ಕೊರೋನಾ ಲಸಿಕೆ ಪಡೆದ 10 ದಿನದಲ್ಲಿ ವ್ಯಕ್ತಿ ಸಾವು; ತನಿಖೆಗೆ ಆದೇಶಿಸಿದ ಮಧ್ಯ ಪ್ರದೇಶ ಸರ್ಕಾರ!
First Published Jan 9, 2021, 9:55 PM IST
ಕೊರೋನಾ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ದಿನಾಂಕ ನಿಗದಿ ಮಾಡಿದೆ. ಇತ್ತ ಭರ್ಜರಿ ತಯಾರಿಗಳು ಆರಂಭಗೊಂಡಿದೆ. ಎರಡು ಲಸಿಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ಲಸಿಕೆ ನೀಡುವ ಕುರಿತು ಕೇಂದ್ರ ಸರ್ಕಾರ ಸರಣಿ ಸಭೆಗಳನ್ನು ನಡೆಸುತ್ತಿದೆ. ಇದರ ನಡುವೆ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ.

ದೇಶದಿಂದ ಕೊರೋನಾ ವೈರಸ್ ಹೊಡೆದೋಡಿಸಲು ಕೇಂದ್ರ ಸರ್ಕಾರ ಇದೀಗ ಲಸಿಕೆ ವಿತರಣೆಗೆ ಮುಂದಾಗಿದೆ. ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆಗೆ ಭಾರತದಲ್ಲಿ ಅನುಮೋದನೆ ಸಿಕ್ಕಿದೆ.

ಜನವರಿ 16 ರಿಂದ ಲಸಿಕೆ ವಿತರಣೆ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡಲು ಕೇಂದ್ರ ರೂಪುರೇಷೆ ಸಿದ್ದಪಡಿಸಿದೆ. ಆದರೆ ಇದರ ನಡುವೆ ಮಧ್ಯಪ್ರದೇಶದಿಂದ ಬಂದ ವರದಿ ಕೇಂದ್ರದ ಉತ್ಸಾಹಕ್ಕೆ ಬ್ರೇಕ್ ಹಾಕುವಂತಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?