ಈ ಹಸುವಿಗೆ ಇದೆಂಥಾ ಅದೃಷ್ಟ, 1 ಕೋಟಿಯ ಕೊಟ್ಟಿಗೆಯಲ್ಲಿ ವಾಸಿಸುವ 'ರಾಧಾ'!
ಬಹುಶಃ ಇದು ದೇಶದಲ್ಲಿಯೇ ಅತ್ಯಂತ ಅದೃಷ್ಟವಂತ ಹಸು ಎಂದರೆ ತಪ್ಪಾಗೋದಿಲ್ಲ. ಯಾಕೆಂದರೆ, 1 ಕೋಟಿ ರೂಪಾಯಿಯ ಕೊಟ್ಟಿಗೆಯಲ್ಲಿ ಈ ಹಸು ವಾಸವಿದೆ. ದಿನದ 24 ಗಂಟೆಯೂ ಈ ಹಸುವಿಗೆ ಬೇಕಾದನ್ನು ನೀಡಲು ನಾಲ್ವರು ಸಿಬ್ಬಂದಿಗಳಿದ್ದಾರೆ. ಹಾಗೇನಾದರೂ ಹಸುವಿನ ಆರೋಗ್ಯದಲ್ಲಿ ಸಣ್ಣಮಟ್ಟದ ಏರುಪೇರಾದರೂ ಅದನ್ನು ನೋಡಿಕೊಳ್ಳಲು ವೈದ್ಯರ ತಂಡವೇ ಇದೆ. ಇಂಥದ್ದೊಂದು ಹಸು ಇರುವುದು ರಾಜಸ್ಥಾನದ ಜಲೋರ್ ಜಿಲ್ಲೆಯ ಧನೋಲ್ ಗ್ರಾಮದ ರಾಣಿವಾಡ ಪ್ರದೇಶದಲ್ಲಿ. ಉದ್ಯಮಿ ನರೇಂದ್ರ ಪುರೋಹಿತ್ ಅವರ ನಿವಾಸದಲ್ಲಿರುವೀ ಹಸುವಿನ ಹೆಸರು ರಾಧಾ. ಪುರೋಹಿತ್ ಮುಂಬೈನ ಬಿಎಂಸಿಯಲ್ಲಿ ಗುತ್ತಿಗೆದಾರರು ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ವ್ಯವಹಾರವನ್ನು ಹೊಂದಿದ್ದಾರೆ.
ರಾಧಾಗೆ ಪ್ರತಿದಿನವೂ ದೇಸೀ ತುಪ್ಪದಿಂದ ತಯಾರಿಸಲಾದ ಲಡ್ಡುವನ್ನು ಮಾತ್ರ ಸೇವಿಸುತ್ತದೆ. ಉದ್ಯಮಿ ನರೇಂದ್ರ ಪುರೋಹಿತ್ ಬಾಲ್ಯದಿಂದಲೂ ಹಸುಗಳ ಮೇಲೆ ವಿಶೇಷವಾದ ಪ್ರೀತಿಯನ್ನು ಹೊಂದಿದ್ದರು. ಅದಲ್ಲದೆ ಸ್ಥಳೀಯ ಪಥಮೇಧ ಗೋಶಾಲೆಗೆ ಬಾಲ್ಯದಲ್ಲಿ ತಪ್ಪದೇ ಹೋಗುತ್ತಿದ್ದರು.
ಪ್ರತಿದಿನ ಗೋಶಾಲೆಗೆ ಹೋಗುತ್ತಿದ್ದ ನರೇಂದ್ರ ಪುರೋಹಿತ್ ಅವರಿಗೆ 7 ವರ್ಷದ ಹಿಂದೆ ಹಸುವನ್ನು ಸಾಕಬೇಕು ಎನ್ನುವ ಆಸೆ ಬಂದಿತ್ತು. ಹಾಗಾಗಿ ಇದೇ ಗೋಶಾಲೆಯಿಂದ ಹಸುವನ್ನು ಕರೆತಂದು ಅದಕ್ಕೆ ರಾಧಾ ಎನ್ನುವ ಹೆಸರನ್ನು ಇಟ್ಟಿದ್ದರು. ಭಾರಿ ದೊಡ್ಡ ಮೊತ್ತದಲ್ಲಿ ಅವರು ಈ ಹಸುವನ್ನು ಖರೀದಿ ಮಾಡಿದ್ದರು.
ನರೇಂದ್ರ ಪುರೋಹಿತ್ ಅವರು ತಮ್ಮ ಗುರು ಮಹಾರಾಜರ ಆಶೀರ್ವಾದ ಪಡೆದು ಹಸುವಿಗೆ ರಾಧಾ ಎಂದು ಹೆಸರಿಟ್ಟರು. ಅಂದಿನಿಂದ ಅವರು ಹಸುವಿನ ಸೇವೆ ಮಾಡಲು ಪ್ರಾರಂಭ ಮಾಡಿದ್ದರು. ಹಸುವನ್ನು ತಂದ ನಂತರ ನರೇಂದ್ರ ಪುರೋಹಿತರ ವ್ಯಾಪಾರ ನಿರೀಕ್ಷೆಗೂ ಮೀರಿ ಉತ್ತಮವಾಗಿತ್ತು.
ನರೇಂದ್ರ ಪುರೋಹಿತ್ ಅವರು ತಮ್ಮ ಗುರು ಮಹಾರಾಜರ ಆಶೀರ್ವಾದ ಪಡೆದು ಹಸುವಿಗೆ ರಾಧಾ ಎಂದು ಹೆಸರಿಟ್ಟರು. ಅಂದಿನಿಂದ ಅವರು ಹಸುವಿನ ಸೇವೆ ಮಾಡಲು ಪ್ರಾರಂಭ ಮಾಡಿದ್ದರು. ಹಸುವನ್ನು ತಂದ ನಂತರ ನರೇಂದ್ರ ಪುರೋಹಿತರ ವ್ಯಾಪಾರ ನಿರೀಕ್ಷೆಗೂ ಮೀರಿ ಉತ್ತಮವಾಗಿತ್ತು.
ಸುಮಾರು 266 ಗಜಗಳ ಜಾಗದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದ ಮನೆಯನ್ನೂ ರಾಧಾಗೆ ನಿರ್ಮಿಸಲಾಗಿದೆ. ಇದರ ಭದ್ರತೆಯಾಗಿ ವಿವಿಧೆಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೊಡ್ಡ ಬಂಗಲೆಯಲ್ಲಿ ಹಸು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಸಂಚಾರ ಮಾಡುತ್ತಲೇ ಇರುತ್ತದೆ.
ಹಸುವಿಗೆ ಸ್ನಾನ ಮಾಡುವುದರಿಂದ ಹಿಡಿದು ಮಸಾಜ್ ಮಾಡಲು ಕೂಡ ಸಿಬ್ಬಂದಿಗಳಿದ್ದಾರೆ. ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ಲಂಪಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ. ರಾಧಾಗೂ ಕೂಡ ಇತ್ತೀಚೆಗೆ ಲಂಪಿ ರೋಗಕ್ಕೆ ತುತ್ತಾಗಿತ್ತು. ಆದರೆ, ಕುಟುಂಬದವರ ಪ್ರಾರ್ಥನೆಯಿಂದ ಹಸು ಸಂಪೂರ್ಣವಾಗಿ ಗುಣಮುಖವಾಗಿದೆ.
ಆರಂಭದಲ್ಲಿ ಹಸುವಿಗೆ ಒಣ ಮೇವನ್ನು ನೀಡಲಾಗುತ್ತಿತ್ತು. ನಂತರ ಹಸುವಿಗೆ ದೇಸಿ ತುಪ್ಪದಿಂದ ಮಾಡಿದ ಲಡ್ಡುಗಳನ್ನು ತಿನ್ನಲು ನೀಡಲಾಗುತ್ತದೆ. ಹಸುವಿಗೆ ಲಡ್ಡು, ಲ್ಯಾಪ್ಸಿಯೆಂದರೆ ತುಂಬಾ ಇಷ್ಟವಾಗಿದ್ದು, ಬೇರೆ ಆಹಾರ ಕೊಟ್ಟರೆ ಈಗ ತಿನ್ನುವುದಿಲ್ಲ.
ಕೈಗಾರಿಕೋದ್ಯಮಿ ನರೇಂದ್ರ ಅವರು 4 ತಿಂಗಳ ಹಿಂದೆ ಅಹಮದಾಬಾದ್‌ನಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಾರ್ಖಾನೆಯನ್ನು ಪ್ರಾರಂಭ ಮಾಡಿದ್ದಾರೆ. ಹಸುವಿನ ತಳಿಯಾದ ಸುರಭಿ ಹೆಸರನ್ನು ತಮ್ಮ ಎಲೆಕ್ಟ್ರಿಕ್ ಬೈಕ್‌ಗೆ ಇಡಲಾಗಿದೆ.