- Home
- News
- India News
- Thunderstorm Safety Tips: ಗುಡುಗು, ಮಿಂಚಿನ ಸಮಯದಲ್ಲಿ ನೀವು ಮಾಡುವ ಈ ತಪ್ಪುಗಳಿಂದ ಜೀವಕ್ಕೆ ಕುತ್ತು!
Thunderstorm Safety Tips: ಗುಡುಗು, ಮಿಂಚಿನ ಸಮಯದಲ್ಲಿ ನೀವು ಮಾಡುವ ಈ ತಪ್ಪುಗಳಿಂದ ಜೀವಕ್ಕೆ ಕುತ್ತು!
ಕರ್ನಾಟಕ ಸೇರಿ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಬೇಸಿಗೆ ಕಾಲ ಮುಗಿದ ತಕ್ಷಣ ಮಳೆಗಾಲ ಶುರುವಾಗಿದ್ದು ವ್ಯಾಪಕವಾಗಿ ಮಳೆಯಾಗುತ್ತಿದೆ.. ಈ ಸಮಯದಲ್ಲಿ ಸಿಡಿಲಿನಿಂದ ರಕ್ಷಿಸಿಕೊಳ್ಳು ಏನೆಲ್ಲ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅಂತ ನೋಡೋಣ.

ಮಿಂಚಿನಿಂದ ಜಾಗ್ರತೆ
ನೈಋತ್ಯ ಮಾನ್ಸೂನ್ ಆರಂಭದೊಂದಿಗೆ ಗುಡುಗು, ಮಿಂಚು ಸಹಿತ ಮಳೆ ಸುರಿಯುತ್ತಿದೆ. ಸಿಡಿಲಿನಿಂದ ಸಾವುಗಳು ಸಂಭವಿಸುತ್ತಿರುವುದು ಆತಂಕ ಹೆಚ್ಚಿಸಿವೆ. ಇತ್ತೀಚೆಗೆ ಇತ್ತೀಚೆಗೆ ಕರ್ನಾಟಕದಲ್ಲಿ ಹಲವಾರು ರೈತರು, ಯುವಕರು ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದಾರೆ.
ಹೊರಗಡೆ ಇದ್ದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
ಗುಡುಗು-ಮಿಂಚು ಬರುತ್ತಿರುವಾಗ ಸಾಧ್ಯವಾದಷ್ಟು ಹೊರಗಿನ ಕೆಲಸಗಳಿಂದ ದೂರವಿರಿ. ಮೀನು ಹಿಡಿಯುವುದು, ಪಶುಗಳನ್ನು ಮೇಯಿಸುವುದು ಮುಂತಾದ ಕೆಲಸಗಳನ್ನು ನಿಲ್ಲಿಸಿ. ಅತ್ಯವಶ್ಯಕವಲ್ಲದಿದ್ದರೆ ಪ್ರಯಾಣ ಮಾಡಬೇಡಿ. ಕೆರೆ, ನೀರಿನ ತೊಟ್ಟಿಗಳು, ತೇವಭೂಮಿಯಿಂದ ದೂರವಿರಿ. ಎತ್ತರದ ಕಟ್ಟಡಗಳಿಂದ ದೂರವಿರಿ. ಮಿಂಚು ಹೆಚ್ಚಾಗಿ ಎತ್ತರದ ಸ್ಥಳಗಳ ಮೇಲೆ ಬೀಳುತ್ತದೆ. ಟವರ್‌ಗಳು, ವಿದ್ಯುತ್ ಕಂಬಗಳು, ಎತ್ತರದ ಮರಗಳ ಬಳಿ ಹೋಗಬೇಡಿ.
ವಿದ್ಯುತ್ ಉಪಕರಣಗಳನ್ನು ಬಳಸಬೇಡಿ
ಸಿಡಿಲು ಗುಡುಗಿನ ವೇಳೆ ವಿದ್ಯುತ್ ಉಪಕರಣಗಳ ಬಳಕೆ ಅಪಾಯಕಾರಿ. ಕಂಪ್ಯೂಟರ್, ಲ್ಯಾಪ್‌ಟಾಪ್, ವಿದ್ಯುತ್ ಒಲೆಗಳನ್ನು ಬಳಸಬೇಡಿ. ವಿದ್ಯುತ್ ನಿಯಂತ್ರಕಗಳು, ಸ್ವಿಚ್‌ಬೋರ್ಡ್‌ಗಳ ಬಳಿ ಇರಬೇಡಿ. ಫೋನ್ ಚಾರ್ಜ್ ಮಾಡಬೇಡಿ. ಮಿಂಚಿನ ಸಮಯದಲ್ಲಿ ನೆಲದ ಮೇಲೆ ಕುಳಿತುಕೊಳ್ಳುವುದು ಒಳ್ಳೆಯದು. ಹೊರಗಿದ್ದರೆ ನಿಧಾನವಾಗಿ ನೆಲದ ಮೇಲೆ ಕುಳಿತುಕೊಳ್ಳಿ. ಜೋರಾದ ಶಬ್ದಗಳಿಂದ ರಕ್ಷಿಸಿಕೊಳ್ಳಲು ಕಿವಿಗಳನ್ನು ಮುಚ್ಚಿಕೊಳ್ಳಿ.
ರೈತರು ಎಚ್ಚರಿಕೆಯಿಂದಿರಿ
ರೈತರು ಮತ್ತು ಗ್ರಾಮೀಣ ಜನರು ಹೆಚ್ಚು ಜಾಗರೂಕರಾಗಿರಬೇಕು. ಗುಡುಗು ಸಿಡಿಲಿನಿಂದ ಮಳೆ ಸುರಿಯುವಾಗ ರೈತರು ಹೊಲಗಳಲ್ಲಿ ಕೆಲಸ ಮಾಡಬಾರದು. ಕರೆಂಟ್ ಮೋಟಾರ್‌ಗಳ ಬಳಿ ಹೋಗಬೇಡಿ. ಮೊಬೈಲ್ ಫೋನ್‌ಗಳನ್ನು ಬಳಸದೆ ಸುರಕ್ಷಿತ ಸ್ಥಳಗಳಲ್ಲಿರಿ. ಬಯಲು ಪ್ರದೇಶಗಳಲ್ಲಿ ಒಬ್ಬಂಟಿಯಾಗಿ ಇರಬೇಡಿ.