- Home
- News
- India News
- ಮೋದಿ ಜೊತೆ ಪದ್ಮಭೂಷಣ ಪ್ರಶಸ್ತಿ ವಿಜೇತ ಮಮ್ಮೂಟ್ಟಿ ಹಾಗೂ ಕುಟುಂಬ, ಸುಂದರ ಕ್ಷಣ ಹಂಚಿಕೊಂಡ ಪ್ರಧಾನಿ
ಮೋದಿ ಜೊತೆ ಪದ್ಮಭೂಷಣ ಪ್ರಶಸ್ತಿ ವಿಜೇತ ಮಮ್ಮೂಟ್ಟಿ ಹಾಗೂ ಕುಟುಂಬ, ಸುಂದರ ಕ್ಷಣ ಹಂಚಿಕೊಂಡ ಪ್ರಧಾನಿ
ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇಂದು ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ನಡುವೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಮಮ್ಮೂಟ್ಟಿ ಹಾಗೂ ಕುಟುಂಬ ಪ್ರಧಾನಿ ಮೋದಿ ಜೊತೆ ಕೆಲ ಹೊತ್ತು ಕಳೆದಿದ್ದಾರೆ.

ಪ್ರಧಾನಿ ಮೋದಿ ಜೊತೆ ಪದ್ಮ ಪ್ರಶಸ್ತಿ ವಿಜೇತ ಮಮ್ಮೂಟ್ಟಿ
2026ರ ಸಾಲಿನ ಪದ್ಮ ಪ್ರಶಸ್ತಿಯನ್ನು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಧಕರಿಗೆ ನೀಡಿ ಗೌರವಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ವಿತರಿಸಲಾಗಿದೆ. ವಿಶೇಷ ಅಂದರೆ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ನಟ ಮಮ್ಮೂಟ್ಟಿ ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಮಮ್ಮೂಟ್ಟಿ ಕುಟುಂಬ ಕೆಲ ಹೊತ್ತು ಮೋದಿ ಜೊತೆ ಚರ್ಚಿಸಿದ್ದಾರೆ.
ಮೋದಿ ಜೊತೆ ಮಮ್ಮೂಟ್ಟಿ
ಮಳೆಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಲೆ ವಿಭಾಗದಲ್ಲಿ ಮಮ್ಮೂಟಿ ಸಾಧನೆ, ಕೊಡುಗೆ ಪರಿಗಣಿಸಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದಕ್ಕೂ ಮೊದಲು ಮಮ್ಮೂಟ್ಟಿ ಮೋದಿ ಭೇಟಿಯಾಗಿದ್ದಾರೆ. ಮಮ್ಮೂಟ್ಟಿ ಜೊತೆ ಪತ್ನಿಯೂ ಜೊತೆಗಿದ್ದರು.
ದುಲ್ಕರ್ ಸೇರಿ ಮಮ್ಮೂಟ್ಟಿ ಕುಟುಂಬ
ಮಮ್ಮೂಟ್ಟಿ ಸೂಪರ್ ಸ್ಟಾರ್ ಆಗಿದ್ದರೆ, ಪುತ್ರ ದುಲ್ಕರ್ ಸಲ್ಮಾನ್ ಕೂಡ ಮಳೆಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟನಾಗಿ ಮಿಂಚುತ್ತಿದ್ದಾರೆ. ಇಂದು ಮಮ್ಮೂಟ್ಟಿ ಜೊತೆ ದುಲ್ಕರ್ ಸಲ್ಮಾನ್ ಕೂಡ ಮೋದಿ ಭೇಟಿಯಾಗಿದ್ದಾರೆ. ಇದೇ ವೇಳೆ ದುಲ್ಕರ್ ಪತ್ನಿಯೂ ಜೊತೆಗಿದ್ದರು.
ಸದ್ದು ಮಾಡುತ್ತಿದೆ ಮಮ್ಮೂಟ್ಟಿ ಮೋದಿ ಭೇಟಿ
ಮಮ್ಮೂಟ್ಟಿ ಜೊತೆಗೆ ಪದ್ಮಭೂಷಮ ಪ್ರಶಸ್ತಿಯನ್ನು ಗಾಯಕಿ ಅಲ್ಕಾ ಯಾಗ್ನಿಕ್ ಸ್ವೀಕರಿಸಿದ್ದಾರೆ. ಇಬ್ಬರು 2025ರ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಸಾಧಕರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಇತ್ತ ಮಮ್ಮೂಟ್ಟಿ ಮೋದಿ ಭೇಟಿಯೂ ಭಾರಿ ಸದ್ದು ಮಾಡುತ್ತಿದೆ .
ಪದ್ಮಶ್ರೀ ಪ್ರಶಸ್ತಿ
ಮಮ್ಮೂಟ್ಟಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರೆ, ನಟ ಮಗಂತಿ ಮರುಳಿ ಮೋಹನ್, ಜನಪದ ಕಲಾವಿದ ಗುರು ಸಂಗ್ಯುಸಂಗ್ ಪೊಂಗನೆರ್, ನಟ ರಾಜೇಂದ್ರ ಪ್ರಸಾದ್, ಆರ್ ಮಾಧವನ್, ಅನಿಲ್ ಕುಮಾರ್ ರಸಗೋಟಿ, ದಿವಗಂತ ನಟ ಸತೀಶ್ ಶಾ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

