- Home
- News
- India News
- ಕಾರ್‌ನಲ್ಲಿ ಶವವಾಗಿ ಪತ್ತೆಯಾದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್; ಸಾವಿನ ಸುತ್ತ ನೂರಾರು ಅನುಮಾನ
ಕಾರ್‌ನಲ್ಲಿ ಶವವಾಗಿ ಪತ್ತೆಯಾದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್; ಸಾವಿನ ಸುತ್ತ ನೂರಾರು ಅನುಮಾನ
ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕಮಲ್ ಕೌರ್ ಅಲಿಯಾಸ್ ಕಾಂಚನ್ ತಿವಾರಿ ಅವರ ಶವ ಬಠಿಂಡಾದಲ್ಲಿ ಕಾರಿನೊಳಗೆ ಪತ್ತೆಯಾಗಿದೆ. ಕಮಲ್ ಕೌರ್ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ.
15

Image Credit : @kamalkaurinstagram
ಕಮಲ್ ಕೌರ್ ಶವ ಪತ್ತೆ
ಪಂಜಾಬಿನ ಪ್ರಸಿದ್ಧ ಸಾಮಾಜಿಕ ಮಾಧ್ಯಮ ಪ್ರಭಾವಿ ಕಮಲ್ ಕೌರ್ ಅಲಿಯಾಸ್ ಕಾಂಚನ್ ತಿವಾರಿ ಅವರ ಶವ ಬುಧವಾರ ಬಠಿಂಡಾದಲ್ಲಿ ಕಾರಿನೊಳಗೆ ಪತ್ತೆಯಾಗಿದೆ. ಗುರುವಾರ ಅವರ ಮರಣ ಮತ್ತು ಗುರುತನ್ನು ದೃಢಪಡಿಸಲಾಗಿದೆ.
25
Image Credit : @kamalkaurinstagram
ಎಲ್ಲಿ ಪತ್ತೆಯಾಯಿತು ಕಮಲ್ ಕೌರ್ ಶವ?
ವೈದ್ಯಕೀಯ ವಿಶ್ವವಿದ್ಯಾಲಯದ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕಮಲ್ ಕೌರ್ ಅಲಿಯಾಸ್ ಕಾಂಚನ್ ತಿವಾರಿ ಅವರ ಶವ ಪತ್ತೆಯಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
35
Image Credit : @kamalkaurinstagram
ಕಮಲ್ ಕೌರ್ ಯಾರು?
ಕಮಲ್ ಕೌರ್ ಸೋಶಿಯಲ್ ಮೀಡಿಯಾದಲ್ಲಿ 3.86 ಲಕ್ಷಕ್ಕೂ ಹೆಚ್ಚು ಪಾಲೋವರ್ಸ್‌ಗಳನ್ನು ಹೊಂದಿದ್ದರು. ಚರ್ಚಾಸ್ಪದ ವಿಷಯಗಳ ಬಗ್ಗೆ ಕಮಲ್ ಕೌರ್ ರೀಲ್‌ಗಳನ್ನು ಮಾಡುತ್ತಿದ್ದರು. ವಿವಾದಾತ್ಮಕ ವಿಷಯದ ಕಾರಣ ಬೆದರಿಕೆಗಳು ಬಂದಿದ್ದವು.
45
Image Credit : @kamalkaurinstagram
ಕಮಲ್ ಕೌರ್ ಸಾವಿಗೆ ಕಾರಣ?
ಕಮಲ್ ಕೌರ್ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
55
Image Credit : @kamalkaurinstagram
ಮೊಬೈಲ್‌ನಿಂದ ಸುಳಿವು?
ಕಮಲ್ ಕೌರ್ ಅವರ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಕರೆ ವಿವರಗಳು ಮತ್ತು ಸಾಮಾಜಿಕ ಮಾಧ್ಯಮ ಚಾಟ್‌ಗಳನ್ನು ಪರಿಶೀಲಿಸಲಾಗುತ್ತಿದೆ.
Latest Videos