ದೂರವಾಣಿ ಮೂಲಕ ಸೌರವ್ ಗಂಗೂಲಿ ಜೊತೆ ಮೋದಿ ಮಾತು; ಶೀಘ್ರ ಚೇತರಿಕೆಗೆ ಹಾರೈಕೆ!
First Published Jan 3, 2021, 9:38 PM IST
ಲಘು ಹೃದಯಾಘಾತದಿಂದ ಆಸ್ಪತ್ರೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಆ್ಯಂಜಿಪ್ಲಾಸ್ಟಿ ಸರ್ಜರಿ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಕ್ರಿಕೆಟಿಗರು, ದಿಗ್ಗಜರು ಗಂಗೂಲಿ ಚೇತರಿಕೆಗೆ ಶುಭ ಹಾರೈಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಸೌರವ್ ಗಂಗೂಲಿ ಜೊತೆ ಮಾತನಾಡಿದ್ದಾರೆ. ಮೋದಿ ಹಾಗೂ ಗಂಗೂಲಿ ಮಾತುಕತೆ ವಿವರ ಇಲ್ಲಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಲಘು ಹೃದಯಾಘಾತದಿಂದ ನಿನ್ನೆ(ಜ.02) ಕೋಲ್ಕತಾದ ವುಡ್‌ಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದರು. ಆ್ಯಂಜಿಯೋಪ್ಲಾಸ್ಟಿ ಸರ್ಜರಿ ಬಳಿಕ ಗಂಗೂಲಿ ಆರೋಗ್ಯ ಚೇತರಿಸಿಕೊಂಡಿದೆ.

ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ಹಲವು ದಿಗ್ಗಜರು ಸೌರವ್ ಗಂಗೂಲಿ ಅದಷ್ಟು ಬೇಗ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಸೌರವ್ ಗಂಗೂಲಿ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?