂತ ನಡೆದು ಹೋಗಿದೆ. ಸಾಧುಗಳ ಪರ ವಾದಿಸುತ್ತಿದ್ದ ವಕೀಲ ದಿಗ್ವಿಜಯ್ ತ್ರಿವೇದಿ (32) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಸ್ಥಳೀಯರಿಂದ ಬರ್ಬರವಾಗಿ ಹತ್ಯೆಯಾಗಿದ್ದ ಸಾಧುಗಳ ಪರವಾಗಿ ವಾದ ಮಾಡುತ್ತಿದ್ದ ವಕೀಲ ಸಹ ರಸ್ತೆ ಅಫಘಾತದಲ್ಲಿ ನಿಗೂಢ ಸಾವನ್ನಪ್ಪಿದ್ದಾರೆ. ಇದು ರಸ್ತೆ ಅಪಘಾತವೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಮೂಡಿದೆ.
ಇದು ರಸ್ತೆ ಅಪಘಾತವೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಮೂಡಿದೆ.
ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳ ಹತ್ಯೆ ಮಾಡಲಾಗಿದೆ ಎಂಬಂತೆ ಸುದ್ದಿ ಹರಡಿಸಲಾಗಿತ್ತು. ಇದೀಗ, ವಕೀಲ ದಿಗ್ವಿಜಯ್ ಅವರ ಸಾವು ಕೂಡ ಆಕಸ್ಮಿಕ ಎಂದು ಹೇಳಲಾಗಿದೆ.
ದಿಗ್ವಿಜಯ್ ತಮ್ಮ ಸಹೋದ್ಯೋಗಿ ಪ್ರೀತಿ ತ್ರಿವೇದಿ ಅವರೊಂದಿಗೆ ಕೋರ್ಟ್ಗೆ ಹೋಗುತ್ತಿದ್ದ ವೇಳೆ ಮುಂಬೈ-ಅಹಮದಾಬಾದ್ ಹೆದ್ದಾರಿಯ ಚರೋತಿ ನಾಕಾ ಬಳಿ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಗುರಿಯಾಗಿದೆ.
ಅಪಘಾತ ಪ್ರಕರಣವನ್ನು ಸಿಬಿಐಗೆ ವಹಿಸಲು ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಸಾಧುಗಳನ್ನು ಹತ್ಯೆ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಜನಾಕ್ರೋಶಕ್ಕೆ ಕಾರಣವಾಗಿತ್ತು.
ಪಾಲ್ಗರ್ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿ 130ಕ್ಕೂ ಹೆಚ್ಚು ಆರೋಪಿಗಳಲ್ಲಿ ಬಂಧಿಸಲಾಗಿತ್ತು.