ಮಾಡಿದ ಪಾಪ ಕರ್ಮಗಳು ಕೊನೆಯಾಗಲೆಂದು ತೊಡೆಯ ಚರ್ಮದಿಂದ ತಾಯಿಗೆ ಚಪ್ಪಲಿ ಮಾಡಿಸಿದ ಮಗ!
ಕಲಿಯುಗದಲ್ಲಿ ಒಂದೆಡೆ ಎಷ್ಟೋ ಮಕ್ಕಳು ತಂದೆ-ತಾಯಿಯನ್ನು ಮನೆಯಿಂದ ಹೊರದಬ್ಬುವುದು, ಮನೆಯ ಖರ್ಚಿಗೆ ಭಾರ ಎಂದು ವೃದ್ಧಾಶ್ರಮಕ್ಕೆ ಕಳಿಸುವುದನ್ನ ನೋಡುತ್ತಿದ್ದೇವೆ. ಆದರೆ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ತಾಯಿಯ ಋಣ ತೀರಿಸಲು, ತನ್ನ ಪಾಪ ಕರ್ಮ ತೊಳೆಯಲು ತೊಡೆಯ ಚರ್ಮ ಸುಲಿದು ತಾಯಿಗೆ ಚಪ್ಪಲಿ ಮಾಡಿಸಿದ್ದಾನೆ!
ತಂದೆ-ತಾಯಿಗಳನ್ನ ದೇವರಂತೆ ಪೂಜಿಸುವುದರಲ್ಲಿ ನಮಗೆ ಶ್ರವಣ ಕುಮಾರ ಆದರ್ಶ. ತಂದೆತಾಯಿಯನ್ನ ಬುಟ್ಟಿಯಲ್ಲಿ ಹೊತ್ತುಕೊಂಡು ತಿರುಗಾಡುವ ಶ್ರವಣಕುಮಾರ ಕತೆಯನ್ನು ಎಲ್ಲರೂ ಕೇಳಿಯೇ ಇರುತ್ತೀರಿ. ಅಂತಹ ಶ್ರವಣ ಕುಮಾರನಂತವರು ಈ ಕಲಿಯುಗದಲ್ಲಿ ಎಲ್ಲಿದ್ದಾರೆ ಬಿಡಿ ಅಂತಾ ನಿಮಗೆ ಅನಿಸಬಹುದು ಆದರೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಅಂತಹ ಕಲಿಯುಗದ ಶ್ರವಣ ಕುಮಾರ ಇದ್ದಾರೆಂಬುದು ಬಹಳ ಜನಕ್ಕೆ ತಿಳಿದಿಲ್ಲ.
ತಾಯಿಯನ್ನ ದೇವರಂತೆ ಪೂಜಿಸುವ, ತಾಯಿಗಾಗಿ ಪ್ರಾಣತ್ಯಾಗಕ್ಕೂ ಮುಂದಾಗುವ ಮಗನೊಬ್ಬನಿದ್ದಾನೆ. ಅಧುನಿಕ ಶ್ರವಣ ಕುಮಾರ ಎಂದೇ ಪ್ರಸಿದ್ಧಿ ಪಡೆದಿರುವ ರೌನಕ್ ಗುರ್ಜರ್. ತಾಯಿಯನ್ನ ದೇವರಂತೆ ಪೂಜಿಸುವ ರೌನಕ್ ಅಂತಿಂಥ ಮನುಷ್ಯನಲ್ಲ ಅವನೊಬ್ಬ ದೊಡ್ಡ ರೌಡಿಶೀಟರ್ ಎಂದರೆ ಅಚ್ಚರಿ ಪಡುತ್ತೀರಿ ಹೌದು, ಈತನ ವಿರುದ್ಧ ಕೊಲೆ ದರೋಡೆ ಸೇರಿ ಬರೊಬ್ಬರಿ 30ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್‌ಗಳಿವೆ.
ರೌನಕ್ ಗುರ್ಜರ್ ಜೈಲಿಗೆ ಹೋದ ನಂತರ ಮನಸು ಬದಲಾವಣೆಯಾಗಿದೆ. ರಾಮಾಯಣದಿಂದ ಸ್ಫೂರ್ತಿ ಸಿಕ್ಕಿದೆ. ತನ್ನ ಪಾಪ ಕರ್ಮಗಳು ಕೊನೆಯಾಗಲಿ ಎಂದು ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿ ತಾಯಿಗೆ ನೀಡಿದ್ದಾನೆ.
ರೌನಕ್ ಗುರ್ಜರ್ ಜೈಲಿಗೆ ಹೋದ ನಂತರ ಮನಸು ಬದಲಾವಣೆಯಾಗಿದೆ. ರಾಮಾಯಣದಿಂದ ಸ್ಫೂರ್ತಿ ಸಿಕ್ಕಿದೆ. ತನ್ನ ಪಾಪ ಕರ್ಮಗಳು ಕೊನೆಯಾಗಲಿ ಎಂದು ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿ ತಾಯಿಗೆ ನೀಡಿದ್ದಾನೆ.
ರೌನಕ್ ಗುರ್ಜರ್ ಅವರನ್ನ ಅಂಬುಲೆನ್ಸ್‌ನಲ್ಲಿ ಕರೆದುಕೊಂಡು ಬಂದಾಗ ಏನೋ ಆಗಿದೆ ಆತಂಕ ವ್ಯಕ್ತಪಡಿಸಿದ್ದರು. ತಾಯಿಗೆ ಚರ್ಮದ ಪಾದರಕ್ಷೆ ನೀಡಿದಾಗ ಮತ್ತು ಅದು ಮಗನ ತೊಡೆಯ ಚರ್ಮದಿಂದ ಮಾಡಿದ್ದು ಎಂದು ತಿಳಿದಾಗ ನೆರೆದಿದ್ದವರೆಲ್ಲ ಹೊಗಳಲಾರಂಭಿಸಿದರು. ಆದರೆ ತಾಯಿ ಮಾತ್ರ ಮಗನ ಕಂಡು ಕಣ್ಣೀರು ಹಾಕಿ ಬಾಚಿ ತಬ್ಬಿಕೊಂಡಳು. 'ನನ್ನ ಮಗ ರಾಮಭಕ್ತ. ದೇವರು ಅವನ ದುಃಖವೆಲ್ಲ ನನ್ನ ಮಡಿಲಲ್ಲಿ ಇಡಲಿ' ಎಂದು ಮಗನನ್ನ ತಬ್ಬಿಕೊಂಡು ಕಣ್ಣೀರು ಹಾಕಿದ ತಾಯಿ.
ಜೈಲಿನಲ್ಲಿದ್ದಾಗ ತನ್ನ ತಪ್ಪಿನ ಅರಿವಾಗಿ ತನ್ನ ಪಾಪ ಕರ್ಮವನ್ನು ತೊಳೆದುಕೊಳ್ಳಲು ಇರುವ ಮಾರ್ಗವೆಂದರೆ ತನ್ನ ತಾಯಿಗೆ ತೊಡೆಯ ಚರ್ಮದಿಂದ ಪಾದುಕೆ ಮಾಡಿಸಬೇಕು ಎಂದು ನಿರ್ಧರಿಸಿ ವೈದ್ಯರ ಬಳಿ ತೆರಳಿ ಈ ಕುರಿತು ವೈದ್ಯರಿಗೆ ತಿಳಿಸಿದಾಗ ಶಾಕ್ ಆಗಿದ್ದರು. ಬಳಿಕ ಶಸ್ತ್ರಚಿಕಿತ್ಸೆ ಮೂಲಕ ಚರ್ಮ ತೆಗೆದಿದ್ದ ವೈದ್ಯರು.
ಜೀತೇಂದ್ರ ಮಹಾರಾಜ ಅವರ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತಾಯಿ ಭಾಗಿಯಾಗಿರುವುದು ತಿಳಿದು ನೇರವಾಗಿ ಅಲ್ಲಿಗೇ ಹೋಗಿದ್ದಾನೆ. ಕಾರ್ಯಕ್ರಮದಲ್ಲೇ ತಾಯಿಗೆ ಪಾದರಕ್ಷೆ ನೀಡಿದ್ದಾನೆ. ಮಗನನ್ನ ತಬ್ಬಿಕೊಂಡ ತಾಯಿ 'ಈ ರೀತಿ ಹರಕೆ ಇಟ್ಟುಕೊಳ್ಳುತ್ತಾನೆಂದು ನಾನು ಅಂದುಕೊಂಡಿರಲಿಲ್ಲ, ಕಲಿಯುಗದಲ್ಲಿ ಇಂತಹ ಮಗನನ್ನು ಪಡೆದ ನಾನು ಅದೃಷ್ಟಶಾಲಿ' ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.