- Home
- News
- India News
- PUC ಓದಿದ ಕ್ರಿಮಿನಲ್ ಸ್ವಪ್ನಾ ದೂತಾವಾಸ ಕಚೇರಿಯಲ್ಲಿ ಆಫೀಸರ್ ಆಗಿದ್ದೇಗೆ..? ಸ್ಮಗ್ಲಿಂಗ್ ಸುಂದರಿಯ ಸೀಕ್ರೆಟ್
PUC ಓದಿದ ಕ್ರಿಮಿನಲ್ ಸ್ವಪ್ನಾ ದೂತಾವಾಸ ಕಚೇರಿಯಲ್ಲಿ ಆಫೀಸರ್ ಆಗಿದ್ದೇಗೆ..? ಸ್ಮಗ್ಲಿಂಗ್ ಸುಂದರಿಯ ಸೀಕ್ರೆಟ್
ಪಿಯುಸಿ ತನಕ ಮಾತ್ರ ಓದಿರುವ ಕೇರಳದ ಬಹುಕೋಟಿ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ದೂತಾವಾಸ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದು ಹೇಗೆ..? ಕ್ರಿಮಿನಲ್ ಹಿನ್ನೆಲೆ ಇರೋ ಸ್ವಪ್ನಾಗೆ ಕೇರಳ ಸಿಎಂ ಜೊತೆ ಕ್ಲೋಸ್ ಲಿಂಕ್..!

ಕೇರಳದ ಬಹುಕೋಟಿ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ಸುರೇಶ್ ರನ್ನು ಎನ್ ಐಎ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ರಾಜತಾಂತ್ರಿಕ ರಕ್ಷಣೆ ಹೊಂದಿರುವ ''ಡಿಪ್ಲೊಮ್ಯಾಟಿಕ್ ಬ್ಯಾಗೇಜ್'' ನಲ್ಲಿದ್ದ 30 ಕೆಜಿ ಚಿನ್ನವನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿಕೊಂಡಿದ್ದರು. ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನ ಅಕ್ರಮ ಸಾಗಣೆಯ ಆರೋಪಿ ಸರ್ಕಾರಿ ಸಿಬ್ಬಂದಿ ಸ್ವಪ್ನ ಸುರೇಶ್ ಎಂದು ಹೇಳಲಾಗಿತ್ತು.

ಮಗಳೂ ಗೌರಿ, ಮಗ ಅನಿರುದ್ಧ, ಹಾಗೂ ಸಂದೀಪ್ ಜೊತೆ ದೇಶ ಬಿಡಲು ಸಿದ್ಧತೆ ನಡೆಸಿದ ಸ್ವಪ್ನಾ ಕ್ರಿಮಿನಲ್ ಹಿನ್ನೆಲೆ ಮತ್ತು ಸಿಎಂ ಜೊತೆಗಿನ ನಂಟು ಸದ್ಯ ಕೇರಳದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.

ಸರಿತ್, ಸ್ವಪ್ನ ಪ್ರಭ ಸುರೇಶ್, ಫೈಜಲ್ ಫರೀದ್ ಮತ್ತು ಸಂದೀಪ್ ನಾಯರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೇರಳ ಸರ್ಕಾರದ ಮಾಹಿತಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಸ್ವಪ್ನ ಸುರೇಶ್ ಕೆಲಸ ಮಾಡುತ್ತಿದ್ದರು.

ಯುಎಇ ರಾಯಭಾರ ಕಚೇರಿಯ ಮಾಜಿ ಸಾರ್ವಜನಿಕ ಸಂಪರ್ಕಾಧಿಕಾರಿ ಸರಿತ್ ಕುಮಾರ್ ಬಂಧನ ಮಾಡಿದಾಗ ಅನೇಕರ ಹೆಸರುಗಳು ಹೊರಗೆ ಬಂದಿದ್ದವು. ಈಗಾಗಲೇ ಕೇರಳಾದಲ್ಲಿ ಸರಿತ್ ಕುಮಾರ್ ಬಂಧಿಸಿದ್ದ ಎನ್ ಐಎ ಹೆಚ್ಚಿನ ತನಿಖೆ ನಡೆಸಲಿದೆ.

ಪಿಯುಸಿ ಮಾತ್ರ ಓದಿರುವ ಸ್ವಪ್ನಾ ಕೈಯಲ್ಲಿ ಫೇಕ್ ಡಿಗ್ರಿ ಸರ್ಟಿಫಿಕೇಟ್ ಇರುವುದರಿಂದಲೇ ಆಕೆ ದೂತಾವಾಸ ಕಚೇರಿಯಲ್ಲಿ ಕೆಲಸಕ್ಕೆ ಸೇರಿದ್ದರು.

ಸಿಎಂ ಕಾರ್ಯದರ್ಶಿ ಐಎಎಸ್ ಎಂ ಶಿವಶಂಕರ್ ಜೊತೆ ಅತ್ಯಂತ ನಿಕಟ ಸಂಬಂಧ ಹೊಂದಿರುವ ಸ್ವಪ್ನಾಗೆ ಸಿಎಂ ಜೊತೆಗೂ ನಂಟಿತ್ತು. ಸಿಎಂ ಕಾರ್ಯದರ್ಶಿಯೂ ಸ್ವಪ್ನಾ ಮನೆಗೆ ಸದಾ ಬರುತ್ತಿದ್ದ ವ್ಯಕ್ತಿಯಾಗಿದ್ದರು. ಒಂದಷ್ಟು ತನಿಖೆಗಳಿಂದ ತಪಿಸಲು ಸ್ವಪ್ನಾಗೆ ಇದೇ ಅಧಿಕಾರಿ ತಮ್ಮ ಅಧಿಕಾರ ಬಳಸಿಕೊಂಡು ನೆರವಾಗಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ