ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿಯ ಅದ್ದೂರಿ ವಿವಾಹ, ಫೋಟೋಗಳಲ್ಲಿ ಮದುವೆ ಸಂಭ್ರಮ!
ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶನೆಲ್ ಇರಾನಿ, ಫೆ.9 ರಂದು ರಾಜಸ್ಥಾನದ ಖಿಮ್ಸರ್ ಕೋಟೆಯಲ್ಲಿ ಅರ್ಜುನ್ ಭಲ್ಲಾ ಅವರನ್ನು ವರಿಸಿದರು. ಸ್ನೃತಿ ಇರಾನಿ ಮದುವೆಯ ಯಾವ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿಲ್ಲ. ಆದರೆ, ಅದ್ದೂರಿ ವಿವಾಹದ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶನೆಲ್ ಇರಾನಿ ಗುರುವಾರ ಅರ್ಜುನ್ ಭಲ್ಲಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ರಾಜಸ್ಥಾನದ ಖಿಮ್ಸರ್ ಕೋಟೆಯಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆದಿದೆ.
ಮದುವೆಯ ಕುರಿತಾಗಿ ಸ್ಮೃತಿ ಇರಾನಿಯಾಗಲಿ ಅವರ ಕುಟುಂಬದವರಾಗಲಿ ಯಾವುದೇ ಚಿತ್ರವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿಲ್ಲ. ಆದರೆ, ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿವೆ.
ಮದುವೆಯ ಮಂಟಪದ ಮೇಲಿನಿಂದ ಕೆಂಪು ಬಣ್ಣದ ಲೆಹಂಗಾ ಧರಿಸಿದ್ದ ಶನೆಲ್ ಹಾಗೂ ಅರ್ಜುನ್ ಭಲ್ಲಾ ಪೋಸ್ ನೀಡಿದ ಚಿತ್ರ ವೈರಲ್ ಆಗಿದೆ. ಮದುವೆ ಶಾಸ್ತ್ರ ಮುಗಿದ ಬಳಿಕ ತಗೆದ ಚಿತ್ರ ಇದಾಗಿದೆ.
ಎನ್‌ಆರ್‌ಐ ಆಗಿರುವ ಅರ್ಜುನ್ ಭಲ್ಲಾ ಅವರೊಂದಿಗೆ ಶನೆಲ್ 2021ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.ಮದುವೆಯ ದಿನ ಬಿಳಿ ಬಣ್ಣದ ಶೇರ್ವಾನಿ ಹಾಗೂ ಕೆಂಪು ಬಣ್ಣದ ಸಫಾವನ್ನು ಅವರು ಧರಿಸಿದ್ದರು.
ಸ್ಮೃತಿ ಇರಾನಿ ಹಾಗೂ ಜುಬಿನ್ ಇರಾನಿ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪುತ್ರ ಜೋಹ್ರ್ ಹಾಗೂ ಪುತ್ರಿ ಜೊಯ್ಶ್ ಕೂಡ ಮದುವೆ ಸಮಾರಂಭದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು.
ಮದುವೆ ಸಮಾರಂಭದ ವೇಳೆ ಸ್ಮೃತಿ ಇರಾನಿ ಕೆಂಪು ಬಣ್ಣದ ಸೀರೆ ಧರಿಸಿದ್ದರು.ಅಲ್ಲದೆ, ಎಲ್ಲಾ ಕಾರ್ಯಕ್ರಮಗಳು ಅಚ್ಚಕಟ್ಟಾಗಿ ನಡೆಯುವ ನಿಟ್ಟಿನಲ್ಲಿ ಮುಂದೆ ನಿಂತು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು.
ಶನೆಲ್ ಇರಾನಿ, ಸ್ಮೃತಿ ಇರಾನಿ ಅವರ ಪರಿ ಜುಬಿನ್ ಇರಾನಿ ಅವರ ಮೊದಲ ಪತ್ನಿ ಮೋನಾ ಅವರ ಮಗಳು. ಹಾಗಿದ್ದರೂ ಸ್ವಂತ ಮಗಳಷ್ಟೇ ಪ್ರೀತಿಯಿಂದ ಶನೆಲ್ ಅವರನ್ನು ಸ್ಮೃತಿ ನೋಡಿಕೊಂಡಿದ್ದಾರೆ.
ಸ್ಮೃತಿ ಹಾಗೂ ಜುಬಿನ್ ಬಾಲ್ಯದಿಂದಲೂ ಸ್ನೇಹಿತರಾಗಿದ್ದರು. ಆದರೆ, ಅನಿವಾರ್ಯ ಕಾರಣಕ್ಕೆ ಜುಬಿನ್, ಮೋನಾರನ್ನು ವಿವಾಹವಾಗಿದ್ದರು. ಮದುವೆಯಾದ ಬಳಿಕ ಸ್ಮೃತಿ ಹಾಗೂ ಜುಬಿನ್ ಸಂಬಂಧದ ಬಗ್ಗೆ ಮೋನಾಗೆ ತಿಳಿದಿತ್ತು. ಬಳಿಕ ಮೋನಾ ವಿಚ್ಛೇದನ ನೀಡಿದರು. ಆ ನಂತರ ಸ್ಮೃತಿ ಹಾಗೂ ಜುಬಿನ್ ವಿವಾಹವಾಗಿದ್ದರು.
2001ರಲ್ಲಿ ಸ್ಮೃತಿ ಹಾಗೂ ಜುಬಿನ್ ವಿವಾಹವಾಗಿದ್ದರು. ಅಚ್ಚರಿಯ ವಿಷಯವೇನೆಂದರೆ, ಮೋನಾ ಸ್ವತಃ ಸ್ಮೃತಿ ಇರಾನಿ ಅವರ ಆಪ್ತ ಸ್ನೇಹಿತೆ.
2021ರಲ್ಲಿ ಅರ್ಜುನ್ ಭಲ್ಲಾ, ಶನೇಲ್‌ಗೆ ಮದುವೆ ಪ್ರಸ್ತಾಪ ಇಟ್ಟಿದ್ದರು. ಇದನ್ನು ಶನೇಲ್ ಕೂಡ ಒಪ್ಪಿಕೊಂಡಿದ್ದರು. ಇದನ್ನು ಸ್ಮೃತಿ ಇರಾನಿ ಇನ್ಸ್‌ಟಾಗ್ರಾಮ್ ಮೂಲಕ ಬಹಿರಂಗಪಡಿಸಿದ್ದರು.