MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಅಂದು ಪೇಪರ್ ಲೀಕ್ ವಿರುದ್ಧ ಹೋರಾಡಿ ಲಾಠಿ ಏಟು ತಿಂದಿದ್ದ ಧಮೇಂದ್ರ ಪ್ರಧಾನ್; ಇಂದು ತಿರುಗಿದ ಬಾಣ

ಅಂದು ಪೇಪರ್ ಲೀಕ್ ವಿರುದ್ಧ ಹೋರಾಡಿ ಲಾಠಿ ಏಟು ತಿಂದಿದ್ದ ಧಮೇಂದ್ರ ಪ್ರಧಾನ್; ಇಂದು ತಿರುಗಿದ ಬಾಣ

ನೀಟ್ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ.  1997ರಲ್ಲಿ ಅವರು ಪೇಪರ್ ಲೀಕ್ ವಿರುದ್ಧ ನಡೆಸಿದ್ದ ಹೋರಾಟ ಮತ್ತು ಪೊಲೀಸ್ ಲಾಠಿ ಏಟು ತಿಂದಿದ್ದ ಘಟನೆ ವೈರಲ್ ಆಗಿದೆ.

2 Min read
Author : Ganesh Mabla Gowda
Published : Jul 23 2026, 11:24 AM IST
Share this Photo Gallery
  • FB
  • TW
  • Linkdin
  • Whatsapp
15
ಧರ್ಮೇಂದ್ರ ಪ್ರಧಾನ್ ಹಳೆಯ ದಿನಗಳ ಹೋರಾಟದ ಕಥೆ
Image Credit : social media

ಧರ್ಮೇಂದ್ರ ಪ್ರಧಾನ್ ಹಳೆಯ ದಿನಗಳ ಹೋರಾಟದ ಕಥೆ

ನವದೆಹಲಿ: ದೇಶಾದ್ಯಂತ ಈಗ 'ನೀಟ್' (NEET-UG) ಪರೀಕ್ಷೆ ಅಕ್ರಮದ ಕಿಚ್ಚು ಹಬ್ಬಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಬೀದಿಗಿಳಿದಿರುವ ವಿದ್ಯಾರ್ಥಿಗಳು ಸಂಸತ್ತಿನವರೆಗೂ ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ. ಇಂತಹ ಹೊತ್ತಿನಲ್ಲೇ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹಳೆಯ ದಿನಗಳ ಹೋರಾಟದ ಕಥೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಂದಿನ ಹೋರಾಟಗಾರನಿಗೂ ಇಂದಿನ ಸಚಿವರಿಗೂ ಇರುವ ವಿಪರ್ಯಾಸವನ್ನು ಜನರು ಚರ್ಚಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಏನಿದು 1997ರ ಘಟನೆ?
Image Credit : social media

ಏನಿದು 1997ರ ಘಟನೆ?

ಸುಮಾರು ಮೂರು ದಶಕಗಳ ಹಿಂದೆ ಅಂದರೆ 1997ರಲ್ಲಿ ಧರ್ಮೇಂದ್ರ ಪ್ರಧಾನ್ ಅವರು ಎಬಿವಿಪಿ (ABVP) ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಆಗ ಒಡಿಶಾದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಆ ಸಮಯದಲ್ಲಿ ರಾಜ್ಯದಲ್ಲಿ ಪೇಪರ್ ಲೀಕ್ ಹಗರಣವೊಂದು ನಡೆದಿತ್ತು. ಇದನ್ನು ಪ್ರತಿಭಟಿಸಿ ಪ್ರಧಾನ್ ಅವರು ಭುವನೇಶ್ವರದ ಸಚಿವಾಲಯದ ಮುಂದೆ ಸುಮಾರು 1,500 ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ನಡೆಸಿದ್ದರು.

Related Articles

Related image1
ನೀಟ್ ಹಗರಣ: ಕೊನೆಗೂ ಮೌನ ಮುರಿದ ಮೋದಿ, ತಪ್ಪಿತಸ್ಥರಿಗೆ ಕಾದಿದೆ ಶಾಕ್..!
Related image2
ಸರ್ಕಾರಿ ಬಸ್ ಎಗರಿಸಿದ ಕುಡುಕ.. ಬರೋಬ್ಬರಿ 18 ಕಿ.ಮೀ. ರೋಚಕ ಚೇಸ್.. ಮುಂದೇನಾಯ್ತು..? VIDEO
35
ಪೊಲೀಸ್ ಲಾಠಿ ಏಟು, ಮೂಳೆ ಮುರಿತ
Image Credit : social media

ಪೊಲೀಸ್ ಲಾಠಿ ಏಟು, ಮೂಳೆ ಮುರಿತ

ಅಂದು ಪೇಪರ್ ಲೀಕ್ ವಿರುದ್ಧ ಧ್ವನಿ ಎತ್ತಿದ್ದ ಯುವ ನಾಯಕ ಧರ್ಮೇಂದ್ರ ಪ್ರಧಾನ್ ಮೇಲೆ ಪೊಲೀಸರು ಭೀಕರ ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಅವರಿಗೆ ತೀವ್ರವಾದ ಗಾಯಗಳಾಗಿದ್ದವು ಮಾತ್ರವಲ್ಲದೆ, ದೇಹದ ಹಲವೆಡೆ ಮೂಳೆ ಮುರಿತಗಳೂ (Fractures) ಸಂಭವಿಸಿದ್ದವು. ಪೇಪರ್ ಲೀಕ್ ಹಗರಣದ ವಿರುದ್ಧ ಅವರು ನಡೆಸಿದ ಆ ಹೋರಾಟ ಅಂದು ಒಡಿಶಾದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.

ಯಾವ ಪೇಪರ್ ಲೀಕ್ ವಿರುದ್ಧ ಹೋರಾಡಿ ರಕ್ತ ಸುರಿಸಿದ್ದರೋ, ಇಂದು ಅದೇ ಧರ್ಮೇಂದ್ರ ಪ್ರಧಾನ್ ಅವರು ದೇಶದ ಶಿಕ್ಷಣ ಸಚಿವರಾಗಿದ್ದಾರೆ. ಆದರೆ ವಿಪರ್ಯಾಸವೆಂದರೆ, ಅವರ ಅಧಿಕಾರಾವಧಿಯಲ್ಲೇ ಈಗ ನೀಟ್ ಸೇರಿದಂತೆ ಹಲವು ಪರೀಕ್ಷೆಗಳ ಅಕ್ರಮಗಳು ಬಯಲಿಗೆ ಬಂದಿವೆ. ಅಂದು ಪೇಪರ್ ಲೀಕ್ ಸಂತ್ರಸ್ತ ವಿದ್ಯಾರ್ಥಿಗಳ ಪರವಾಗಿ ಲಾಠಿ ಏಟು ತಿಂದಿದ್ದ ನಾಯಕ, ಇಂದು ಅದೇ ವಿಚಾರವಾಗಿ ವಿದ್ಯಾರ್ಥಿಗಳ ಆಕ್ರೋಶಕ್ಕೆ

45
ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ
Image Credit : Asianet News

ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ

ಅಂತರಜಾಲದಲ್ಲಿ ಕೆಲವರು ಪ್ರಧಾನ್ ಅವರ ಅಂದಿನ ಬದ್ಧತೆಯನ್ನು ಶ್ಲಾಘಿಸುತ್ತಿದ್ದಾರೆ. ಅವರು ತಳಮಟ್ಟದಿಂದ ಬಂದ ಹೋರಾಟಗಾರ, ಅವರಿಗೆ ವಿದ್ಯಾರ್ಥಿಗಳ ನೋವು ಗೊತ್ತು ಎಂದು ಬೆಂಬಲಿಸುತ್ತಿದ್ದಾರೆ. ಆದರೆ ಮತ್ತೊಂದೆಡೆ, ಹೋರಾಟದ ಹಿನ್ನೆಲೆ ಇರುವ ಸಚಿವರು ಪೇಪರ್ ಲೀಕ್ ಮಾಫಿಯಾವನ್ನು ತಡೆಯಲು ಯಾಕೆ ವಿಫಲರಾಗುತ್ತಿದ್ದಾರೆ? ಎಂಬ ತೀಕ್ಷ್ಣ ಪ್ರಶ್ನೆಗಳೂ ಎದುರಾಗುತ್ತಿವೆ.

55
ಸಂಕಷ್ಟದಲ್ಲಿ ಶಿಕ್ಷಣ ಸಚಿವರು
Image Credit : X

ಸಂಕಷ್ಟದಲ್ಲಿ ಶಿಕ್ಷಣ ಸಚಿವರು

ಕಳೆದ ಎಂಟು ವರ್ಷಗಳಲ್ಲಿ ದೇಶಾದ್ಯಂತ ಸುಮಾರು 90ಕ್ಕೂ ಹೆಚ್ಚು ಪೇಪರ್ ಲೀಕ್ ಪ್ರಕರಣಗಳು ವರದಿಯಾಗಿವೆ. ಈಗ ದೆಹಲಿಯ ಜಂತರ್ ಮಂತರ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಮತ್ತು ರಾಜಕೀಯ ನಾಯಕರು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ, ಅಂದು ಪೇಪರ್ ಲೀಕ್ ವಿರುದ್ಧ ಹೋರಾಟ ನಡೆಸಿ ನಾಯಕನಾಗಿ ಹೊರಹೊಮ್ಮಿದ್ದ ಧರ್ಮೇಂದ್ರ ಪ್ರಧಾನ್ ಅವರಿಗೆ, ಇಂದು ಅದೇ 'ಪೇಪರ್ ಲೀಕ್' ಭೂತ ಅಗ್ನಿಪರೀಕ್ಷೆಯನ್ನೊಡ್ಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GM
Ganesh Mabla Gowda
ನೀಟ್
ಧರ್ಮೇಂದ್ರ ಪ್ರಧಾನ್
ಬಿಜೆಪಿ
ಪರೀಕ್ಷೆ
ಕಾಂಗ್ರೆಸ್
ಪ್ರತಿಭಟನೆ
Latest Videos
Recommended Stories
Recommended image1
ಮಾತಾಡ್ಬೇಡಿ, ಕೆಲ್ಸ ಮಾಡಿ ತೋರಿಸಿ!": ಜಿಲ್ಲಾಧಿಕಾರಿಯನ್ನೇ ದಂಗಾಗಿಸಿದ 13 ವರ್ಷದ ಬಾಲಕನ ಖಡಕ್ ವಾರ್ನಿಂಗ್
Recommended image2
ನೀಟ್ ಸಮರ: ಮೌನ ಮುರಿದ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು, ಬೇಡಿಕೆಗಳೇನು?
Recommended image3
ಸರ್ಕಾರಿ ಬಸ್ ಎಗರಿಸಿದ ಕುಡುಕ.. ಬರೋಬ್ಬರಿ 18 ಕಿ.ಮೀ. ರೋಚಕ ಚೇಸ್.. ಮುಂದೇನಾಯ್ತು..? VIDEO
Related Stories
Recommended image1
ನೀಟ್ ಹಗರಣ: ಕೊನೆಗೂ ಮೌನ ಮುರಿದ ಮೋದಿ, ತಪ್ಪಿತಸ್ಥರಿಗೆ ಕಾದಿದೆ ಶಾಕ್..!
Recommended image2
ಸರ್ಕಾರಿ ಬಸ್ ಎಗರಿಸಿದ ಕುಡುಕ.. ಬರೋಬ್ಬರಿ 18 ಕಿ.ಮೀ. ರೋಚಕ ಚೇಸ್.. ಮುಂದೇನಾಯ್ತು..? VIDEO
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved