10 ವರ್ಷದಲ್ಲಿ ಮುಸ್ಲಿಂ ಜನಸಂಖ್ಯೆ ಎಷ್ಟು ಏರಿಕೆ? ಹಿಂದೂಗಳ ಸಂಖ್ಯೆ ಎಷ್ಟು ಇಳಿಕೆ?
Pew Research Center ವರದಿಯ ಪ್ರಕಾರ, ಇಸ್ಲಾಂ ಧರ್ಮವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಧರ್ಮವಾಗಿದೆ. ಕಳೆದ ದಶಕದಲ್ಲಿ ಮುಸ್ಲಿಂ ಜನಸಂಖ್ಯೆಯು ಗಮನಾರ್ಹವಾಗಿ ಹೆಚ್ಚಾಗಿದ್ದು, ಈ ಬೆಳವಣಿಗೆಯು ಭವಿಷ್ಯದಲ್ಲಿ ಸಾಮಾಜಿಕ ಮತ್ತು ರಾಜಕೀಯ ಪರಿಣಾಮಗಳನ್ನು ಬೀರಲಿದೆ.

ಪ್ರಪಂಚದಲ್ಲಿ ಇಸ್ಲಾಂ ಧರ್ಮ ಬೆಳವಣಿಗೆಯಾಗುತ್ತಿದೆ ಎಂದು ವರದಿಗಳು ಬರುತ್ತಿವೆ. ಹಾಗೆಯೇ ಧಾರ್ಮಿಕ ಜನಸಂಖ್ಯೆಯೂ ಏರಿಕೆಯಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆ ಎಷ್ಟು ಏರಿಕೆಯಾಗಿದೆ ಎಂದು Pew Research Center ತನ್ನ ವರದಿಯಲ್ಲಿ ತಿಳಿಸಿದೆ.
Pew Research Center ವರದಿ ಪ್ರಕಾರ, ಇಸ್ಲಾಂ ವಿಶ್ವದ ಎರಡನೇ ಅತಿದೊಡ್ಡ ಧರ್ಮವಾಗಿ ಬೆಳವಣಿಗೆಯಾಗಿದೆ. ವೇಗವಾಗಿ ಬೆಳವಣಿಗೆಯಾಗುತ್ತಿರುವ ಧರ್ಮವೂ ಆಗಿದೆ. ಕಳೆದ ಒಂದು ದಶಕದಲ್ಲಿ ಎಷ್ಟು ಜನಸಂಖ್ಯೆ ಬೆಳವಣಿಗೆ ಆಗಿದೆ ಎಂದು ನೋಡೋಣ ಬನ್ನಿ.
Pew Research Center ವರದಿ ಪ್ರಕಾರ, 2010 ರಲ್ಲಿ ಮುಸ್ಲಿಂ ಜನಸಂಖ್ಯೆ 170 ಕೋಟಿಯಷ್ಟಿತ್ತು. ಇದೀಗ ಅದು 2020 ರ ವೇಳೆಗೆ 200 ಕೋಟಿಗೆ ತಲುಪಿದೆ. 10 ವರ್ಷದಲ್ಲಿ 30 ಕೋಟಿ ಅಂದ್ರೆ ಶೇ.21ರಷ್ಟು ಜನಸಂಖ್ಯೆ ಏರಿಕೆಯಾಗಿದೆ. ಇತರ ಧರ್ಮಗಳ ಜನಸಂಖ್ಯೆಯ ಬೆಳವಣಿಗೆ ದರ ಕೇವಲ ಶೇ. 10 ರಷ್ಟಿತ್ತು.
ಅಚ್ಚರಿಯ ವಿಷಯವೆಂದರೆ 2010 ರಿಂದ 2020 ರವರೆಗೆ ಹಿಂದೂಗಳ ಜನಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. 2010 ರಲ್ಲಿ ಹಿಂದೂಗಳ ಜನಸಂಖ್ಯೆಯು ಶೇಕಡಾ 15 ರಷ್ಟಿದ್ದರೆ, 2020 ರ ವೇಳೆಗೆ ಅದು ಶೇಕಡಾ 14.9 ಕ್ಕೆ ಇಳಿದಿದೆ. ಇಂದು ವಿಶ್ವದ ಪ್ರತಿ ನಾಲ್ಕನೇ ವ್ಯಕ್ತಿ ಮುಸ್ಲಿಮರಾಗಿದ್ದಾರೆ. ಜನಸಂಖ್ಯೆ ಹೆಚ್ಚಳ ಭವಿಷ್ಯದಲ್ಲಿ ಸಾಮಾಜಿಕ, ರಾಜಕೀಯದಲ್ಲಿ ನೇರ ಪರಿಣಾಮ ಬೀರಲಿದೆ.
ಇದೇ ವರದಿಯಲ್ಲಿ ಭಾರತದ ಜನಸಂಖ್ಯೆಯ ಕುರಿತ ಮಾಹಿತಿಯನ್ನು ನೀಡಲಾಗಿದೆ. 2050ರ ವೇಳೆಗೆ ಭಾರತದ ಜನಸಂಖ್ಯೆ 166 ಕೋಟಿ ಆಗಲಿದೆ. ಇದರಲ್ಲಿ ಹಿಂದೂಗಳ ಜನಸಂಖ್ಯೆ 130 ಕೋಟಿ ಇರಲಿದೆ. 2050ರ ವೇಳೆಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ 30 ಕೋಟಿಯ ಆಸುಪಾಸಿನಲ್ಲಿರಲಿದೆ. 2050ರಲ್ಲಿ ವಿಶ್ವದ ಒಟ್ಟು ಮುಸ್ಲಿಂ ಜನಸಂಖ್ಯೆಯಲ್ಲಿ ದೇಶದ ಪಾಲು 11 ಪ್ರತಿಶತ ಇರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

