ಪಿಎಂ ಮೋದಿ ಬಳಿ 4 ಚಿನ್ನದುಂಗರ: ಇಲ್ಲಿದೆ ನೋಡಿ ಒಟ್ಟು ಆಸ್ತಿ ವಿವರ!

First Published 15, Oct 2020, 1:02 PM

ಪ್ರಧಾನಿ ನರೇಂದ್ರ ಮೋದಿ ಪಿಎಂಒಗೆ ತಮ್ಮ ನೂತನ ಆಸ್ತಿ ವಿವರ ಪತ್ರ  ಸಲ್ಲಿಸಿದ್ದಾರೆ. ಇದರ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದ್ರೆ ಮೋದಿ ಆಸ್ತಿ 36 ಲಕ್ಷ ರೂಪಾಯಿಯಷ್ಟು ಹೆಚ್ಚಳವಾಗಿದೆ. ಆದ್ರೆ ಗೃಹಸಚಿವ ಅಮಿತ್ ಶಾ ಅವರ ಆಸ್ತಿಯಲ್ಲಿ ಗಣನೀಯ ಇಳಿಕೆಯಾಗಿದೆ. ಇಲ್ಲಿದೆ ನೋಡಿ ಮೋದಿ ಆಸ್ತಿ ವಿವರ.

2020 ಜೂನ್​​​ 30ಕ್ಕೆ ಮೋದಿ ಆಸ್ತಿ 2.85 ಕೋಟಿ ರೂಪಾಯಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಅವರ ಆಸ್ತಿ 2.49 ಕೋಟಿ ಇತ್ತು.

ಈ ವರ್ಷಕ್ಕೆ ಹೋಲಿಸಿದ್ರೆ 36 ಲಕ್ಷ ರೂಪಾಯಿ ಏರಿಕೆಯಾಗಿದೆ.  ಬ್ಯಾಂಕ್​​ ಠೇವಣಿಯಿಂದ 3.3 ಲಕ್ಷ ರೂಪಾಯಿ ಹಾಗೂ ಸೇಫ್​​ ಇನ್ವೆಸ್ಟ್​​ಮೆಂಟ್​​ ರಿಟರ್ನ್ಸ್​ನಿಂದ ಕಳೆದ ಒಂದು ವರ್ಷದಲ್ಲಿ 33 ಲಕ್ಷ ರೂಪಾಯಿ ಬಂದಿದೆ ಎಂದು ತಿಳಿದು ಬಂದಿದೆ.

ಜೂನ್​​ ಅಂತ್ಯದ ವೇಳೆಗೆ ಮೋದಿ ಬಳಿ ನಗದು ರೂಪದಲ್ಲಿ ₹31,450 ಇದ್ದರೆ, ಗಾಂಧಿನಗರ ಎಸ್​ಬಿಐ ಬ್ಯಾಂಕ್​ ಖಾತೆಯಲ್ಲಿ 3,38,173 ರೂಪಾಯಿ ಬ್ಯಾಲೆನ್ಸ್​ ಇದೆ.

ಇದೇ ಬ್ಯಾಂಕ್​ನಲ್ಲಿ Fixed Deposit​ ಹಾಗೂ ಎಂಓಡಿ ಬ್ಯಾಲೆನ್ಸ್​ 1,60,28,939 ರೂಪಾಯಿ ಇದೆ.

₹8,43,124 ಮೊತ್ತದ ನ್ಯಾಷನಲ್ ಸೇವಿಂಗ್ಸ್​ ಸರ್ಟಿಫಿಕೇಟ್, ₹1,50,957 ಮೊತ್ತದ ಜೀವ ವಿಮೆ ಪಾಲಿಸಿ, ₹20,000 ಮೊತ್ತದ ಟ್ಯಾಕ್ಸ್​ ಸೇವಿಂಗ್ ಇನ್​ಫ್ರಾ ಬಾಂಡ್​​ ಹೊಂದಿದ್ದಾರೆ.

1.75 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಮೋದಿ ಘೋಷಿಸಿದ್ದಾರೆ.

ಮೋದಿ ತಮ್ಮ ಹೆಸರಿನಲ್ಲಿ ಯಾವುದೇ ಸಾಲ ಅಥವಾ ಖಾಸಗಿ ವಾಹನ ಹೊಂದಿಲ್ಲ.

ಮೋದಿ ಬಳಿ ಸುಮಾರು 45 ಗ್ರಾಂ ತೂಕದ 4 ಚಿನ್ನದ ಉಂಗುರಗಳಿದ್ದು, ಇದರ ಮೌಲ್ಯ ₹1.5 ಲಕ್ಷ

ಗಾಂಧಿನಗರದ ಸೆಕ್ಟರ್​-1ರಲ್ಲಿ ಜಂಟಿ ಮಾಲೀಕತ್ವದಲ್ಲಿ 3,531 ಚದರ ಅಡಿಯ ಒಂದು ಸೈಟ್​ ಹೊಂದಿರುವುದಾಗಿ ಮೋದಿ ತಿಳಿಸಿದ್ದಾರೆ. ಇದ್ರಲ್ಲಿ ಮೂವರು ಜಂಟಿ ಮಾಲೀಕತ್ವ ಹೊಂದಿದ್ದು, ಪ್ರತಿಯೊಬ್ಬರೂ ಶೇ 25ರಷ್ಟು ಪಾಲು ಹೊಂದಿರುವುದಾಗಿ ಆಸ್ತಿ ಘೋಷಣೆಯ ಕೊನೆಯಲ್ಲಿ ತಿಳಿಸಿದ್ದಾರೆ.

2002ರ ಅಕ್ಟೋಬರ್​​ 25ರಂದು ಮೋದಿ ಗುಜರಾತ್​ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಎರಡು ತಿಂಗಳ ಮುನ್ನ 1.3 ಲಕ್ಷ ರೂಪಾಯಿಗೆ ಈ ಸೈಟ್​ ಖರೀದಿಸಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.  ಪ್ರಸ್ತುವ ಮೋದಿ ಅವರ ಆಸ್ತಿ ಪಾಲು ಅಥವಾ ಸ್ಥರಾಸ್ತಿಯ ಮಾರುಕಟ್ಟೆ ಮೌಲ್ಯ 1.10 ಕೋಟಿ ರೂಪಾಯಿ.

loader