ಅಂದು ಭಿಕ್ಷುಕ, ಇಂದು ಕೊರೋನಾ ತಾಂಡದ ಮಧ್ಯೆ ಅನಾಥರ ಪಾಲಿನ 'ಭಗವಂತ'!
ಮುರುಗನ್ ಎಸ್, ಈತ ತನ್ನ ಬಾಲ್ಯದಲ್ಲಿ ಹಸಿವು ನೀಗಿಸಲು ರಸ್ತೆ ಬದಿ ಭಿಕ್ಷೆ ಬೇಡುತ್ತಿದ್ದ. ತಂದೆ ಮದ್ಯ ವವ್ಯಸನಿಯಾಗಿದ್ದರೆ, ತಾಯಿಗೆ ತನ್ನ ಮಗನಿಗೆ ಎರಡೊತ್ತು ಚೆನ್ನಾಗಿ ಊಟ ಕೊಡಿಸುವಷ್ಟು ಹಣವಿರಲಿಲ್ಲ. ಹೀಗಾಗೇ ಮುರುಗನ್ ತನ್ನ ಬಾಲ್ಯದಲ್ಲಿ ಭಿಕ್ಷೆ ಬೇಡಬೇಕಾದ ಅನಿವಾರ್ಯತೆ ಬಂದಿತ್ತು. ಆದರೀಗ ಇದೇ ವ್ಯಕ್ತಿ,, ನಿರ್ಗತಿಕ, ಅಸಹಾಯಕ, ಬಡವ ಹಾಗೂ ಅನಾಥರ ಬಂಧುವಾಗಿದ್ದಾನೆ. ಹಾಗಾದ್ರೆ ಭಿಕ್ಷೆ ಬೇಡುತ್ತಿದ್ದ ಪುಟ್ಟ ಬಾಲಕ ಇಂದು ಅನಾಥರ ಪಾಲಿನ 'ಭಗವಂತ' ಆಗಿದ್ದು ಹೇಗೆ? ಇಲ್ಲಿದೆ ವಿವರ
ಒಂದು ದಿನ ಇದ್ದಕ್ಕಿದ್ದಂತೆ ಭಿಕ್ಷೆ ಬೇಡುತ್ತಿದ್ದ ಮುರುಗನ್‌ನನ್ನು ಪೊಲೀಸರು ನೋಡಿದರು. ಕೂಡಲೇ ಆತನನ್ನು ಅನಾಥಾಶ್ರಮವೊಂದಕ್ಕೆ ಸೇರಿಸಿದ್ದಾರೆ. ಇಲ್ಲಿ ಅನೇಕ ವರ್ಷ ಆತನನ್ನು ಸಿಸ್ಟರ್‌ಗಳು ನೋಡಿಕೊಂಡರು. ಕೆಲ ಸಮಯದ ಬಳಿಕ ಆತ ಚೈಲ್ಡ್‌ಲೈನ್‌ನಲ್ಲಿ ಕೆಲಸ ಮಾಡಲಾರಮಭಿಸಿದ. ಇಲ್ಲಿ ಏಳು ವರ್ಷ ದುಡಿದ ಆತ ಕೊಂಚ ಹಣ ಉಳಿಸಿಕೊಂಡಿದ್ದ. ಇದರಿಂದ ಒಂದು ಆಟೋ ರಿಕ್ಷಾ ಖರೀದಿಸಿದ.
2007ರಲ್ಲಿ ಎನ್‌ಜಿಒ ಆರಂಭ: ಹೀಗಿರುವಾಗಳೆ ಮುರುಗನ್ ಮತ್ತೊಂದೆಡೆ ರಸ್ತೆಯಲ್ಲಿ ಓಡಾಡುತ್ತಿದ್ದ ಅನಾಥ ಮಕ್ಕಳು, ಹಿರಿಯರು ಹಾಗೂ ಮಾನಸಿಕ ರೋಗಿಗಳ ರಕ್ಷಣೆ ಮಾಡುವ ಕಾರ್ಯ ಆರಂಭಿಸಿದ್ದರು. 2007ರಲ್ಲಿ ಮುರುಗನ್ ಸಾಮಾಜಿಕ ಕಾರ್ಯಕರ್ತನಾಗಿ ಇಂತಹವರ ಸೇವೆ ಮಾಡಲು ನಿರ್ಧರಿಸಿದ. ಈ ನಿಟ್ಟಿನಲ್ಲಿ ಅದೇ ವರ್ಷ ಥೆರುವೋರಂ ಹೆಸರಿನ ಎನ್‌ಜಿಒ ಕೂಡಾ ತೆರೆದರು.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯನ್ವಯ ಕೊರೋನಾ ಆತಂಕದ ನಡುವೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ ತಮ್ಮ ಮನೆಗಳಲ್ಲಿ ಕೈದಿಗಳಂತಿದ್ದರು. ಹೀಗಿರುವಾಗ ಮುರುಗನ್ ಹಾಗೂ ಆತನ ಎಂಟು ಸಹಚರರು ರಸ್ತೆಯ್ಲಲಿದ್ದ ನಿರ್ಗತಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಇದರಲ್ಲಿ ಅನೇಕ ಮಂದಿ ಕೇರಳದವರಾಗಿರದೆ, ಅನ್ಯ ರಾಜ್ಯದವರಾಗಿದ್ದರು.
ಸ್ನಾನ ಮಾಡಿಸಿ, ಸ್ವಚ್ಛಗೊಳಿಸಿ ಶುದ್ಧ ಬಟ್ಟೆ ತೊಡಿಸುತ್ತಾರೆ ಮುರುಗನ್: ಮುರುಗನ್ ಅನ್ವಯ ಇವರಲ್ಲಿ ಶೇ. 90 ರಷ್ಟು ಮಂದಿ ಅನ್ಯ ರಾಜ್ಯದವರಾಗಿದ್ದಾರೆ. ಅಲ್ಲದೇ ಹೆಚ್ಚಿನವರ ವಯಸ್ಸು 20-40ರ ನಡುವೆ ಇತ್ತು. ಅನೇಕರಿಗೆ ಮದ್ಯ ಹಾಗೂ ಡ್ರಗ್ಸ್ ಚಟವಿತ್ತು. ಇದೇ ಕಾರಣದಿಂದ ಅವರ ಜೀವನ ಹಾಳಾಗಿತ್ತು. ಹೀಗಾಗೇ ಅವರು ಚಿಕ್ಕ ವಯಸ್ಸಿಗೇ ಮಾನಸಿಕ ರೋಗಿಗಳಾಗುತ್ತಾರೆ.
ಇಂತಹವರನ್ನು ಸ್ನಾನ ಮಾಡಿಸಿ, ಒಳ್ಳೆ ಬಟ್ಟೆ ತಡಿಸಿ ಮಾನಸಿಕ ಕೇಂದ್ರಕ್ಕೆ ತಲುಪಿಸುತ್ತೇವೆ ಎಂಬುವುದು ಮುರುಗನ್ ಮಾತು. ಹೀಗಿರುವಾಗ ಪೊಲೀಸರ ಅನುಮತಿ ಅಗತ್ಯವಾಗಿ ಪಡೆಯುತ್ತೇವೆ ಎನ್ನುತ್ತಾರೆ ಮುರುಗನ್.
ಥೆರುವೋರಮ್‌ನಲ್ಲಿ ಆರು ಸಹಾಯಕರು ಸೇರಿ ಒಟ್ಟು ಎಂಟು ಮಂದಿ ಇದ್ದಾರೆ. ಇವರಲ್ಲಿ ಇಬ್ಬರು ಆಂಬುಲೆನ್ಸ್ ಡ್ರೈವರ್ಸ್. ಈ ಆಂಬುಲೆನ್ಸ್‌ಗಳನ್ನು ಮಲಯಾಳಂ ಫಿಲ್ಮ್ ಅಸೋಸಿಯೇಷನ್ ಪರವಾಗಿ ನೀಡಿದ್ದಾರೆ.
ಇವರು ಏಪ್ರಿಲ್‌ವರೆಗೆ ಒಟ್ಟು 617 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.
ಅನೇಕ ಪ್ರಶಸ್ತಿಗಳು ಬಂದಿವೆ: ಸಾಮಾಜಿಕ ಸೇವೆ ಮಾಡುತ್ತಿರುವ ಮುರುಗನ್‌ರನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸನ್ಮಾನಿಸಿದ್ದರು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದೂ ಪ್ರಶಸ್ತಿ ಪಡೆದಿದ್ದಾರೆ.