ಭಾರತೀಯ ಸೇನೆಗೆ ಸ್ವದೇಶಿ ಬಲ: ಮೋದಿಯಿಂದ ಅರ್ಜುನ ಯುದ್ಧ ಟ್ಯಾಂಕ್ ಹಸ್ತಾಂತರ!
ಭಾರತೀಯ ಸೇನೆಗೆ ಅರ್ಜುನ್ ಯುದ್ಧ ಟ್ಯಾಂಕ್ (ಎಂಕೆ-1ಎ)ನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ 14ರಂದು ಸೇನಾ ಮುಖ್ಯಸ್ಥ ಎಂ. ಎಂ ನರವಣೆಯವರಿಗೆ ತಮಿಳುನಾಡಿನಲ್ಲಿ ಹಸ್ತಾಂತರಿಸಿದರು
ತಮಿಳುನಾಡಿನ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭೂ ಸೇನಾ ಮುಖ್ಯಸ್ಥ ಜನರಲ್ ಎಂ.ಎ. ನರವಣೆ ಅವರಿಗೆ ಅರ್ಜುನ್ ಟ್ಯಾಂಕ್ ಹಸ್ತಾಂತರಿಸಿದರು.
ಯುದ್ಧ ವಾಹನ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ, ಡಿಆರ್‌ಡಿಒ ಜಂಟಿಯಾಗಿ ಅರ್ಜುನ್ ಯುದ್ಧ ಟ್ಯಾಂಕ್ ದೇಶೀಯವಾಗಿ ವಿನ್ಯಾಸ, ಅಭಿವೃದ್ಧಿ ಹಾಗೂ ನಿರ್ಮಾಣಗೊಳಿಸಿದೆ.
ಸುಮಾರು 8,400 ಕೋಟಿ ರೂ. ವೆಚ್ಚದ ಈ ಯುದ್ಧ ಟ್ಯಾಂಕರ್‌ಗಳು ಸಂಪೂರ್ಣ ಸ್ವದೇಶಿ. ಅರ್ಜುನ ಟ್ಯಾಂಕರ್‌ಗಳ ಸರಣಿಯ ನೂತನ ಮಾದರಿಯ ಟ್ಯಾಂಕರ್‌ಗಳು ಇದಾಗಿದೆ.
ಈಗಾಗಲೇ ಮೊದಲ ಬ್ಯಾಚ್‌ನ 124 ಅರ್ಜುನ ಯುದ್ಧ ಟ್ಯಾಂಕ್‌ಗಳು ಪಾಕಿಸ್ತಾನ ಗಡಿಯಲ್ಲಿ ನಿಯೋಜಿತವಾಗಿವೆ.
ಇಂದು ಹಸ್ತಾಂತರಿಸಿದ ರಾಜಸ್ಥಾನ ಮರುಭೂಮಿಯಲ್ಲಿ ಈ ಟ್ಯಾಂಕರ್‌ಗಳು ಕಾರ್ಯನಿರ್ವಹಿಸುತ್ತಿದ್ದು. ಇದೀಗ 2ನೇ ಹಂತದಲ್ಲಿ 118 ಟ್ಯಾಂಕರ್‌ಗಳು ಸೇರ್ಪಡೆಗೊಳ್ಳಲಿವೆ.
ಇದರ ನಿರ್ಮಾಣದಲ್ಲಿ 15 ಶೈಕ್ಷಣಿಕ ಸಂಸ್ಥೆಗಳು, ಎಂಟು ಪ್ರಯೋಗಾಲಯಗಳು ಮತ್ತು ಹಲವಾರು ಎಂಎಸ್‌ಎಂಇಗಳು ನೆರವಾಗಿದ್ದವು.
ಭಾನುವಾರ, ತಮಿಳುನಾಡು ಹಾಗೂ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಲವಾರು ಯೋಜನೆಗಳನ್ನು ಉದ್ಘಾಟಿಸುತ್ತಿದ್ದು, ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಭೇಟಿ ಹೆಚ್ಚಿನ ಮಹತ್ವ ಕೆರಳಿಸಿದೆ.