ಏ ಮಿಸ್ಟರ್ ನನ್ನಪ್ಪ ಮಿನಿಸ್ಟರ್: ಹೆಲ್ಮೆಟ್ ಇಲ್ಲ ದಂಡ ಕಟ್ಟಿ ಅಂದ್ರೆ ನಡು ರಸ್ತೆಯಲ್ಲೇ ಕುಳಿತ್ಲು!
ಟ್ರಾಫಿಕ್ ಪೊಲೀಸ್ ಚೆಕ್ಕಿಂಗ್ ವೇಳೆ ಸಾಮಾನ್ಯವಾಗಿ ಚಿತ್ರ ವಿಚಿತ್ರ ಪ್ರಕರಣಗಳನ್ನೆದುರಿಸುತ್ತಾರೆ. ಕೆಲವರು ಭಾವನಾತ್ಮಕವಾಗಿ ಮಾತನಾಡುತ್ತಾ ದಂಡದಿಂದ ಪಾರಾಗಲು ಯತ್ನಿಸಿದರೆ, ಇನ್ನು ಕೆಲವರು ಧಮ್ಕು ಹಾಕಿ ಪರಾರಿಯಾಗುತ್ತಾರೆ. ಇಲ್ಲೂ ನಡೆದದ್ದು ಇಂತಹುದೇ ಪ್ರಕರಣ. ಇಲ್ಲಿ ನಡುರಸ್ತೆಯಲ್ಲಿ ಧರಣಿ ನಡೆಸುತ್ತಿರುವುದುಸಅ ಬೇರಾರೂ ಅಲ್ಲ, ಝಾರ್ಖಂಡ್ ಸಾರಿಗೆ ಸಚಿವ ಚಂಪೈ ಸೊರೇನ್ ಮಗಳು ದುಖನಿ ಸೊರೇನ್. ಆದರೆ ಇವರು ಅದ್ಯಾವುದೋ ಸಮಸ್ಯೆಯನ್ನಿಟ್ಟುಕೊಂಡು ಧರಣಿ ನಡೆಸುತ್ತಿಲ್ಲ, ಬದಲಾಗಿ ಟ್ರಾಫಿಕ್ ಪೊಲೀಸ್ ಒಬ್ಬ ಮಿನಿಸ್ಟರ್ ಮಗಳನ್ನು ನಿಲ್ಲಿಸಿ ಹೆಲ್ಮೆಟ್ ಇಲ್ಲಮ್ಮ ದಂಡ ಕಟ್ಟು ಎಂದಿದ್ದಕ್ಕೆ ಕೋಪ ಬಂದು ಹೀಗ್ಮಾಡಿದ್ದಾಳೆ. ಇದಾದ ಬಳಿಕ ಟ್ರಾಫಿಕ್ ಪೊಪಲೀಸ್ ಮಾತ್ರ ಯಾಕೆ ಬೇಕು ಉಸಾಬರಿ ಎಂದು ಹೋಗಲು ಬಿಟ್ಟಿದ್ದಾರೆ. ಆದರೀಗ ಮಂತ್ರಿ ಮಾತ್ರ ಪೊಲೀಸರು ತನ್ನ ಮಗಳೊಂದಿಗೆ ಕೆಟ್ಟದದಾಗಿ ವ್ಯವಹರಿಸಿದರು ಎಂದು ದೂರಿ ಈ ವಿಚಾರವನ್ನು ಮುಖ್ಯಮಂತ್ರಿವರೆಗೆ ಕೊಂಡೊಯ್ದಿದ್ದಾರೆ.
ಈ ಘಟನೆ ಬುಧವಾರ ನಡೆದಿದ್ದು, ಪೊಲೀಸರು ಚೆಕ್ಕಿಂಗ್ ನಡೆದಿದೆ. ಈ ವೇಳೆ ಟ್ರಾಫಿಕ್ ಪೊಲೀಸರು ಮಾಸ್ಕ್ ಹಾಗೂ ಹೆಲ್ಮೆಟ್ ಇಲ್ಲದೇ ಪ್ರಯಾಣಿಸುತ್ತಿದ್ದವರಿಗೆ ದಂಡ ವಿಧಿಸುತ್ತಿದ್ದರು. ಹೀಗಿರುವಾಗಲೇ ದುಖನಿ ಸೊರೇನ್ ಅದೇ ಮಾರ್ಗದಲ್ಲಿ ಬಂದಿದ್ದಾರೆ.
ಟ್ರಾಫಿಕ್ ಪೊಲೀಸ್ ಅನಿಲ್ ನಾಯಕ್ ಗಸಿಎಅವರನ್ನು ತಡೆದು ಐನೂರು ರೂಪಾಯಿ ದಂಡ ಭರಿಸುವಂತೆ ಸೂಚಿಸಿದ್ದಾರೆ. ಇವರನ್ನು ಕೋಪಕ್ಕೀಡಾಗುವಂತೆ ಮಾಡಿದೆ. ತಾನು ಮಿನಿಸ್ಟರ್ ಮಗಳು ಎಂದು ಅವರು ಪೊಲೀಸಪ್ಪನಿಗೆ ತಿಳಿಸಿದ್ದಾರೆ. ಹೀಗಾಗಿ ದಂಡ ಕಟ್ಟಲ್ಲ ಎಂದೂ ಹೇಳಿದ್ದಾರೆ.
ಆದರೆ ಅತ್ತ ಟ್ರಾಫಿಕ್ ಪೊಲೀಸ್ ಕೂಡಾ ಅವರ ಮಾತನ್ನು ಕೇಳಲು ರೆಡಿ ಇರಲಿಲ್ಲ. ಹೀಗಾಗಿ ಅವರು ನಡು ರಸ್ತೆಯಲ್ಲೆ ಧರಣಿಗೆ ಕುಳಿತಿದ್ದಾರೆ. ಬಳಿಕ ಸಾರಿಗೆ ಸಚಿವರು ಟ್ರಾಫಿಕ್ ಪೊಲೀಸ್ ಬಳಿ ಮಾತನಾಡಿದ್ದಾರೆ. ತದ ನಂತರ ಟ್ರಾಫಿಇಕ್ ಪೊಲೀಸ್ ಅವರನ್ನು ತೆರಳಲು ಬಿಟ್ಟಿದ್ದಾರೆ.
ಆದರೆ ತಾವು ವಾರ್ನಿಂಗ್ ನೀಡಿ ದುಖನಿಯನ್ನು ಬಿಟ್ಟಿದ್ದೇವೆ. ಅವರೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ ಎಂದು ಟ್ರಾಫಿಕ್ ಪೊಲೀಸ್ ತಿಳಿಸಿದ್ದಾರೆ.
ಆದರೀಗ ಸಾರಿಗೆ ಸಚಿವರು ಮಾತ್ರ ಟ್ರಾಫಿಕ್ ಪೊಲೀಸ್ ತನ್ನ ಮಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಮುಖ್ಯಮಮತ್ರಿಗಳಿಗೆ ದೂರು ನೀಡುತ್ತೇನೆ ಎಂದಿದ್ದಾರೆ.