ಅಪಘಾತದಲ್ಲಿ ಮೃತಪಟ್ಟ ಮಗ, ತಿಂಗಳ ಬಳಿಕ ವಿಧವೆ ಸೊಸೆಗೆ ಮದುವೆ ಮಾಡಿಸಿದ ಮಾವ!

First Published Nov 26, 2020, 5:18 PM IST

ಮಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ಒಂದು ತಿಂಗಳ ಬಳಿಕ ತಂದೆಯೊಬ್ಬ ತನ್ನ ಮಗಳಂತಿದ್ದ ಸೊಸೆ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಸದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಝೌಂತೇಶ್ವರ್ ಮವಯೀ ಹಳ್ಳಿಯ ಡೆಪ್ಯುಟಿ ರೇಂಜರ್ ಹುದ್ದೆಯಿಂದ ನಿವೃತ್ತರಾದ ರವಿಶಂಕರ್ ಸೋನಿಯವರ ಮಗ ಸಂಜಯ್ ಸೋನಿ ರಸ್ತೆ ಅಪಘಾತವೊಂದರಲ್ಲಿ ಒಂದು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದ. ಹೀಗಿದ್ದರೂ ಈ ತಂದೆ ಮಗಳಂತಿದ್ದ ತನ್ನ ಸೊಸೆಗೆ ಎರಡನೇ ಮದುವೆ ಮಾಡಿಸಿದ್ದಾರೆ. ಇಷ್ಟೇಯಲ್ಲ ಮಗನ ಹೆಸರಿನಲ್ಲಿದ್ದ ಆಸ್ತಿಯನ್ನೂ ಸೊಸೆಗೆ ನೀಡಿದ್ದಾರೆ.

ಡೆಪ್ಯುಟಿ ರೇಂಜರ್ ಹುದ್ದೆಯಿಂದ ನಿವೃತ್ತರಾದ ರವಿಶಂಕರ್ ಸೋನಿ ಈ ಬಗ್ಗೆ ಮಾತನಾಡುತ್ತಾ 2008ರಲ್ಲಿ ತನ್ನ ಮಗ ಸಂಜಯ್ ಸೋನಿ ವಿವಾಹವಾಗಿತ್ತು. ಈ ದಂಪತಿಗೆ 11 ಹಾಗೂ 9ವಯಸ್ಸಿನ ಇಬ್ಬರು ಮಕ್ಕಳಿದ್ದರು. ಆದರೆ ಸೆಪ್ಟೆಂಬರ್ 25 ರಂದು ಮಗ ಸಂಜಯ್ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ.

ಹೀಗಿರುವಾಗ ಮಾವ ರವಿಶಂಕರ್ ಸೊಸೆಯ ತಂದೆ ಹಾಗೂ ಸಹೋದರರ ಬಳಿ ಆಕೆಗೆ ಗಂಡು ಹುಡುಕಲು ಹೇಳಿದ್ದಾರೆ. ಒಳ್ಳೆಯ ವಧು ಸಿಕ್ಕಾಗ ತಾವೇ ಹೋಗಿ ನೋಡಿದ್ದಾರೆ. ಈ ಹುಡುಗ ತನ್ನ ಸಸೊಸೆಗೆ ಸೂಕ್ತ ಎಂದು ಭರವಸೆ ಬಂದ ಬಳಿಕವೇ ಸೊಸೆಯ ಮದುವೆ ನಿಗಧಿಪಡಿಸಿದ್ದಾರೆ.

ಇದೇ ವೇಳೆ ತನ್ನ ಮಗನ ಹೆಸರಿನಲ್ಲಿದ್ದ ಕಾರನ್ನು ಸೊಸೆ ಹೆಸರಿಗೆ ಮಾಡಿದ್ದೇನೆಂದೂ ರವಿ ಶಂಕರ್ ತಿಳಿಸಿದ್ದಾರೆ. ಅಲ್ಲದೇ ವಿಮೆಯಾಗಿ ಆತನಿಗೆ ಸಿಕ್ಕ ಮೂರು ಲಕ್ಷ ರೂಪಾಯಿಯನ್ನೂ ಸೊಸೆಗೆ ನೀಡಿದ್ದೇನೆ. ಜೊತೆಗೆ ಎಲ್ಲಾ ಚಿನ್ನಾಭರಣವನ್ನೂ ನೀಡಿದ್ದು, ಇಬ್ಬರು ಮಕ್ಕಳ ಹೆಸರಲ್ಲಿ ಎಫ್‌ಡಿ ಕೂಡಾ ಇದೆ ಎಂದಿದ್ದಾರೆ.

ರಾಜೇಶ್‌ ಸೋನಿಯವರಿಗೆ ಜಬಲ್ಪುರದಲ್ಲಿ ಟ್ರಾನ್ಸ್‌ಪೋರ್ಟ್‌ ಹಾಗೂ ರೆಸ್ಟೋರೆಂಟ್ ಉದ್ಯಮವೂ ಇದೆ. ಇವರ ಪತ್ನಿಯೂ ಸುಮಾರು ಮೂರು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.

ಸದ್ಯ ರವಿಶಂಕರ್‌ರವರ ಈ ನಿರ್ಧಾರವನ್ನು ಎಲ್ಲರೂ ಹಾಡಿ ಹೊಗಳಿದ್ದಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?