ಪ್ರತಿ ಟ್ವೀಟ್‌ಗೆ ಗರಿಷ್ಠ ಲೈಕ್ಸ್ , ಭಾರತದಲ್ಲಿ ನಂ.1 ಪ್ರಧಾನಿ ಮೋದಿ, ನಂತರದ ಸ್ಥಾನ ಯಾರಿಗೆ?
ಪ್ರತಿ ಟ್ವೀಟ್‌ಗೆ ಗರಿಷ್ಠ ಲೈಕ್ಸ್ , ಭಾರತದಲ್ಲಿ ನಂ.1 ಪ್ರಧಾನಿ ಮೋದಿ, ನಂತರದ ಸ್ಥಾನ ಯಾರಿಗೆ? ರಾಜಕೀಯ ನಾಯಕರ ಪೈಕಿ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಬಹುತೇಕ ನಾಯಕರು ಸೋಶಿಯಲ್ ಮೀಡಿಯಾ ಮೂಲಕ ಸಕ್ರಿಯವಾಗಿದ್ದಾರೆ. ಯರಿಗೆಲ್ಲಾ ಸಿಕ್ಕಿದೆ ಗರಿಷ್ಠ ಲೈಕ್ಸ್

ಗರಿಷ್ಠ ಲೈಕ್ಸ್ ಪಟ್ಟಿ
ಪ್ರಧಾನಿ ನರೇಂದ್ರ ವಿಶ್ವ ವಿಶ್ವದ ಅತೀ ಜನಪ್ರಿಯ ನಾಯಕ. ವಿಶ್ವದ ನಾಯಕ ರೇಟಿಂಗ್‌ನಲ್ಲಿ ಮೋದಿ ಗರಿಷ್ಠ ರೇಟಿಂಗ್ ಮೂಲಕ ನಂಬರ್ ಸ್ಥಾನದಲ್ಲಿದ್ದಾರೆ. ಇದೀಗ ಎಕ್ಸ್ ಕಳೆದ ತಿಂಗಳಿನಿಂದ ಇಲ್ಲೀವರೆಗೆ ಗರಿಷ್ಠ ಲೈಕ್ಸ್ ಪಡೆದ ಜನ ನಾಯಕರು ಯಾರು ಅನ್ನೋ ಪಟ್ಟಿ ಬಿಡುಗಡೆ ಮಾಡಿದೆ. ಭಾರತದ ನಾಯಕರ ಪೈಕಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಮೋದಿ ಅಧಿಪತ್ಯ
ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮೀಡಿಯಾದಲ್ಲಿ ಅಧಿಪತ್ಯ ಸಾಧಿಸಿದ್ದಾರೆ. ಬಹುತೇಕ ನಾಯಕರು ಮೋದಿಗಿಂತ ಹೆಚ್ಚು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.ಆದರ ಮೋದಿ ಟ್ವೀಟ್, ಪೋಸ್ಟ್‌ಗಳಿಗೆ ಗರಿಷ್ಠ ಲೈಕ್ಸ್, ಎಂಗೇಜ್‌ಮೆಂಟ್ ಸಿಗುತ್ತಿದೆ. ಇದೀಗ ಎಕ್ಸ್ ಬಹಿರಂಗಪಡಿಸಿದ ಲಿಸ್ಟ್‌ನಲ್ಲಿ ಬಯಲಾಗಿದೆ.
10 ರಲ್ಲಿ 8 ಟ್ವೀಟ್ಸ್‌ನಲ್ಲೂ ಮೋದಿ ಸ್ಟಾರ್
ಕಳೆದ 30 ದಿನಗಳ ಎಕ್ಸ್ ಅಂಶಿ ಅಂಶ ಪ್ರಕಾರ, ಭಾರತದ ನಾಯಕರಗಳ ಪೈಕಿ ಪ್ರಧಾನಿ ಮೋದಿ ಪ್ರತಿ ಟ್ವೀಟ್ ಗರಿಷ್ಠ ಲೈಕ್ಸ್ ಪಡೆಯುತ್ತಿದೆ. 10 ಟ್ವೀಟ್‌ಗಳ ಪೈಕಿ 8 ಟ್ವೀಟ್‌ನಲ್ಲೂ ಮೋದಿ ಗರಿಷ್ಠ ಲೈಕ್ಸ್, ಎಂಗೇಜ್‌ಮೆಂಟ್ ಪಡೆದಿದ್ದಾರೆ. ಹೀಗಾಗಿ ಮೋದಿ ಪ್ರತಿ ಪೋಸ್ಟ್ ಗರಿಷ್ಠ ಪ್ರತಿಕ್ರಿಯೆಗಳು ಪಡೆಯುವ ಮೂಲಕ ನಂಬರ್ 1 ಆಗಿದ್ದಾರೆ.
ಮೋದಿ ನಂತರದ ಸ್ಥಾನ ಯಾರಿಗೆ?
ಭಾರತದಲ್ಲಿ ಟ್ವೀಟ್‌ಗೆ ಗರಿಷ್ಠ ಲೈಕ್ಸ್ ಹಾಗೂ ಎಂಗೇಜ್‌ಮೆಂಟ್ ಪಡೆಯು ನಾಯಕ ನರೇಂದ್ರ ಮೋದಿ. ವಿಶೇಷ ಅಂದರೆ ಟಾಪ್ 10 ಪಟ್ಟಿಯಲ್ಲಿ ಯಾವೊಬ್ಬ ಭಾರತೀಯ ಜನ ನಾಯಕ ಸ್ಥಾನ ಪಡೆದಿಲ್ಲ. ಮೋದಿ ಪಡೆಯುವ ಲೈಕ್ಸ್ ಹತ್ತಿರಕ್ಕೂ ಇತರ ನಾಯಕರಿಗೆ ಬರಲು ಸಾಧ್ಯವಾಗಿಲ್ಲ.
ಕಳೆದ 30 ದಿನದಲ್ಲಿ ಗರಿಷ್ಠ ಲೈಕ್ಸ್ ಪಡೆದ ಟ್ವೀಟ್ ಯಾವುದು?
ಕಳೆದ 30 ದಿನಗಳಲ್ಲಿ ಪ್ರಧಾನಿ ಮೋದಿಯ ಯಾವ ಟ್ವೀಟ್ ಗರಿಷ್ಠ ಲೈಕ್ಸ್ ಪಡೆದಿದೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಭೇಟಿ ವೇಳೆ ಪ್ರದಾನಿ ನರೇಂದ್ರ ಮೋದಿ ಭಗವದ್ಗೀತೆ ಉಡುಗೊರೆಯಾಗಿ ನೀಡಿದ ಪೋಸ್ಟ್ ಅತೀ ಹೆಚ್ಚು ಲೈಕ್ಸ್ ಪಡೆದಿದೆ.
ಕಳೆದ 30 ದಿನದಲ್ಲಿ ಗರಿಷ್ಠ ಲೈಕ್ಸ್ ಪಡೆದ ಟ್ವೀಟ್ ಯಾವುದು?
ಪುಟಿನ್ ಜೊತೆಗೆ ಮೋದಿ ಟ್ವೀಟ್‌ಗಳಿಗೆ ಭಾರಿ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಸ್ವಾಗತಿಸಿ ಕಾರಿನಲ್ಲಿ ಜೊತೆಯಾಗಿ ತೆರಳುವಾಗ ತೆಗೆದ ಫೋಟೋವನ್ನು ಮೋದಿ ಟ್ವೀಟ್ ಮಾಡಿದ್ದರು. ನನ್ ಆತ್ಮೀಯ ಗೆಳೆಯ, ರಷ್ಯಾ ಅಧ್ಯಕ್ಷ ಪುಟಿನ್ ಆತ್ಮೀಯ ಸ್ವಾಗತಿಸಿದ್ದೇನೆ. ಪುಟಿನ್ ಜೊತೆಗಿನ ದ್ವಿಪಕ್ಷೀಯ ಮಾತುಕತೆ ಎದುರುನೋಡತ್ತಿದ್ದೇನೆ ಎಂಬ ಟ್ವೀಟ್ ಸೇರಿದಂತೆ, ಮೋದಿ-ಪುಟಿನ್ ಜೊತೆಗಿನ ಹಲವು ಟ್ವೀಟ್‌ಗಳು ಮೋದಿಗೆ ಗರಿಷ್ಠ ಲೈಕ್ಸ್ ತಂದುಕೊಟ್ಟಿದೆ.
ಪುಟಿನ್ ಜೊತೆಗೆ ಮೋದಿ ಟ್ವೀಟ್‌ಗಳಿಗೆ ಭಾರಿ ಮೆಚ್ಚುಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

