MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Varamahalakshmi Wishes
Bengaluru New Elevated Corridor
H1N1 in Bengaluru
Karnataka Apartment Bill 2026
Bengaluru Medical Institutions Fined
Mandya Students Protest
MUDA Sites
Bengaluru Lokayukta Raid
Union Ministers Interaction with Gen Zs
Pakistan occupied Kashmir
  • Home
  • News
  • India News
  • ದೇಶದಲ್ಲಿನ ದಂಗೆಯಿಂದ ಅಧಿಕಾರ ಕಳೆದುಕೊಂಡ ವಿಶ್ವದ ಪ್ರಮುಖ ನಾಯಕರು

ದೇಶದಲ್ಲಿನ ದಂಗೆಯಿಂದ ಅಧಿಕಾರ ಕಳೆದುಕೊಂಡ ವಿಶ್ವದ ಪ್ರಮುಖ ನಾಯಕರು

ಸಿರಿಯಾದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಹಿಂದೆ ಬಾಂಗ್ಲಾದೇಶದ ಶೇಖ್ ಹಸೀನಾ, ಶ್ರೀಲಂಕಾದ ಗೋಟಬಯ ರಾಜಪಕ್ಸೆ ಸೇರಿದಂತೆ ಹಲವು ನಾಯಕರು ದಂಗೆಯಿಂದಾಗಿ ಅಧಿಕಾರ ಕಳೆದುಕೊಂಡಿದ್ದಾರೆ.

2 Min read
Author : Mahmad Rafik
Published : Dec 09 2024, 11:35 AM IST
Share this Photo Gallery
  • FB
  • TW
  • Linkdin
  • Whatsapp
18

ಮಧ್ಯಪ್ರಾಚ್ಯ ಇಸ್ಲಾಮಿಕ್ ದೇಶ ಸಿರಿಯಾದಲ್ಲಿ 14 ವರ್ಷಗಳಿಂದ ನಡೆಯುತ್ತಿದ್ದ ಹಾಗೂ 5 ಲಕ್ಷ ಜನರ ಮಾರಣಹೋಮಕ್ಕೆ ಕಾರಣವಾಗಿದ್ದ ಅಂತರ್ಯುದ್ಧ ತಾರ್ಕಿಕ ಅಂತ್ಯದ ಘಟ್ಟಕ್ಕೆ ತಲುಪಿದ್ದು, ದೇಶದ ಅಧ್ಯಕ್ಷರಾಗಿದ್ದ ಸರ್ವಾಧಿಕಾರಿ ಬಷರ್‌ ಆಲ್ ಆಸಾದ್ ದೇಶ ಬಿಟ್ಟು ಭಾನುವಾರ ನಸುಕಿನಲ್ಲಿ ರಷ್ಯಾಕ್ಕೆ ಪರಾರಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಕಳೆದ ಕೆಲವು ವರ್ಷಗಳಲ್ಲಿ ದಂಗೆಯಿಂದಾಗಿ ಅಧಿಕಾರ ಕಳೆದುಕೊಂಡ ನಾಯಕರು ಯಾರು? ಯಾವ ದೇಶದವರು ಎಂಬುದರ  ಮಾಹಿತಿ ಇಲ್ಲಿದೆ. ಭಾರತದ ನೆರೆ ದೇಶಗಳಾದ  ಬಾಂಗ್ಲಾದೇಶ,  ಶ್ರೀಲಂಕಾದಲ್ಲಿ ಆಡಳಿತರೂಢ ಸರ್ಕಾರದ ವಿರುದ್ಧ ದಂಗೆ ಎದ್ದಿತ್ತು.

38

ಅಸಮರ್ಪಕ ಆಡಳಿತ, ಕಳಪೆ ನೀತಿ, ಸರ್ವಾಧಿಕಾರಿ ಧೋರಣೆ ಇತ್ಯಾದಿಗಳಿಂದಾಗಿ ಜನರು ದಂಗೆಯೆದ್ದು ದೇಶದ ನಾಯಕರ ಅಧಿಕಾರ ಕಸಿದ ಉದಾಹರಣೆಗಳು ಜಗತ್ತಿನಲ್ಲಿ ಹಲವಾರಿವೆ. ಕೆಲ ರಾಷ್ಟ್ರವನ್ನಾಳುತ್ತಿದ್ದ ನಾಯಕರು, ಸರ್ವಾಧಿಕಾರಿಗಳು ಯುದ್ಧದಿಂದಾಗಿಯೂ ಅಧಿಕಾರ ಕಳೆದುಕೊಂಡ ಅಥವಾ ದೇಶವನ್ನೇ ತೊರೆದ ನಿದರ್ಶನಗಳೂ ಇವೆ. ಅದರಲ್ಲಿ ಕೆಲವು ಇಂತಿವೆ.

48
1. ಶೇಖ್‌ ಹಸೀನಾ, ಬಾಂಗ್ಲಾದೇಶ

1. ಶೇಖ್‌ ಹಸೀನಾ, ಬಾಂಗ್ಲಾದೇಶ

1. ಶೇಖ್‌ ಹಸೀನಾ, ಬಾಂಗ್ಲಾದೇಶ
ಬಾಂಗ್ಲಾದೇಶದಲ್ಲಿ ದಂಗೆ ಪರಿಣಾಮ ಪ್ರಧಾನಿಯಾಗಿದ್ದ  ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಭಾರತದಲ್ಲಿ ಆಶ್ರಯಪಡೆದಿರುವ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಹಸ್ತಾಂತರಕ್ಕೆ ಭಾರತಕ್ಕೆ ಮನವಿ ಮಾಡುತ್ತೇವೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನುಸ್‌ ಹೇಳಿದ್ದಾರೆ. ಬಾಂಗ್ಲಾದಿಂದ ಭಾರತಕ್ಕೆ ಬಂದ ಹಸೀನಾ ಅವರು ಲಂಡನ್‌ನಲ್ಲಿ ರಾಜಾಶ್ರಯ ಬೇಡಿದ್ದರು. ಆದರೆ ಬ್ರಿಟನ್‌ ಸರ್ಕಾರ ರಾಜಾಶ್ರಯ ಬೇಡಿಕೆ ತಿರಸ್ಕರಿಸಿತ್ತು. ಅಮೆರಿಕ ಕೂಡಾ ಅವರ ವೀಸಾ ರದ್ದುಪಡಿಸಿತ್ತು. ಹೀಗಾಗಿ ಭಾರತದಲ್ಲಿಯೇ ಉಳಿದಿದ್ದಾರೆ.
 

58
2.ಗೋಟಬಯ ರಾಜಪಕ್ಸೆ, ಶ್ರೀಲಂಕಾ ಮಾಜಿ ಅಧ್ಯಕ್ಷ

2.ಗೋಟಬಯ ರಾಜಪಕ್ಸೆ, ಶ್ರೀಲಂಕಾ ಮಾಜಿ ಅಧ್ಯಕ್ಷ

2.ಗೋಟಬಯ ರಾಜಪಕ್ಸೆ, ಶ್ರೀಲಂಕಾ ಮಾಜಿ ಅಧ್ಯಕ್ಷ
ಕಳಪೆ ನೀತಿಗಳಿಂದಾಗಿ 2022ರಲ್ಲಿ ಶ್ರೀಲಂಕಾದ ಆರ್ಥಿಕತೆ ಕುಸಿದಿದ್ದು, ಹಣದುಬ್ಬರ ಶೇ.50ರಷ್ಟಾಗಿತ್ತು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ವಿದೇಶಿ ವಿನಿಮಯದ ಕೊರತೆಯಿಂದಾಗಿ ವಿದೇಶಗಳಿಂದಲೂ ಅವುಗಳನ್ನು ಆಮದು ಮಾಡಿಕೊಳ್ಳಲು ದೇಶ ಶಕ್ತವಾಗಿರಲಿಲ್ಲ. ಪರಿಣಾಮವಾಗಿ ಆಹಾರ ಹಾಗೂ ಇಂಧನದ ಬೆಲೆ ಗಗನಕ್ಕೇರಿದ್ದು, ಜನ ಸರ್ಕಾರದ ವಿರುದ್ಧ ತಿರುಗಿಬಿದ್ದರು. ಇದರಿಂದಾಗಿ ಲಂಕಾ ಅಧ್ಯಕ್ಷರಾಗಿದ್ದ ಗೋಟಬಯ ರಾಜಪಕ್ಸೆ ಅನಿವಾರ್ಯವಾಗಿ ದೇಶತೊರೆದು ಸಿಂಗಾಪುರಕ್ಕೆ ತೆರಳಿ, ರಾಜೀನಾಮೆ ಘೋಷಿಸಿದರು.

68
3.ಸದ್ದಾಂ ಹುಸೇನ್‌, ಇರಾಕ್‌ ಸರ್ವಾಧಿಕಾರಿ

3.ಸದ್ದಾಂ ಹುಸೇನ್‌, ಇರಾಕ್‌ ಸರ್ವಾಧಿಕಾರಿ

3.ಸದ್ದಾಂ ಹುಸೇನ್‌, ಇರಾಕ್‌ ಸರ್ವಾಧಿಕಾರಿ
ಈತ 1979ರಲ್ಲಿ ಇರಾಕ್‌ನ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದು ಸತತ 24 ವರ್ಷಗಳ ಕಾಲ ಸರ್ವಾಧಿಕಾರಿಯಾಗಿ ದೇಶವನ್ನು ಆಳಿದವನು. ಅಮೆರಿಕದ ಅವಳಿ ಕಟ್ಟಡಗಳ ಮೇಲೆ ನಡೆದ 9/11 ದಾಳಿಯಲ್ಲಿ ಸದ್ದಾಂ ಉಗ್ರರಿಗೆ ನೆರವಾಗಿದ್ದ ಎಂಬ ಆರೋಪವೂ ಇದ್ದು, ಅಮೆರಿಕ ಈತನ ಮೇಲೆ ದಾಳಿ ನಡೆಸಿ ಸೆರೆಹಿಡಿಯಿತ್ತು. 1982ರಲ್ಲಿ ತನ್ನ ಮೇಲೆ ನಡೆದ ಹತ್ಯೆಯತ್ನಕ್ಕೆ ಪ್ರತೀಕಾರವಾಗಿ ಈತ ದುಜೈಲ್‌ನಲ್ಲಿ 148 ಶಿಯಾ ಮುಸ್ಲಿಮರ ಮಾರಣ ಹೋಮ ನಡೆಸಿದ್ದ. ಆದ್ದರಿಂದ ಆತನಿಗೆ 2006ರ ಡಿ.30ರಂದು ಗಲ್ಲುಶಿಕ್ಷೆ ವಿಧಿಸಲಾಯಿತು.

78
4.ಮುಅಮ್ಮರ್‌ ಗಡಾಫಿ, ಲಿಬಿಯಾ ಸರ್ವಾಧಿಕಾರಿ

4.ಮುಅಮ್ಮರ್‌ ಗಡಾಫಿ, ಲಿಬಿಯಾ ಸರ್ವಾಧಿಕಾರಿ

4.ಮುಅಮ್ಮರ್‌ ಗಡಾಫಿ, ಲಿಬಿಯಾ ಸರ್ವಾಧಿಕಾರಿ
ಗಡಾಫಿ ಸತತ 4 ದಶಕಗಳ ಕಾಲ ಲಿಬಿಯಾವನ್ನು ಆಳಿದ ಸೇನಾ ಸರ್ವಾಧಿಕಾರಿ. 1969 ಸೆ.1ರಂದು ಅಧಿಕಾರಕ್ಕೇರಿದ ಇವನ ಆಡಳಿತದಿಂದ ಅಸಾಮಾಧಾನಗೊಂಡಿದ್ದ ಜನ, ರಾಜಕೀಯ ಕೈದಿಗಳನ್ನು ಬಂಧ ಮುಕ್ತಗೊಳಿಸಿ ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಿ ಪ್ರತಿಭಟನೆ ಪ್ರಾರಂಭಿಸಿದರು. ಇದು ತೀವ್ರ ರೋಪ ಪಡೆದಿದ್ದು, ಗಡಾಫಿಯ ಕೇಂದ್ರ ಕಚೇರಿ ಇದ್ದ ಟ್ರಿಪೋಲಿ ನಗರವನ್ನು ದಂಗೆಕೋರರು ವಶಕ್ಕೆ ಪಡೆದರು. ಅಂತಿಮವಾಗಿ 2011ರ ಅ.20ರಂದು ಗಡಾಫಿಯನ್ನು ಹತ್ಯೆಗೈಯ್ಯಲಾಯಿತು.

88
ಅರಬ್‌ ದಂಗೆಗೆ ಅಧಿಕಾರ ಕಳೆದುಕೊಂಡವರು

ಅರಬ್‌ ದಂಗೆಗೆ ಅಧಿಕಾರ ಕಳೆದುಕೊಂಡವರು

ಅರಬ್‌ ದಂಗೆಗೆ ಅಧಿಕಾರ ಕಳೆದುಕೊಂಡವರು

ಅರಬ್‌ ದಂಗೆಗೆ ಸಿರಿಯಾ ಸರ್ವಾಧಿಕಾರಿ ಬಷರ್‌ ಅಧಿಕಾರ ಕಳೆದುಕೊಂಡ ರೀತಿಯೇ ಈ ಹಿಂದೆಯೂ ಹಲವು ಅರಬ್‌ ದೇಶಗಳ ಮುಖ್ಯಸ್ಥರು ಚುಕ್ಕಾಣಿ ಕಳೆದುಕೊಂಡಿದ್ದಾರೆ. ಟುನಿಷಿಯಾದಲ್ಲಿ ಬೆನ್‌ ಅಲಿ (2011) , ಲಿಬಿಯಾದಲ್ಲಿ ಗಡಾಫಿ (2011), ಈಜಿಪ್ಟ್‌ನಲ್ಲಿ ಹೋಸ್ನಿ ಮುಬಾರಕ್‌ (2011) ಮತ್ತು ಮೊಹಮ್ಮದ್‌ ಮೋರ್ಸಿ (2013) ಮತ್ತು ಯೆಮೆನ್‌ನಲ್ಲಿ ಅಲಿ ಅಬ್ದುಲ್ಲಾ ಸಲೆಹ್‌ (2012) ಅಧಿಕಾರ ಕಳೆದುಕೊಂಡರು.
 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಿರಿಯಾ
ಬಾಂಗ್ಲಾದೇಶ

Latest Videos
Recommended Stories
Recommended image1
ಭಾರತೀಯ ರೈಲ್ವೆಯಿಂದ ಆಕರ್ಷಕ 'ಬಾಲಿ ಪ್ರವಾಸ ಪ್ಯಾಕೇಜ್': ಹೈದರಾಬಾದ್‌ನಿಂದ ಕೈಗೆಟುಕುವ ದರದಲ್ಲಿ ಇಂಡೋನೇಷ್ಯಾ ಸುತ್ತಿ!
Recommended image2
Sergio Gor: 'ಪಿಒಕೆ ಜನ ಭಾರತ ಸೇರಲು ಬಯಸುತ್ತಾರೆ..' ; ಅಮೆರಿಕ ರಾಯಭಾರಿ ಹೇಳಿಕೆಯಿಂದ ಪಾಕಿಸ್ತಾನಕ್ಕೆ ಆಘಾತ!
Recommended image3
13 ಮಕ್ಕಳಿದ್ದರೂ ತಂದೆಗೆ ಗತಿಯಿಲ್ಲ! ಅಧಿಕಾರಿಗಳ ಕಾಲು ಹಿಡಿದು ‘ಅನ್ನ ಕೊಡಿಸಿ’ ಎಂದು ಅತ್ತ ತಂದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved