- Home
- News
- India News
- ಒಂದು ಪಾಲಕ್ ಪನ್ನೀರ್‌ಗೆ ಯೂನಿವರ್ಸಿಟಿ ಕೊಟ್ಟಿದ್ದು ₹1.8 ಕೋಟಿ, ಏನಿದು ಇಬ್ಬರು ವಿದ್ಯಾರ್ಥಿಗಳ ಹೋರಾಟ
ಒಂದು ಪಾಲಕ್ ಪನ್ನೀರ್‌ಗೆ ಯೂನಿವರ್ಸಿಟಿ ಕೊಟ್ಟಿದ್ದು ₹1.8 ಕೋಟಿ, ಏನಿದು ಇಬ್ಬರು ವಿದ್ಯಾರ್ಥಿಗಳ ಹೋರಾಟ
ಒಂದು ಪಾಲಕ್ ಪನ್ನೀರ್‌ಗೆ ಯೂನಿವರ್ಸಿಟಿ ಕೊಟ್ಟಿದ್ದು ₹1.8 ಕೋಟಿ, ಬಹುತೇಕರು ಇಷ್ಟಪಡುವ ಪಾಲಕ್ ಪನ್ನೀರ್ ಈ ಪಾಟಿ ದುಬಾರಿಯಾಗುತ್ತೆ ಅನ್ನೋ ಯಾವ ಲೆಕ್ಕಾಚಾರ ವಿಶ್ವವಿದ್ಯಾಲಯಕ್ಕೆ ಇರಲಿಲ್ಲ.

ಪಾಲಕ್ ಪನ್ನೀರ್ ಜಟಾಪಟಿ
ಪಾಲಕ್ ಪನ್ನೀರ್ ಬಹುತೇಕ ಭಾರತೀಯರ ನೆಚ್ಚಿನ ಆಹಾರ. ಪ್ರತಿಷ್ಠಿತ ಹೊಟೆಲ್‌ಗೆ ಹೋದರು ಹೆಚ್ಚಂದರೆ 500 ರೂಪಾಯಿ ಅಥವಾ 1000 ರೂಪಾಯಿ ಇರಬಹುದು. ಮುಂಬೈ ತಾಜ್ ಅಥವಾ ಅದಕ್ಕಿಂತ ದುಬಾರಿ ಹೊಟೆಲ್‌ಗಳಲ್ಲಿ ಸರ್ವೀಜ್ ಚಾರ್ಜ್ ಎಲ್ಲಾ ಸೇರಿದರೂ 2000 ರೂಪಾಯಗಿಂತ ಹೆಚ್ಚಾಗಲ್ಲ. ಆದರೆ ಒಂದು ಪಾಲಕ್ ಪನ್ನೀರ್‌ಗೆ ವಿಶ್ವವಿದ್ಯಾಲಯ ಬರೋಬ್ಬರಿ 1.8 ಕೋಟಿ ರೂಪಾಯಿ ಕೊಡಬೇಕಾದ ಪರಿಸ್ಥಿತಿ ಬಂದಿದೆ.
ದುಬಾರಿಯಾದ ಪಾಲಕ್ ಪನ್ನೀರ್
ಈ ದುಬಾರಿ ಪಾಲಕ್ ಪನ್ನೀರ್ ಘಟನೆ ನಡೆದಿರುವುದು ಅಮೆರಿಕ ಕೊಲರಾಡೋ ಬೌಲ್ಡರ್ ವಿಶ್ವಿವಿದ್ಯಾಲಯದಲ್ಲಿ. ಇಬ್ಬರು ಭಾರತೀಯ ವಿದ್ಯಾರ್ಥಿಗಳಾದ ಆದಿತ್ಯ ಪ್ರಕಾಶ್ ಹಾಗೂ ಉರ್ಮಿ ಭಟ್ಟಾಚಾರ್ಯ ಹೋರಾಟವೇ ಇದೀಗ ವಿಶ್ವದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಒಂದು ಪಾಲಕ್ ಪನ್ನೀರ್ ಹಿಂದಿನ ಸತತ ಹೋರಾಟದ ಕತೆ ಇದು.
ಏನಿದು ಪಾಲಕ್ ಪನ್ನೀರ್ ಹೋರಾಟ
ಆದಿತ್ಯ ಪ್ರಕಾಶ್ ಹಾಗೂ ಉರ್ಮಿ ಭಟ್ಟಾಚಾರ್ಯ ಕೊಲರಾಡೋ ಬೌಲ್ಡರ್ ಯೂನಿವರ್ಸಿಟಿಯಲ್ಲಿ ಪಿಹೆಚ್‌ಡಿ ವಿದ್ಯಾರ್ಥಿಗಳು. ಸೆಪ್ಟೆಂಬರ್ 23ರಲ್ಲಿ ಆದಿತ್ಯ ಪ್ರಕಾಶ್ ಲಂಚ್ ಬಾಕ್ಸ್‌ನಲ್ಲಿ ಪಾಲಕ್ ಪನ್ನೀರ್ ತಂದಿದ್ದ. ವಿಶ್ವವಿದ್ಯಾಲಯದ ಫ್ಯಾಕಲ್ಟಿ ರೂಂನಲ್ಲಿರುವ ಮೈಕ್ರೋವೇವ್‌ನಲ್ಲಿ ಪಾಲಕ್ ಪನ್ನೀರ್ ಲಂಚ್ ಬಾಕ್ಸ್ ಬಿಸಿ ಮಾಡುವ ವಿಚಾರದಲ್ಲಿ ಜಟಾಪಟಿ ನಡೆದಿದೆ. ಪಾಲಕ್ ಪನ್ನೀರ್ ಬಿಸಿ ಮಾಡುವುದರಿಂದ ಕೆಟ್ಟ ವಾಸನೆ ಹರಡಲಿದೆ. ಹೀಗಾಗಿ ಬಿಸ್ ಮಾಡದಂತೆ ಅದಿತ್ಯ ಪ್ರಕಾಶ್‌ಗೆ ತಾಕೀತು ಮಾಡಿದ್ದಾರೆ.
ವಿಶ್ವವಿದ್ಯಾಲದ ವಿರುದ್ದ ಕಾನೂನು ಹೋರಾಟ
ಪಾಲಕ್ ಪನ್ನೀರ್ ವಿಚಾರದಲ್ಲಿ ವಿಶ್ವವಿದ್ಯಾಲದ ಇತರ ಸ್ಟಾಫ್, ವಿಶ್ವವಿದ್ಯಾಲಯ ಆಡಳಿತ ಮಂಡಳಿ ವಿರುದ್ಧ ಜಟಾಪಟಿ ಶುರುವಾಗಿದೆ. ನಾವು ಬಿಸಿ ಮಾಡಿ ಹೋಗುತ್ತೇವೆ. ತಿನ್ನೋ ಆಹಾರ, ಅದು ಕೂಡ ಸಸ್ಯಾಹಾರ ಇದರಲ್ಲಿ ಅನವಶ್ಯಕ ವಿವಾದ ಮಾಡುವ ಅವಶ್ಯಕತೆ ಇಲ್ಲ ಎಂದರೂ ಕೇಳಿಲ್ಲ. ವಿವಾದ ಜೋರಾಗಿತ್ತು. ಇದೇ ಕಾರಣದಿಂದ ಅಸಿಸ್ಟೆಂಟ್ ಟೀಚರ್ ಸೇವೆಯನ್ನೂ ಮಾಡುತ್ತಿದ್ದ ಉರ್ಮಿ ಭಟ್ಟಾಚಾರ್ಯಳನ್ನು ಯಾವುದೇ ಕಾರಣ ನೀಡದೆ ತಗೆಯಲಾಗಿತ್ತು. ಹೀಗಾಗಿ ಆದಿತ್ಯ ಹಾಗೂ ಉರ್ಮಿ ಕಾನೂನು ಹೋರಾಟ ಆರಂಭಗೊಂಡಿತ್ತು.
ಏಷ್ಯಾ ವಿದ್ಯಾರ್ಥಿಗಳಿಗೆ ಕಿರುಕುಳ
ಏಷ್ಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಲ್ಲಿ ಈ ರೀತಿ ಹಲವು ಕಿರಿಕಿರಿ ನೀಡಲಾಗುತ್ತದೆ. ಭಾರತೀಯ ಆಹಾರ, ಏಷ್ಯನ್ ಫುಡ್‌ಗಳ ಕಾಮನ್ ಏರಿಯಾದಲ್ಲಿ ಸವಿಯಲು ಮುಂದಾದರೆ ನಿಂದನೆ ಮಾಡಲಾಗುತ್ತದೆ. ಕೀಳಾಗಿ ನೋಡಲಾಗುತ್ತದೆ ಎಂದು ಹಲವರು ಆಕ್ರೋಶ ಹೊರಹಾಕಿದ್ದರು. ಇದರ ನಡುವೆ ಆದಿತ್ಯ ಪ್ರಕಾಶ್ ಹಾಗೂ ಉರ್ಮಿ ತಮ್ಮ ಹೋರಾಟ ತೀವ್ರಗೊಳಿಸಿದ್ದರು.
ಏಷ್ಯಾ ವಿದ್ಯಾರ್ಥಿಗಳಿಗೆ ಕಿರುಕುಳ
ಅಮೆರಿಕ ಕೋರ್ಟ್ ಮಹತ್ವದ ಆದೇಶ
ಅದಿತ್ಯ ಪ್ರಕಾಶ್ ಹಾಗೂ ಉರ್ಮಿ ಭಟ್ಟಾಚಾರ್ಯ ಕೋರ್ಟ್ ಮೂಲಕ ಕಾನೂನು ಹೋರಾಟ ತೀವ್ರಗೊಳಿಸಿದ್ದರು. 2023ರ ಪ್ರಕರಣದ ತೀರ್ಪು ಬಂದಿದೆ. ಆದಿತ್ಯ ಪ್ರಕಾಶ್ ಹಾಗೂ ಉರ್ಮಿ ಭಟ್ಟಾಚಾರ್ಯ ಪರ ತೀರ್ಪು ನೀಡಿದೆ. ಇಷ್ಟೇ ಅಲ್ಲ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಿಗೆ ಬರೋಬ್ಬರಿ 1.8 ಕೋಟಿ ರೂಪಾಯಿ ಪರಿಹಾರ ನೀಡಲು ಸೂಚಿಸಿದೆ. ಇತ್ತ ವಿಶ್ವವಿದ್ಯಾಲಯ ಪರಿಹಾರ ನೀಡಲು ಒಪ್ಪಿಕೊಂಡಿದೆ.
ಅಮೆರಿಕ ಕೋರ್ಟ್ ಮಹತ್ವದ ಆದೇಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

