ಆ್ಯಪ್ ಬ್ಯಾನ್ ಬಳಿಕ ಕೇಂದ್ರದಿಂದ ಚೀನಾ ಮೇಲೆ ಮತ್ತೊಂದು ದಾಳಿ!
ಲಡಾಖ್ ಗಡಿಯಲ್ಲಿ ನಡೆದ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಚೀನಾ ವಿರುದ್ಧ ಡಿಜಿಟಲ್ ಸ್ಟ್ರೈಕ್ ಸೇರಿದಂತೆ ಹಲವು ರೀತಿಯಲ್ಲಿ ತಿರುಗೇಟು ನೀಡಿದೆ. ಹಂತ ಹಂತವಾಗಿ ಚೀನಾ ಮೂಲದ ಆ್ಯಪ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬ್ಯಾನ್ ಮಾಡಿದೆ. ಇದೀಗ ಚೀನಾ ಮೇಲೆ ಮತ್ತೊಂದು ದಾಳಿಗೆ ಕೇಂದ್ರ ಕ್ಯಾಬಿನೆಟ್ ಸಮಿತಿ ಒಪ್ಪಿಗೆ ನೀಡಿದೆ.

ಚೀನಾ ಗಡಿ ವಿಚಾರದಲ್ಲಿ ತೋರಿದ ಧೋರಣೆಗೆ ಭಾರತ ಸರಿಯಾಗಿ ತಿರುಗೇಟು ನೀಡಿದೆ. ಲಡಾಖ್ ಗಡಿ ಸಂಘರ್ಷದ ಬೆನ್ನಲ್ಲೇ ಕೇಂದ್ರ ಸರ್ಕಾರ ಚೀನಾ ವಿರುದ್ಧ ಸಮರ ಸಾರಿದೆ.

ಗಡಿಯಲ್ಲಿ ತಕ್ಕ ಪ್ರತ್ಯುತ್ತರ ನೀಡಿದ ಭಾರತ ಬಳಿಕ ಡಿಜಿಟಲ್ ಸ್ಟ್ರೈಕ್ ಮೂಲಕ ಚೀನಾ ಸೊಕ್ಕಡಗಿಸಿತು. ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾದ ಪ್ರಮುಖ ಆ್ಯಪ್ ನಿಷೇಧಿಸಿತ್ತು.

ಇದೀಗ ದೂರಸಂಪರ್ಕ ಕ್ಷೇತ್ರದಲ್ಲಿ ಹೊಸ ರಾಷ್ಟ್ರೀಯ ಭದ್ರತಾ ನೀತಿಯನ್ನು ತರುವ ಪ್ರಸ್ತಾಪವನ್ನು ಕ್ಯಾಬಿನೆಟ್ ಸಮಿತಿ ಅಂಗೀಕರಿಸಿದೆ. ಹೀಗಾಗಿ ವಿಶ್ವಾಸಾರ್ಹ ಟೆಲಿಕಾಂ ಉಪಕರಣಕ್ಕೆ ಮಾತ್ರ ಅನುಮತಿ ನೀಡಲು ಸಮಿತಿ ಒಪ್ಪಿಗೆ ಸೂಚಿಸಿದೆ.

ವಿಶ್ವಾಸಾರ್ಹ ಹಾಗೂ ವಿಶ್ವಾಸಾರ್ಹವಲ್ಲದ ಟೆಲಿಕಾಂ ಉಪಕರಣಗಳು ಎಂಬ ಎರಡು ವಿಭಾಗ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಚೀನಾದ ಹುವೈ , ZTE ಹಾಗೂ ಇತರ ಟಿಲಿಕಾಂ ಉಪಕರಣ ಪೂರೈಕೆ ಕಂಪನಿಗಳಿ ಅತೀ ದೊಡ್ಡ ಹೊಡೆತ ನೀಡುತ್ತಿದೆ.

ಚೀನಾ ಮೂಲದ ಹುವೈ, ZTE ಕಂಪನಿಗಳು ಭಾರತಕ್ಕೆ ಟೆಲಿಕಾಂ ಉಪಕರಣ ಪೂರೈಸುತ್ತಿದೆ. ಇದೀಗ ಈ ಎರಡೂ ಕಂಪನಿಗಳ ಮೇಲೆ ಭಾರತ, ಅಮೆರಿಕ ಸೇರಿದಂತೆ ಕೆಲ ದೇಶಗಳು ಗಂಭೀರ ಆರೋಪ ಮಾಡಿದೆ.

ಹುವೈ ಉಪಕರಣಗಳ ಮೂಲಕ ಗೂಢಚರ್ಯೆ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಹಲವು ದೇಶಗಳು ಹುವೈ ಹಾಗೂ ZTE ಟೆಲಿಕಾಂ ಉಪಕರಣಗಳನ್ನು ಬ್ಯಾನ್ ಮಾಡಿದೆ.

ಇದೀಗ ಭಾರತ ಕೂಡ ಚೀನಾ ಮೂಲದ ಹಾಗೂ ವಿಶ್ವಾಸಾರ್ಹವಲ್ಲದ ಟೆಲಿಕಾಂ ಉಪಕರಣಗಳನ್ನು ಬ್ಯಾನ್ ಮಾಡಲು ಮುಂದಾಗಿದೆ. ಈಗಾಗಲೇ ಕೇಂದ್ರ ಕ್ಯಾಬಿನೆಟ್ ಸಮಿತಿ ಕೂಡ ಗ್ರೀನ್ ಸಿಗ್ನಲ್ ನೀಡಿದೆ

ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ವಸ್ತುಗಳ ನಿಷೇಧಕ್ಕೆ ಟೆಲಿಕಾಂ ನ್ಯಾಶನಲ್ ಸೆಕ್ಯೂರಿಟಿ ಕಮಿಟಿ ನಿರ್ಧರಿಸಿದೆ. ಇದೀಗ ವಿಶ್ವಾಸಾರ್ಹವಲ್ಲದ ಪಟ್ಟಿ ಸಿದ್ಧಪಡಿಸಿ ಕೇಂದ್ರಕ್ಕೆ ಒಪ್ಪಿಸಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ