- Home
- News
- India News
- ಹಬ್ಬ ಭಾನುವಾರ ಬಂದ್ರೆ ಬೇಜಾರಾಗೋ ನಿಮ್ಗೆ ರಜೆ ನೀಡೋದ್ರಲ್ಲಿ ಇಂಡಿಯಾ ಯಾವ ಸ್ಥಾನದಲ್ಲಿದೆ ಗೊತ್ತಾ?
ಹಬ್ಬ ಭಾನುವಾರ ಬಂದ್ರೆ ಬೇಜಾರಾಗೋ ನಿಮ್ಗೆ ರಜೆ ನೀಡೋದ್ರಲ್ಲಿ ಇಂಡಿಯಾ ಯಾವ ಸ್ಥಾನದಲ್ಲಿದೆ ಗೊತ್ತಾ?
ಹಬ್ಬ ಬಂತೆಂದ್ರೆ ಅದೇನೋ ಖುಷಿ. ಹಬ್ಬ ಭಾನುವಾರ ಬಂದ್ರೆ ಎಲ್ಲರ ಮುಖ ಸೆಪ್ಪೆಯಾಗುತ್ತೆ. ಛೇ ಒಂದು ರಜೆ ಮಿಸ್ ಆಯ್ತು ಅಂತ ಗೋಳಾಡ್ತಾರೆ. ಅಷ್ಟಕ್ಕೂ ಭಾರತದಲ್ಲಿ ಎಷ್ಟು ರಜೆ ಸಿಗುತ್ತೆ, ರಜೆ ನೀಡೋದ್ರಲ್ಲಿ ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ?

ವಾರ್ಷಿಕ 42 ರಜೆ
ನಿಮಗೆ ಅಚ್ಚರಿ ಆಗ್ಬಹುದು, ಭಾರತ ವಿಶ್ವದಲ್ಲೇ ಅತಿ ಹೆಚ್ಚು ರಜಾದಿನಗಳನ್ನು ನೀಡುವ ದೇಶವಾಗಿ ಹೊರಹೊಮ್ಮಿದೆ. ಬಹುತೇಕ ದೇಶಗಳು ವಾರ್ಷಿಕವಾಗಿ ಸರಾಸರಿ 13 ಸಾರ್ವಜನಿಕ ರಜಾ ನೀಡುತ್ವೆ. ಭಾರತ ತನ್ನ ಸಾಂಸ್ಕೃತಿಕ, ಧಾರ್ಮಿಕ ಮತ್ತು ಪ್ರಾದೇಶಿಕ ವೈವಿಧ್ಯತೆಯಿಂದಾಗಿ 42 ಸಾರ್ವಜನಿಕ ರಜಾದಿನಗಳನ್ನು ಹೊಂದಿದೆ.
ನಂಬರ್ ಒನ್ ಸ್ಥಾನದಲ್ಲಿ ಭಾರತ
ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬಗಳು, ದೀಪಾವಳಿ, ಹೋಳಿ, ಈದ್, ಕ್ರಿಸ್ಮಸ್, ಗುರುನಾನಕ್ ಜಯಂತಿ ಮತ್ತು ಹಲವಾರು ರಾಜ್ಯಮಟ್ಟದ ಹಬ್ಬಗಳು ಸೇರಿ ಭಾರತದಲ್ಲಿ 42 ಸಾರ್ವಜನಿಕ ರಜೆಗಳಿವೆ. ಹೊಸ 2026 ಸೂಚ್ಯಂಕ ಮತ್ತು ವಿವಿಧ ವರದಿಗಳ ಪ್ರಕಾರ, ರಜೆ ಸಂಖ್ಯೆಯಲ್ಲಿ ಭಾರತ 190 ದೇಶಗಳನ್ನು ಹಿಂದಿಕ್ಕಿ ನಂಬರ್ ಒನ್ ಸ್ಥಾನ ಪಡೆದಿದೆ.
ಭಾರತ ಹಬ್ಬದ ರಾಜಧಾನಿ
ಭಾರತ ಬರೀ ಕೆಲಸ ಮತ್ತು ಜೀವನದ ಜೊತೆ ಸಮತೋಲನ ಸಾಧಿಸೋದಲ್ಲದೆ ಹಬ್ಬದ ರಾಜಧಾನಿ ಎಂಬ ಪಟ್ಟಗಿಟ್ಟಿಸಿಕೊಳ್ಳುತ್ತದೆ. ಭಾರತಕ್ಕೆ ಸಿಕ್ಕ ಈ ನಂಬರ್ ಒನ್ ಪಟ್ಟ ಅದರ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಹಿಂದೂ ಧರ್ಮ, ಇಸ್ಲಾಂ, ಸಿಖ್ ಧರ್ಮ, ಕ್ರಿಶ್ಚಿಯನ್ ಧರ್ಮ, ಜೈನ ಧರ್ಮ ಮತ್ತು ಬೌದ್ಧಧರ್ಮದಂತಹ ಅನೇಕ ಧರ್ಮಗಳ ಹಬ್ಬಗಳು ರಾಷ್ಟ್ರೀಯ ಅಥವಾ ಸ್ಥಳೀಯ ರಜಾದಿನಗಳಿಗೆ ಕಾರಣವಾಗಿದೆ.
ಪ್ರತಿ ತಿಂಗಳೂ ಹಬ್ಬವೇ
ಭಾರತದಲ್ಲಿ ತಿಂಗಳಿಗೊಂದು ಹಬ್ಬ ಇದ್ದೇ ಇರುತ್ತೆ. ಈ ಹಬ್ಬಗಳು ಕುಟುಂಬದ ಜೊತೆ ಸಮಯ ಕಳೆಯಲು, ಖುಷಿ ಹಂಚಲು, ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಭಾರತದಲ್ಲಿ ರಾಷ್ಟ್ರೀಯ ರಜಾದಿನಗಳ ಸಂಖ್ಯೆ ಸುಮಾರು 12 ರಿಂದ 21ರವರೆಗಿದೆ. ಆದ್ರೆ ಎಲ್ಲ ರಾಜ್ಯಗಳ ರಜೆ ಸೇರಿ ಈ ಸಂಖ್ಯೆ 42 ತಲುಪುತ್ತದೆ.
ಎರಡನೇ ಸ್ಥಾನದಲ್ಲಿ ಯಾವ ದೇಶ ?
ಭಾರತದ ನಂತ್ರ ಅತಿ ಹೆಚ್ಚು ರಜೆ ನೀಡುವ ದೇಶ ಅಂದ್ರೆ ನೇಪಾಳ. ಒಟ್ಟು 35 ರಜಾದಿನಗಳು ಇಲ್ಲಿವೆ. ನೇಪಾಳ ಹಿಂದೂ-ಬೌದ್ಧ ಸಂಪ್ರದಾಯಗಳಿಂದ ಪ್ರಭಾವಿತವಾಗಿದೆ. ದಸರಾ, ತೀಜ್ ಮತ್ತು ಲೋಸರ್ನಂತಹ ಹಬ್ಬಗಳನ್ನು ಇಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನೇಪಾಳದ ರಜಾದಿನಗಳು ಭಾರತದಲ್ಲಿರುವಂತೆಯೇ ಇದ್ರೂ ಸಂಖ್ಯೆ ಸ್ವಲ್ಪ ಕಡಿಮೆ ಇದೆ.
ಮೂರನೇ ಸ್ಥಾನದಲ್ಲಿ ಮ್ಯಾನ್ಮಾರ್
30 ಸಾರ್ವಜನಿಕ ರಜಾದಿನಗಳೊಂದಿಗೆ ಮ್ಯಾನ್ಮಾರ್ (ಬರ್ಮಾ) ಮೂರನೇ ಸ್ಥಾನದಲ್ಲಿದೆ. ಥಿಂಗ್ಯಾನ್ ಮತ್ತು ಬೌದ್ಧ ಹಬ್ಬಗಳನ್ನು ಇಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತದೆ. ರಜೆ ವಿಷ್ಯದಲ್ಲಿ ಏಷ್ಯಾ ದೇಶಗಳೇ ಮುಂದಿವೆ. ಇಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿದ್ಯತೆ ಹೆಚ್ಚು ರಜಾದಿನಗಳನ್ನು ಹೊಂದಲು ಕಾರಣವಾಗಿದೆ.
ರಜಾ ದಿನಗಳಿಂದ ಉತ್ಪಾದನೆ ಕಡಿಮೆ
ಭಾರತದಲ್ಲಿ ಸಿಗುವ ಅತಿ ಹೆಚ್ಚು ರಜೆಗಳು ಉತ್ಪಾದಕತೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ವಾದ ಇದೆ. ಆದ್ರೆ ಈ ರಜೆಗಳು ಕೆಲಸ ಮಾಡಲು ಉತ್ಸಾಹ ನೀಡುತ್ತದೆ. ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರುತ್ತದೆ. ಪ್ರವಾಸ, ಶಾಪಿಂಗ್ ಗೆ ಇದ್ರಿಂದ ಬೂಸ್ಟ್ ಸಿಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

