ರೈತರಿಗೆ ಯಾವೆಲ್ಲಾ ವಸ್ತುಗಳ ಮೇಲೆ ಸಬ್ಸಿಡಿ ಸಿಗುತ್ತೆ? ಹೊಸ ವರ್ಷಕ್ಕೆ ಭಾರತ ಸರ್ಕಾರದಿಂದ ಸಿಕ್ಕಿದೆ ಸ್ಪೆಷಲ್ ಗಿಫ್ಟ್
ಹೊಸ ವರ್ಷದಲ್ಲಿ ರೈತರಿಗೆ ಸರ್ಕಾರದಿಂದ ಹೊಸ ಕೊಡುಗೆಗಳು ಮತ್ತು ಸಬ್ಸಿಡಿ ಹೆಚ್ಚಳದ ಘೋಷಣೆಯಾಗಿದೆ. ರಸಗೊಬ್ಬರ, ಬೀಜಗಳು, ನೀರಾವರಿ, ಉಪಕರಣಗಳು, ಬೆಳೆ ವಿಮೆ ಸೇರಿದಂತೆ ಹಲವು ಯೋಜನೆಗಳ ಮೂಲಕ ರೈತರಿಗೆ ಆರ್ಥಿಕ ನೆರವು ಒದಗಿಸಲಾಗುತ್ತಿದೆ.
ಹೊಸ ವರ್ಷದಲ್ಲಿ ರೈತರಿಗೆ ಸರ್ಕಾರದಿಂದ ಹೊಸ ಕೊಡುಗೆಗಳು ಸಿಗುತ್ತಿವೆ. ಸರ್ಕಾರವು ಸಹ ನೀಡುತ್ತಿರುವ ಸಬ್ಸಿಡಿಯನ್ನು ಹೆಚ್ಚಳ ಮಾಡಿವೆ. ರೈತರಿಗೆ ಯಾವೆಲ್ಲಾ ವಸ್ತುಗಳ ಮೇಲೆ ಸಬ್ಸಿಡಿ ಸಿಗುತ್ತೆ ಎಂಬುದರ ಮಾಹಿತಿ ಇಲ್ಲಿದೆ.
ದೇಶದ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕೋವಿಡ್-19 ಕಾಲಘಟ್ಟದ ಬಳಿಕ ಯುವ ಸಮುದಾಯವೂ ಕೃಷಿಯತ್ತ ಆಕರ್ಷಿತವಾಗುತ್ತಿದೆ. ಹಾಗಾಗಿ ಸರ್ಕಾರಗಳು ಸಹ ಕೃಷಿ ವಲಯಕ್ಕೆ ಪ್ರಮುಖ ಆದ್ಯತೆಯನ್ನು ನೀಡುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ರೈತರಿಗೆ ಹಲವು ಯೋಜನೆಗಳನ್ನು ನೀಡುತ್ತಿವೆ. ಸರ್ಕಾರ ಹಲವು ವಸ್ತುಗಳ ಮೇಲೆ ಸಬ್ಸಿಡಿ ನೀಡುವ ಮೂಲಕ ರೈತರನ್ನು ಪ್ರೋತ್ಸಾಹಿಸುತ್ತದೆ. ರೈತರಿಗೆ ಯಾವೆಲ್ಲಾ ವಸ್ತುಗಳ ಮೇಲೆ ಸಬ್ಸಿಡಿ ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಹೊಸ ವರ್ಷದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಡಿಎಪಿ ರಸಗೊಬ್ಬರ ಮೇಲಿನ ಸಬ್ಸಿಡಿ ಮುಂದುವರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 3850 ಕೋಟಿ ರೂ.ಗಳ ಪ್ರತ್ಯೇಕ ಹೆಚ್ಚುವರಿ ಸಬ್ಸಿಡಿ ನೀಡಲು ನಿರ್ಧರಿಸಲಾಗಿದೆ.
ಭಾರತ ಸರ್ಕಾರ ಬೀಜಗಳು ಮತ್ತು ರಸಗೊಬ್ಬರಗಳ ಖರೀದಿಯಲ್ಲಿ ಸಬ್ಸಿಡಿ ನೀಡುತ್ತದೆ. ನೀರಾವರಿ ಮತ್ತು ನೀರು ನಿರ್ವಹಣೆಗೂ, ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಖರೀದಿಗೆ ಭಾರತ ಸರ್ಕಾರದಿಂದ ಹಣಕಾಸಿನ ನೆರವು ರೈತರಿಗೆ ಸಿಗುತ್ತದೆ. ಇದೆಲ್ಲದರ ಜೊತೆಯಲ್ಲಿ ಟ್ರ್ಯಾಕ್ಟರ್, ಥ್ರೆಶರ್, ಪವರ್ ಟಿಲ್ಲರ್ ಮತ್ತು ವಿವಿಧ ರೀತಿಯ ಕೃಷಿ ಉಪಕರಣಗಳ ಮೇಲೆ ಸಬ್ಸಿಡಿ/ಆರ್ಥಿಕ ನೆರವು ರೈತರಿಗೆ ಸರ್ಕಾರದಿಂದ ಸಿಗುತ್ತದೆ.
ಪ್ರಸ್ತುತ ರೈತರು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ಸಬ್ಸಿಡಿ ಪಡೆಯುತ್ತಿದ್ದಾರೆ. 2025ರ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಬಜೆಟ್ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಇದೆಲ್ಲದರೊಂದಿಗೆ ಭಾರತ ಸರ್ಕಾರದಿಂದ ರೈತರಿಗೆ ಹಲವು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ತಂದಿವೆ. ದೇಶದ ಕೋಟಿಗಟ್ಟಲೆ ರೈತರು ಸರ್ಕಾರದ ಸಬ್ಸಿಡಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ.