2011ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಉಗ್ರ ತಹಾವುರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಿದ ಬೆನ್ನಲ್ಲೇ, 2011ರಲ್ಲಿ ಮೋದಿ ಮಾಡಿದ್ದ ಟ್ವೀಟ್ ವೈರಲ್ ಆಗಿದೆ. ಮುಂಬೈ ದಾಳಿಯಲ್ಲಿ ರಾಣಾನ ಪಾತ್ರದ ಬಗ್ಗೆ ಮೋದಿ ಅಂದಿನ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದರು.

ಉಗ್ರ ತಹಾವುರ್ ರಾಣಾ ಭಾರತಕ್ಕೆ ಗಡೀಪಾರಾದ ಬೆನ್ನಲ್ಲೇ, 2011ರಲ್ಲಿ ಮೋದಿ ಮಾಡಿದ್ದ ಟ್ವೀಟ್ ಒಂದು ಇದೀಗ ವೈರಲ್ ಆಗುತ್ತಿದೆ. 14 ವರ್ಷಗಳ ಹಿಂದೆ ಅಮೆರಿಕದ ನ್ಯಾಯಾಲಯವು, ‘166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯಲ್ಲಿ ರಾಣಾನ ನೇರ ಪಾತ್ರ ಇಲ್ಲ’ ಎಂದು ಆತನನ್ನು ದೋಷಮುಕ್ತಗೊಳಿಸಿತ್ತು.
ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಮೋದಿ, ‘ಮುಂಬೈ ದಾಳಿಯಲ್ಲಿ ತಹಾವುರ್ ರಾಣಾನನ್ನು ನಿರಪರಾಧಿ ಎಂದು ಅಮೆರಿಕ ಘೋಷಿಸಿದ್ದು ಭಾರತದ ಸಾರ್ವಭೌಮತ್ವಕ್ಕೆ ಅವಮಾನ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಪ್ರಮುಖ ವಿದೇಶಾಂಗ ನೀತಿಯ ಹಿನ್ನಡೆ’ ಎಂದು ಟ್ವೀಟ್ ಮಾಡಿದ್ದರು.ಅವರ ಅಂದಿನ ಟ್ವೀಟ್ ಈಗ ವೈರಲ್ ಆಗುತ್ತಿದ್ದು, ‘ಮೋದಿ ಇದ್ದರೆ ಎಲ್ಲಾ ಸಾಧ್ಯ.
ಅವರು ನುಡಿದಂತೆ ನಡೆಯುವ ನಾಯಕ’ ಎಂದು ಕೆಲವು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಪಾಕ್ ಮೇಲೆ ಹಾರದ ರಾಣಾ ವಿಮಾನನವದೆಹಲಿ: 26/11 ದಾಳಿಯ ಸಂಚುಕೋರ ತಹಾವುರ್ ರಾಣಾನನ್ನು ಅಮೆರಿಕದಿಂದ ದೆಹಲಿಗೆ ಕರೆತಂದ ಚಾರ್ಟರ್ಡ್ ಬ್ಯುಸಿನೆಸ್ ವಿಮಾನ ಗುರುವಾರ ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಬಾರದೇ ಸುತ್ತಿ ಬಳಸಿ ಭಾರತಕ್ಕೆ ಆಗಮಿಸಿತು. ಆದರೆ ಅದು ಮತ್ತೆ ಅಮೆರಿಕಕ್ಕೆ ಹಿಂದಿರುಗುವಾಗ ಪಾಕಿಸ್ತಾನದ ಮೇಲೆ ಸಾಮಾನ್ಯ ಮಾರ್ಗದಲ್ಲೇ ಸಾಗಿತು.
ಪಾಕ್ ಮೇಲೆ ಹಾರದ ವಿಮಾನ
26/11 ದಾಳಿಯ ಸಂಚುಕೋರ ತಹಾವುರ್ ರಾಣಾನನ್ನು ಅಮೆರಿಕದಿಂದ ದೆಹಲಿಗೆ ಕರೆತಂದ ಚಾರ್ಟರ್ಡ್ ಬ್ಯುಸಿನೆಸ್ ವಿಮಾನ ಗುರುವಾರ ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಬಾರದೇ ಸುತ್ತಿ ಬಳಸಿ ಭಾರತಕ್ಕೆ ಆಗಮಿಸಿತು. ಆದರೆ ಅದು ಮತ್ತೆ ಅಮೆರಿಕಕ್ಕೆ ಹಿಂದಿರುಗುವಾಗ ಪಾಕಿಸ್ತಾನದ ಮೇಲೆ ಸಾಮಾನ್ಯ ಮಾರ್ಗದಲ್ಲೇ ಸಾಗಿತು. ಇದಲ್ಲದೆ, ವಿಮಾನದ ಟ್ರಾಕರ್‌ಗಳು ಅದರ ಮೇಲೆ ನಿಗಾ ಇಡುವ ಸಾಧ್ಯತೆ ಇದ್ದ ಕಾರಣ ವಿಮಾನಕ್ಕೆ ಡಮ್ಮಿ ಕೋಡ್ ಬಳಸಲಾಗಿತ್ತು ಎಂದು ಗೊತ್ತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ