ರೈಲ್ವೇ ಟಿಕೆಟ್ ಬುಕಿಂಗ್ IRCTC ಸೇವೆ ಸ್ಥಗಿತ, ಆ್ಯಪ್- ವೆಬ್‌ಸೈಟ್‌ನಲ್ಲಿ ಎದುರಾದ ಸಮಸ್ಯೆ!
ಇಂಡಿಯನ್ ರೈಲ್ವೆ (IRCTC) ಸೇವೆಗಳಲ್ಲಿ ಅಡಚಣೆ ಉಂಟಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡಿದ್ದಾರೆ. ರೈಲ್ವೆ ಟಿಕೆಟ್ ಬುಕಿಂಗ್ ವೆಬ್‌ಸೈಟ್ ಮತ್ತು ಆ್ಯಪ್ ಕಾರ್ಯನಿರ್ವಹಿಸುತ್ತಿಲ್ಲ.
IRCTC: ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ಸೇವೆಯಲ್ಲಿ ಸಮಸ್ಯೆಗಳು ಎದುರಾಗಿದೆ. ಪ್ರಯಾಣಿಕರು ಸೂಕ್ತ ಸಮಯದಲ್ಲಿ ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೆ ಬಳಲಿದ್ದಾರೆ. ರೈಲ್ವೇ ಆ್ಯಪ್ ಹಾಗೂ ವೆಬ್‌ಸೈಟ್‌ನಲ್ಲಿ ಸಮಸ್ಯೆಗಳಿಂದ ಪ್ರಯಾಣಿಕರ ತಲೆನೋವು ಹೆಚ್ಚಾಗಿದೆ. ನಿರ್ವಹಣಾ ಕಾರ್ಯಗಳಿಂದಾಗಿ ಈ ಅಡಚಣೆ ಉಂಟಾಗಿದೆ ಎಂದು IRCTC ಸ್ಪಷ್ಟಪಡಿಸಿದೆ.
“ನಿರ್ವಹಣಾ ಕಾರ್ಯಗಳಿಂದಾಗಿ ಇ-ಟಿಕೆಟಿಂಗ್ ಸೇವೆಗಳು ಸ್ಥಗಿತಗೊಂಡಿವೆ. ಒಂದು ಗಂಟೆಯವರೆಗೆ ಈ ಸೇವೆಗಳು ಲಭ್ಯವಿರುವುದಿಲ್ಲ. ಟಿಕೆಟ್ ರದ್ದತಿಗಾಗಿ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಅಥವಾ ಇಮೇಲ್ ಮಾಡಿ” ಎಂದು IRCTC ಸೂಚಿಸಿದೆ. ಇಷ್ಚೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕೇವಲ 1 ಗಂಟೆಯಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ರೈಲ್ವೇ ಹೇಳಿದೆ.
ಡೌನ್ ಡಿಟೆಕ್ಟರ್ ಪ್ರಕಾರ IRCTC ಎಲ್ಲಾ ಪ್ಲಾಟ್‌ಫಾರ್ಮ್ ಸಮಸ್ಯೆ ಎದುರಸಿದೆ. ವೆಬ್‌ಸೈಟ್‌ನಲ್ಲಿ ಶೇಕಡಾ 50 ರಷ್ಟು ಪ್ರಯಾಣಿಕರು ಸಮಸ್ಯೆ ಎದುರಿಸಿದ್ದಾರೆ. ಇನ್ನು ಶೇಕಡಾ 40 ರಷ್ಟು ಜನ ಆ್ಯಪ್ ಕಾರ್ಯನಿರ್ವಹಣೆ ಬಗ್ಗೆ ಹಾಗೂ ಶೇಕಡಾ 10 ರಷ್ಟು ಪ್ರಯಾಣಿಕರು ಟಿಕೆಟ್ ಬುಕಿಂಗ್ ವೇಳೆ ಸಮಸ್ಯೆ ಎದುರಿಸಿದ್ದಾರೆ.
ಇಂದು ಬೆಳಗ್ಗೆ 10 ಗಂಟೆಗೆ ಈ ಸಮಸ್ಯೆ ಆರಂಭಗೊಂಡಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ. ತಕ್ಷಣವೇ ಪ್ರಯಾಣಿಕರು ಸೋಶಿಯಲ್ ಮೀಡಿಯಾ ಮೂಲಕ ಈ ಮಾಹಿತಿಯನ್ನು ರೈಲ್ವೇ ಗಮನಕ್ಕೆ ತಂದಿದ್ದಾರೆ. ಪ್ರಕರಣ ಗುರಿತು ರೈಲ್ವೇ ಉತ್ತರಿಸಿದೆ. ಸದ್ಯ ಸಮಸ್ಯೆ ಬಗೆಹರಿದಿದೆ ಎಂದು ರೈಲ್ವೇ ಹೇಳಿದೆ.
ಭಾರತೀಯ ರೈಲ್ವೆ 'ಸೂಪರ್ ಆ್ಯಪ್' ಅನ್ನು ಪರಿಚಯಿಸಿದೆ. ಈ ಆಲ್-ಇನ್-ಒನ್ ಆ್ಯಪ್ ಟಿಕೆಟ್ ಬುಕಿಂಗ್, ಪ್ಲಾಟ್‌ಫಾರ್ಮ್ ಪಾಸ್, ಮತ್ತು ರೈಲು ಟ್ರ್ಯಾಕಿಂಗ್ ಸೇವೆಗಳನ್ನು ಒದಗಿಸುತ್ತದೆ..