ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 2ನೇ ಸಭೆ: ಇಲ್ಲಿವೆ ಮಹತ್ವದ ನಿರ್ಧಾರಗಳು
ಆಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ 2ನೇ ಸಭೆ (ಇಂದು) ಶನಿವಾರ ನಡೆಯಿತು. ಟ್ರಸ್ಟಿನ ಅದ್ಯಕ್ಷ ನೃತ್ಯ ಗೋಪಾಲದಾಸ್ ಸಭೆಯ ಅದ್ಯಕ್ಷತೆ ವಹಿಸಿದ್ದರು. ಇನ್ನು ನೀಲಾವರ ಗೋಶಾಲೆಯಲ್ಲಿ ಚಾತುರ್ಮಾಸ ವೃತನಿರತರಾಗಿರುವ ಪೇಜಾವರ ಶ್ರೀಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿ ಸಲಹೆಗಳನ್ನು ನೀಡಿದರು. ಸಭೆಯ ನಂತರ ಪೇಜಾವರ ಶ್ರೀಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಅದರ ಮುಖ್ಯಾಂಶಗಳು ಇಲ್ಲಿವೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಆಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ 2ನೇ ಸಭೆಯಲ್ಲಿ ಪೇಜಾವರ ಶ್ರೀಗಳು ಭಾಗವಹಿಸಿ ಸಲಹೆಗಳನ್ನು ನೀಡಿದರು.

ಶ್ರೀರಾಮ ಮಂದಿರಕ್ಕೆ ಭೂಮಿ ಪೂಜೆ ದಿನ ಇನ್ನೂ ನಿರ್ಧಾರ ಆಗಿಲ್ಲ

300 ಕೋಟಿ ರು. ವೆಚ್ಚದಲ್ಲಿ ಮಂದಿರ ನಿರ್ಮಾಣವಾಗುತ್ತದೆ

ಭಕ್ತರು ವೈಯುಕ್ತಿಕ 10 ರು. ಕುಟುಂಬದಿಂದ ತಲಾ 100 ರು. ಸಂಗ್ರಹಕ್ಕೆ ಅಭಿಯಾನ ನಡೆಸಲಾಗುತ್ತದೆ

ನ.25ರಿಂದ ಡಿ.25ರವರೆಗೆ ದೇಶದಾದ್ಯಂತ ಅಭಿಯಾನ ನಡೆಯಲಿದೆ

ನ್ಯಾಯಾಲಯ ನೀಡಿರುವ 67.03 ಎಕ್ರೆ ಭೂಮಿಯ ಅಭಿವೃದ್ಧಿಗೂ ನಿರ್ಧಾರ. ಅದಕ್ಕೆ 1000 ಕೋಟಿ ರು. ಯೋಜನೆಯನ್ನೂ ರೂಪಿಸಲಾಗಿದೆ.

ಈ ಮೊತ್ತವನ್ನು ಉದ್ಯಮ ಸಂಸ್ಥೆಗಳ ಸಿಆರ್ಎಸ್ ನಿಧಿಯಿಂದ ಸಂಗ್ರಹಕ್ಕೆ ನಿರ್ಣಯಿಸಲಾಗಿದೆ. ಪ್ರಸ್ತುತ ತಜ್ಞರಿಂದ ಮಂದಿರ ನಿರ್ಮಾಣದ ನಿವೇಶನದ ಧಾರಣಾ ಸಾಮರ್ಥ್ಯ ಪರೀಕ್ಷೆ ಆಗುತ್ತಿದೆ

ಮಂದಿರದ 200 ಅಡಿ ಆಳದಲ್ಲಿ ತಾಮ್ರಮತ್ರ ಅಳವಡಿಸಲಾಗುತ್ತದೆ. ಎಲ್ ಆ್ಯಂಡ್ ಟಿ ಕಂಪೆನಿಗೆ ಮಂದಿರ ನಿರ್ಮಾಣದ ಹೊಣೆ ನೀಡಲಾಗಿದೆ ಎಂದು ಪೇಜಾವರ ಶ್ರೀಗಳು ಸಭೆಯ ಮಾಹಿತಿ ನೀಡಿದರು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ