ದೆಹಲಿ ವಿಶ್ವವಿದ್ಯಾನಿಲಯದಲ್ಲೊಂದು ವರ್ಜಿನ್ ಟ್ರೀ, ಕಾಂಡೋಂ ಕಟ್ಟಿ ಹರಕೆ!
ಫೆಬ್ರವರಿ 7ರಿಂದ ವ್ಯಾಲಂಟೈನ್ ವೀಕ್ ಆರಂಭಗೊಳ್ಳಲಿದೆ. ಪ್ರೀತಿಯ ಈ ಹಬ್ಬದ ಸಂದರ್ಭದಲ್ಲಿ ಈ ಇಡೀ ವಾರ ವಿಭಿನ್ನ ದಿನಗಳನ್ನು ಆಚರಿಸಲಾಗುತ್ತದೆ. ಇದಾದ ಬಳಿಕ ಫೆಬ್ರವರಿ 14ರಂದು ವ್ಯಾಲಂಟೈನ್ಸ್ ಡೇ ಆಚರಿಸಲಾಗುತ್ತದೆ. ಇನ್ನು ಫೆಬ್ರವರಿ ಆರಂಭದಿಂದಲೇ ಪ್ರೇಮಿಗಳು ಈ ದಿನಕ್ಕಾಗಿ ಸಿದ್ಧತೆ ನಡೆಸುತ್ತಿರುತ್ತಾರೆ. ಆದರೆ ಸಿಂಗಲ್ಸ್ಗಳಿಗೆ ಮಾತ್ರ ಇದು ಬಹಳ ಕಷ್ಟದ ದಿನಗಳು. ಹೀಗಾಗೇ ದೆಹಲಿ ವಿಶ್ವವಿದ್ಯಾನಿಲಯ ಆವರಣದಲ್ಲಿ ಕೆಲ ವರ್ಷದ ಹಿಂದಿನವರೆಗೆ ವರ್ಜಿನ್ ಟ್ರೀ ಪೂಜೆ ಮಾಡುವ ಪದ್ಧತಿ ಆಚರಣೆಯಲ್ಲಿತ್ತು. ಈ ಮರಕ್ಕೆ ಸಿಂಗಲ್ಸ್ ಕಾಂಡೋಂ ಕಟ್ಟುತ್ತಿದ್ದರು. ಇದರ ಹಿಂದೆ ವಿಶೇಷ ಕಾರಣವೂ ಇತ್ತು. ಆದರೆ ಕೆಲ ವರ್ಷದ ಹಿಂದೆ ಈ ಪದ್ಧತಿಗೆ ಬ್ರೇಕ್ ಹಾಕಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯರು ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಅಷ್ಟಕ್ಕೂ ಈ ಪದ್ಧತಿ ಹಿಂದಿನ ಕಾರಣವೇನು? ಇದನ್ನು ನಿಲ್ಲಿಸಿದ್ದೇಕೆ? ಇಲ್ಲಿದೆ ವಿವರ
ಕೆಲ ವರ್ಷದ ಹಿಂದೆ ದೆಹಲಿ ಯೂನಿವರ್ಸಿಟಿಯ ಕ್ಯಾಂಪಸ್‌ನಲ್ಲಿ ದೊಡ್ಡದೊಂದು ಮರವಿತ್ತು. ಇದನ್ನು ವರ್ಜಿನ್ ಟ್ರೀ ಎಂದೇ ಕರೆಯಲಾಗುತ್ತಿತ್ತು. ಈ ಮರಕ್ಕೆ ಸಿಂಗಲ್ ಆಗಿದ್ದ ವಿದ್ಯಾರ್ಥಿಗಳು ಪ್ರೇಮಿಗಳ ದಿನದಂದು ಕಾಂಡೋಂ ಕಟ್ಟುತ್ತಿದ್ದರು. ಇದರ ಹಿಂದಿನ ಕಾರಣವೂ ಬಹಳ ಇಂಟರೆಸ್ಟಿಂಗ್ ಆಗಿದೆ.
ಈ ಮರಕ್ಕೆ ಯಾರು ಕಾಂಡೋಂ ಕಟ್ಟುತ್ತಿದ್ದರೋ ಅವರಿಗೆ ವ್ಯಾಲಂಟೈನ್ಸ್ ಡೇಯೊಳಗೆ ಪಾರ್ಟ್ನರ್ ಸಿಗುತ್ತಿದ್ದರಂತೆ. ಮರಕ್ಕೆ ಕಾಂಡೋಂ ಕಟ್ಟುವುದರಿಂದ ಅದೃಷ್ಟ ಖುಲಾಯಿಸುತ್ತಿತ್ತಂತೆ. ಇದೇ ಕಾರಣದಿಂದ ಈ ವರ್ಜಿನ್ ಟ್ರೀ ಕ್ಯಾಂಪಸ್‌ನಲ್ಲಿ ಬಹಳ ಫೇಮಸ್ ಆಗಿತ್ತು.
ಆದರೆ ಅನೇಕ ಮಂದಿ ವಿದ್ಯಾರ್ಥಿನಿಯರು ಈ ಪದ್ಧತಿ ವಿರೋಧಿಸುತ್ತಿದ್ದರು. ಇದು ಸ್ತ್ರೀಯರಿಗೆ ಮಾಡುವ ಅವಮಾನ ಎಂಬುವುದು ಅವರ ವಾದವಾಗಿತ್ತು. ಸಾಲದೆಂಬಂತೆ ಮರದ ಮೇಲೆ ಅನೇಕ ಹೀರೋಯಿನ್‌ಗಳ ಫೋಟೋ ಕೂಡಾ ನೇತು ಹಾಕಲಾಗಿತ್ತು. ಮಹಿಳಾ ವಿರೋಧಿ ಈ ಪದ್ಧತಿಗೆ ಕ್ಯಾಂಪಸ್‌ನಲ್ಲಿ ಭಾರೀ ವಿರೋಧವಿತ್ತು.
ಕೆಲ ವರ್ಷದ ಹಿಂದೆ ವಿದ್ಯಾರ್ಥಿಗಳು ರಣವೀರರ್ ಸಿಂಗ್‌ರನ್ನು ಲವ್ ಗುರು ಎಂದು ಅವರ ಫೋಟೋವನ್ನು ಈ ಮರಕ್ಕೆ ಹಾಕಿ, ಪೂಜೆ ಮಾಡಿದ್ದರು. ಹೀಗೆ ಮಾಡುವುದರಿಂದ ತಾವು ಪ್ರೀತಿಸುವವರು ತಮಗೆ ಸಿಗುತ್ತಾರೆಂಬ ನಂಬಿಕೆ ಇತ್ತು.
ಈ ವರ್ಜಿನ್ ಟ್ರೀ ಶೇಪ್ V ಆಕಾರದಲ್ಲಿತ್ತು. ಫೆಬ್ರವರಿ 24ರಂದು ಈ ಮರಕ್ಕೆ ವಿಶೇಷ ಪೂಜೆ ಮಾಡಲಾಗುತ್ತಿತ್ತು. ಯಾರೆಲ್ಲಾ ಪೂಜೆ ಮಾಡುತ್ತಾರೋ ಅವರ ಲವ್ ಲೈಫ್f ಮುಂದಿನ ಆರು ತಿಂಗಳು ಬಿಂದಾಸ್ ಆಗಿರುತ್ತದೆ ಎನ್ನಲಾಗುತ್ತಿತ್ತು.
ಈ ಕಾಲೇಜಿನ ಮಿಸ್ ಹಾಗೂ ಮಿಸ್ಟರ್ ಫ್ರೆಶರ್‌ನಿಂದ ಪೂಜೆ ಮಾಡಿಲಾಗುತ್ತಿತ್ತು. ಆದರೆ ಭಾರೀ ವಿರೋಧದ ಹಿನ್ನೆಲೆ ಈ ಪೂಜೆ ಸ್ಥಗಿತಗೊಳಿಸಲಾಯ್ತು. ಈಗ ಈ ಪೂಜೆ ನಡೆಯುವುದಿಲ್ಲ.
ಈ ಪದ್ಧತಿ ಕೊನೆಯಾಗಿದ್ದರೂ ಕ್ಯಾಂಪಸ್‌ನಲ್ಲಿ ಮಾತ್ರ ಈ ಬಗ್ಗೆ ಚರ್ಚೆ ಈಗಲೂ ನಡೆಯುತ್ತಿರುತ್ತದೆ. ಈಗಲೂ ಈ ಮರಕ್ಕೆ ಪೂಜೆ ಮಾಡುವುದರಿಂದ ಲವ್ ಲೈಫ್ ಆರಾಮಾಗಿ ನಡೆಯುತ್ತದೆ ಎಂಬ ನಂಬಿಕೆ ಇದೆ. ಅಲ್ಲದೇ ಯಾರಿಗೆ ಜೊತೆ ಇಲ್ಲವೋ ಅವರಿಗೆ ಪಾರ್ಟ್ನರ್ ಸಿಗುತ್ತಾರೆ ಎಂಬ ನಂಬಿಕೆಯೂ ಇದೆ.