MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • Election Special: ಮೊದಲ ಬಾರಿಗೆ ಇವಿಎಂ ಬಳಕೆ ಮಾಡಿದ್ದು ಯಾವಾಗ? ಅಸಿಂಧು ಮತಗಳ ಸಮಸ್ಯೆ ತಪ್ಪಿದ್ದು ಹೇಗೆ?

Election Special: ಮೊದಲ ಬಾರಿಗೆ ಇವಿಎಂ ಬಳಕೆ ಮಾಡಿದ್ದು ಯಾವಾಗ? ಅಸಿಂಧು ಮತಗಳ ಸಮಸ್ಯೆ ತಪ್ಪಿದ್ದು ಹೇಗೆ?

Loksabha Election 2024 With EVM ಈ ವರ್ಷ ಲೋಕಸಭಾ ಚುನಾವಣೆಗಳು ನಡೆಯಲಿವೆ. ಸರ್ಕಾರವನ್ನು ಆಯ್ಕೆ ಮಾಡಲು ಮತದಾರರು ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಸಹಾಯದಿಂದ ಮತ ಚಲಾಯಿಸುತ್ತಾರೆ. ಮೊದಲು ಮತದಾನಕ್ಕೆ ಪೇಪರ್ ಬ್ಯಾಲೆಟ್ ಪೇಪರ್ ಬಳಸಲಾಗುತ್ತಿತ್ತು.

2 Min read
Santosh Naik
Published : Mar 06 2024, 06:50 PM IST
Share this Photo Gallery
  • FB
  • TW
  • Linkdin
  • Whatsapp
110

EVM ಮತ್ತು VVPAT ಯಂತ್ರಗಳನ್ನು ಎರಡು ಸರ್ಕಾರಿ ಕಂಪನಿಗಳಾದ ECIL (ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್) ಮತ್ತು BEL (ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್) ತಯಾರಿಸುತ್ತವೆ. ಚುನಾವಣಾ ಆಯೋಗದ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತಾಂತ್ರಿಕ ತಜ್ಞರ ಸಮಿತಿಯ ತಜ್ಞರ ಮೇಲ್ವಿಚಾರಣೆಯಲ್ಲಿ ಇದರ ನಿರ್ಮಾಣವನ್ನು ಮಾಡಲಾಗುತ್ತದೆ.
 

210

ಮತಗಟ್ಟೆ ವಶಪಡಿಸಿಕೊಳ್ಳುವಂಥ ಕೆಟ್ಟ ಘಟನೆಗಳು ಇವಿಎಂಗಳ ಬಳಕೆಯೊಂದಿಗೆ ಕೊನೆಗೊಂಡಿತು. ಮತಯಂತ್ರಗಳ ಎಣಿಕೆಯಲ್ಲಿನ ವಿಳಂಬ ಮತ್ತು ಇತರ ನ್ಯೂನತೆಗಳನ್ನು ಸಹ ನಿವಾರಿಸಲಾಗಿದೆ. ಈ ಹಿಂದೆ ಮತ ಎಣಿಕೆಗೆ 24ರಿಂದ 48 ಗಂಟೆ ಬೇಕಾಗುತ್ತಿತ್ತು. ಈಗ ಈ ಕೆಲಸವನ್ನು 3-6 ಗಂಟೆಗಳಲ್ಲಿ ಮಾಡಲಾಗುತ್ತದೆ.
 

310

ಪ್ರತಿ ಇವಿಎಂ ಅನ್ನು ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಸೀಲ್ ಮಾಡಲಾಗುತ್ತದೆ. ನಾಮಪತ್ರ ಸಲ್ಲಿಕೆಯಾಗುವವರೆಗೂ ಯಾವ ಅಭ್ಯರ್ಥಿಗೆ ಯಾವ ಇವಿಎಂ ಬಟನ್ ನೀಡಲಾಗಿದೆ ಎನ್ನುವುದನ್ನು ಹೇಳೋದಿಲ್ಲ. ಮತಗಟ್ಟೆಯಲ್ಲಿ ಬಳಸುವ ಎಲ್ಲಾ ಇವಿಎಂಗಳ ಕ್ರಮಸಂಖ್ಯೆಗಳನ್ನು ಅಭ್ಯರ್ಥಿಗೆ ನೀಡಲಾಗುತ್ತದೆ.

410
Counting of Votes

Counting of Votes

ಮತದಾನ ಆರಂಭಕ್ಕೂ ಮುನ್ನ ಅಣಕು ಮತದಾನ ನಡೆಸಲಾಗುತ್ತದೆ. ಯಾವುದೇ ಅಕ್ರಮಗಳಿಲ್ಲದಿದ್ದಲ್ಲಿ ಮಾತ್ರ ಮತದಾನ ನಡೆಯುತ್ತದೆ. ಮತದಾನದ ನಂತರ ಇವಿಎಂ ಅನ್ನು ಸೀಲ್ ಮಾಡಲಾಗುತ್ತದೆ. ಮತ ಎಣಿಕೆಯ ಸಮಯದಲ್ಲಿ ಅದನ್ನು ತೆರೆಯಲಾಗುತ್ತದೆ. ಇವಿಎಂನ ಭದ್ರತಾ ವ್ಯವಸ್ಥೆ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇದರ ಬಳಕೆಗೆ ಇಂಟರ್ನೆಟ್ ಅಗತ್ಯವಿಲ್ಲ, ಇದರಿಂದಾಗಿ ಒಂದೇ ಬಾರಿಗೆ ಅನೇಕ ಇವಿಎಂಗಳನ್ನು ಟ್ಯಾಂಪರಿಂಗ್ ಮಾಡುವ ಅಪಾಯವಿಲ್ಲ.
 

510

ಇವಿಎಂ ಮೂರು ಭಾಗಗಳನ್ನು ಹೊಂದಿದೆ (ನಿಯಂತ್ರಣ ಘಟಕ, ಮತದಾನ ಘಟಕ ಮತ್ತು ವಿವಿಪಿಎಟಿ). ಮತಯಂತ್ರವು ಅಭ್ಯರ್ಥಿಯ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಹೊಂದಿರುತ್ತದೆ. ಮತದಾರರು ಅಭ್ಯರ್ಥಿಯ ಹೆಸರಿನ ಮುಂದಿನ ನೀಲಿ ಬಟನ್ ಒತ್ತಿದಾಗ ಅವರ ಮತ ಯಂತ್ರದಲ್ಲಿ ದಾಖಲಾಗುತ್ತದೆ. ಒಂದು ಯಂತ್ರದಿಂದ 2000 ಮತಗಳು ದಾಖಲಾಗುತ್ತವೆ. ಒಂದು ಮತಯಂತ್ರದಲ್ಲಿ 16 ಅಭ್ಯರ್ಥಿಗಳ ಹೆಸರು ನೋಂದಾಯಿಸಲು ಸ್ಥಳಾವಕಾಶವಿದೆ. ಇದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ ಒಂದಕ್ಕಿಂತ ಹೆಚ್ಚು ಮತಯಂತ್ರಗಳನ್ನು ಬಳಸಲಾಗುತ್ತದೆ.

610

ಈ ಹಿಂದೆ ಮತಪತ್ರಗಳನ್ನು ಬಳಸುವಾಗ ಹೆಚ್ಚಿನ ಸಂಖ್ಯೆಯ ಮತಗಳು ಅಸಿಂಧುವಾಗುತ್ತಿದ್ದವು.. ಅನೇಕ ಚುನಾವಣೆಗಳಲ್ಲಿ ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಮತಗಳಿಗಿಂತ ಅಮಾನ್ಯ ಮತಗಳ ಸಂಖ್ಯೆಯೇ ಹೆಚ್ಚಿತ್ತು. ಈಗ ಇವಿಎಂ ಬಳಕೆಯಿಂದ ಯಾವುದೇ ಮತ ಅಮಾನ್ಯವಾಗಿಲ್ಲ.
 

710


ಮೊದಲ ಸಾರ್ವತ್ರಿಕ ಚುನಾವಣೆಗಳು 1951 ರಿಂದ 1952 ರ ಅವಧಿಯಲ್ಲಿ ನಡೆದವು, ಇದರಲ್ಲಿ ಸುಮಾರು 17 ಕೋಟಿ ಮತದಾರರಿದ್ದರು. ಲೋಕಸಭೆಯ 489 ಸ್ಥಾನಗಳಿಗೆ 1874 ಅಭ್ಯರ್ಥಿಗಳು ನಿಂತಿದ್ದರು.
 

810

ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಗೂ ಪ್ರತ್ಯೇಕ ಮತಪೆಟ್ಟಿಗೆ ಇಡಲಾಗಿತ್ತು. 24,73,850 ಲೋಹದ ಪೆಟ್ಟಿಗೆಗಳು ಮತ್ತು 1,11,095 ಮರದ ಪೆಟ್ಟಿಗೆಗಳನ್ನು ದೇಶಾದ್ಯಂತ ಮತಗಟ್ಟೆಗಳಿಂದ ಮತಪತ್ರಗಳನ್ನು ಸಂಗ್ರಹಿಸಲು ಬಳಸಲಾಗಿತ್ತು. 1951ರ ಸಾರ್ವತ್ರಿಕ ಚುನಾವಣೆಗಳಲ್ಲಿ ಕೆಲವು ಮತಪೆಟ್ಟಿಗೆಗಳಲ್ಲಿ ಕುಂಕುಮ, ಅಕ್ಕಿ ಮತ್ತು ಹೂವುಗಳು ಕಂಡುಬಂದವು. ಕೆಲವು ಮತದಾರರು ಚುನಾವಣೆ ಅನ್ನೋದು ದೈವಿಕಾರ್ಯ ಎನ್ನುವಂತೆ ಕಂಡಿದ್ದರು ಎನ್ನುವುದಕ್ಕೆ ಇದು ಸಾಕ್ಷಿಯಾಗಿತ್ತು.

910

1982 ರ ಮೇ 19 ರಂದು ಕೇರಳದ ಪೇರೂರ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ 50 ಇವಿಎಂಗಳನ್ನು ಮೊದಲು ಬಳಸಲಾಯಿತು. ಈ ಪ್ರಯೋಗ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು.1998 ರ ರಾಜಸ್ಥಾನ, ಮಧ್ಯಪ್ರದೇಶ ಮತ್ತು ದೆಹಲಿಯ ವಿಧಾನಸಭಾ ಚುನಾವಣೆಗಳಲ್ಲಿ, 16 ವಿಧಾನಸಭಾ ಕ್ಷೇತ್ರಗಳಲ್ಲಿ 2930 ಮತಗಟ್ಟೆಗಳಲ್ಲಿ ಇವಿಎಂಗಳನ್ನು ಬಳಸಲಾಯಿತು.
 

1010


2004 ರ 14 ನೇ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ EVM ಗಳನ್ನು ಬಳಸಲಾಯಿತು. ಅಂದಿನಿಂದ 4 ಲೋಕಸಭೆ ಮತ್ತು 122 ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ EVM ಗಳನ್ನು ಬಳಸಲಾಗಿದೆ. ವಿ.ವಿ. PAT ಅನ್ನು ಮೊದಲು ಸೆಪ್ಟೆಂಬರ್ 2013 ರಲ್ಲಿ ನಾಗಾಲ್ಯಾಂಡ್‌ನ 51 ನೊಕ್ಸೆನ್ ವಿಧಾನಸಭಾ ಕ್ಷೇತ್ರದಲ್ಲಿ ಬಳಸಲಾಯಿತು. ವಿ.ವಿ. PAT ಯಂತ್ರವು ಮತದಾರರು ತಮ್ಮ ಮತವು ತಾವು ಮತ ಚಲಾಯಿಸಲು ಬಯಸಿದ ಅಭ್ಯರ್ಥಿಗೆ ಹೋಗಿದೆಯೇ ಎಂದು ಪರಿಶೀಲಿಸಲು ನೆರವಾಗಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಎಲೆಕ್ಟ್ರಾನಿಕ್ ಮತಯಂತ್ರ
ಚುನಾವಣೆ
ಭಾರತ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved