21 ನೇ ವಯಸ್ಸಿನಲ್ಲಿ ಹ್ಯೂಮನ್ಸ್ ಆಫ್ ಬಾಂಬೆ ಸ್ಥಾಪಿಸಿ ಉದ್ಯಮಿಯಾದ ಕರಿಷ್ಮಾ ಮೆಹ್ತಾ, ಈಗ ವಿವಾದದಲ್ಲಿ!
ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಸಾಮಾಜಿಕ ಜಾಲತಾಣದ ಪೇಜ್‌ನಲ್ಲಿ 'ಹ್ಯೂಮನ್ಸ್ ಆಫ್ ಬಾಂಬೆ' ಕೂಡ ಇಂದು ಜನಪ್ರಿಯ ಪುಟಗಳಲ್ಲಿ ಒಂದಾಗಿದೆ. ಈ ಪೇಜ್ ಮುಂಬೈನಲ್ಲಿರುವವರ ಜೀವನದ ಬಗೆಗಿನ ಕಥೆಗಳನ್ನು ಒಳಗೊಂಡಿದೆ. ವೆಬ್‌ಸೈಟ್ ಅನ್ನು ಕರಿಷ್ಮಾ ಮೆಹ್ತಾ ಎಂಬುವವರು ಸ್ಥಾಪಿಸಿದ್ದಾರೆ. ಈಕೆ ಬರಹಗಾರ್ತಿ, ಅತ್ಯುತ್ತಮ ಛಾಯಾಗ್ರಾಹಕಿ ಮತ್ತು TEDx ನಿರೂಪಕಿಯಾಗಿದ್ದಾರೆ. ಆದರೆ ಈಗ ವಿವಾದದಲ್ಲಿದ್ದಾರೆ.
ಹ್ಯೂಮನ್ಸ್ ಆಫ್ ಬಾಂಬೆಯು ಹ್ಯೂಮನ್ಸ್ ಆಫ್ ನ್ಯೂಯಾರ್ಕ್‌ನ ಅದೇ ಪರಿಕಲ್ಪನೆಯನ್ನು ಆಧರಿಸಿದ ಭಾರತೀಯ ಕಥೆ ಹೇಳುವ ವೆಬ್‌ಸೈಟ್ ಆಗಿದೆ. 2014 ರಲ್ಲಿ ವೆಬ್‌ಸೈಟ್ ಮೊದಲು ಫೇಸ್‌ಬುಕ್ ಪುಟವಾಗಿ ಕಾಣಿಸಿಕೊಂಡಿತು.
ಹ್ಯೂಮನ್ಸ್ ಆಫ್ ನ್ಯೂಯಾರ್ಕ್‌ನ ಸಂಸ್ಥಾಪಕ ಬ್ರ್ಯಾಂಡನ್ ಸ್ಟಾಂಟನ್ ಅವರು ಇತ್ತೀಚೆಗೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಭಾರತೀಯ ಕಥೆ ಹೇಳುವ ಉದ್ಯಮ ಹ್ಯೂಮನ್ಸ್ ಆಫ್ ಬಾಂಬೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪೀಪಲ್ಸ್ ಆಪ್ ಇಂಡಿಯಾ ವಿರುದ್ಧ ಕೇಸ್ ಹಾಕಿರುವುದು ಸರಿಯಲ್ಲ ಎಂದಿದ್ದಾರೆ.
ಭಾರತೀಯ ಮೂಲದ ಕಥೆ ಹೇಳುವ ಹ್ಯೂಮನ್ಸ್ ಆಫ್ ಬಾಂಬೆ (HoB) ಅದೇ ರೀತಿಯ ಇನ್ನೊಂದು ಮಾಧ್ಯಮ ಪೀಪಲ್ ಆಫ್ ಇಂಡಿಯಾ (POI) ವಿರುದ್ಧ ಕೇಸ್ ಹಾಕಿದ್ದಾರೆ. ತಮ್ಮ ಹಕ್ಕುಸ್ವಾಮ್ಯ ಮೊಕದ್ದಮೆಯನ್ನು ಹಾಕಿದ್ದು, ಹ್ಯೂಮನ್ಸ್ ಆಫ್ ನ್ಯೂಯಾರ್ಕ್ (HoNY) ಸಂಸ್ಥಾಪಕ ಬ್ರ್ಯಾಂಡನ್ ಸ್ಟಾಂಟನ್ ಅವರು ಇದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಹ್ಯೂಮನ್ಸ್ ಆಫ್ ನ್ಯೂಯಾರ್ಕ್ ಸಂಸ್ಥಾಪಕ ಬ್ರ್ಯಾಂಡನ್ ನನ್ನ ಕೆಲಸದ ವಿನಿಯೋಗದ ಬಗ್ಗೆ ನಾನು ಮೌನವಾಗಿರುತ್ತೇನೆ. ಏಕೆಂದರೆ ಹ್ಯೂಮನ್ಸ್ ಆಫ್ ಬಾಂಬೆ ಅವರು ಕೂಡ ಪ್ರಮುಖ ಕಥೆಗಳನ್ನು ಕದ್ದು ಮಾಡುತ್ತಾರೆ. ಪೀಪಲ್ ಆಫ್ ಇಂಡಿಯಾದ ಸುದ್ದಿಗಳನ್ನು ಕೂಡ ತೆಗೆದುಕೊಂಡಿರುತ್ತಾರೆ. ಆದರೆ ಇದಕ್ಕೆ ಮೊಕದ್ದಮೆ ಹಾಕಿ ಸಾಧಿಸುವುದು ಏನೂ ಇಲ್ಲ. ಈ ವಿಚಾರದಲ್ಲಿ ನಾನು ನಿನ್ನನ್ನು ಕ್ಷಮಿಸಿದ್ದೇನೆ ಎಂದು 39 ವರ್ಷದ ಸ್ಟಾಂಟನ್ ಶನಿವಾರ X ನಲ್ಲಿ ಬರೆದಿದ್ದಾರೆ.
ಕರಿಷ್ಮಾ ಮೆಹ್ತಾ ತನ್ನ ಮೊದಲ ಸಂದರ್ಶನ ಮಾಡಿದ ನಂತರ, "ಹ್ಯೂಮನ್ಸ್ ಆಫ್ ಬಾಂಬೆ" ಮಹತ್ತರವಾಗಿ ವಿಸ್ತರಿಸಿದೆ, ನಗರದ ನಾಗರಿಕರ ಕಥೆಗಳನ್ನು ಮತ್ತು ಅವರ ಸವಾಲುಗಳನ್ನು ವಿವರಿಸುತ್ತದೆ, ಹಂತಹಂತವಾಗಿ ವ್ಯಾಪಾರಿಗಳು, ಪ್ರಸಿದ್ಧ ವ್ಯಕ್ತಿಗಳು ಮತ್ತು ಇತರರ ಕಥೆಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
ಬಳಿಕ 2022 ರಲ್ಲಿ, ಕರಿಷ್ಮಾ ಮೆಹ್ತಾ "ಹೌ ದಿ ಹೆಲ್ ಡಿಡ್ ಐ ಡು ಇಟ್?" ಎಂಬ YouTube ವೀಡಿಯೊ ಸರಣಿಯನ್ನು ಪ್ರಾರಂಭಿಸಿದಳು. ಇದು ಸಂದರ್ಶನಗಳನ್ನು ಆಧರಿಸಿದೆ ಮತ್ತು ಯಶಸ್ವಿ ಉದ್ಯಮಿಗಳು, ಪ್ರಸಿದ್ಧ ವ್ಯಕ್ತಿಗಳು ಮತ್ತು ಯಶಸ್ಸನ್ನು ಸಾಧಿಸಿದ ಇತರ ಜನರನ್ನು ಇಲ್ಲಿ ಸಂದರ್ಶನ ಮಾಡಲಾಗುತ್ತದೆ.
ಹ್ಯೂಮನ್ಸ್ ಆಫ್ ಬಾಂಬೆಯಲ್ಲಿ ಪ್ರಕಟವಾಗದ ಕೆಲವು ಪೋಸ್ಟ್‌ಗಳನ್ನು ಒಳಗೊಂಡಂತೆ ಸ್ವಯಂ-ಪ್ರಕಟಿಸಿದ ಲೇಖನಗಳನ್ನೊಳಗೊಂಡ ಪುಸ್ತಕ ಇದು 2016 ರಲ್ಲಿ ಬಿಡುಗಡೆಯಾಯಿತು.
ಕರಿಷ್ಮಾ ಅವರು ಕೇವಲ 21 ವರ್ಷದವರಾಗಿದ್ದಾಗ ಹ್ಯೂಮನ್ಸ್ ಆಫ್ ಬಾಂಬೆ ಪುಟವನ್ನು ಪ್ರಾರಂಭಿಸಿದರು. ಆಕೆ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಅವರು ಬಾಂಬೆ ಸ್ಕಾಟಿಷ್ ಸ್ಕೂಲ್, ಮಾಹಿಮ್‌ಗೆ ಸೇರಿದರು. ಅವರು 2 ವರ್ಷಗಳ ಕಾಲ ಬೆಂಗಳೂರಿನ ಬೋರ್ಡಿಂಗ್ ಶಾಲೆಯಲ್ಲಿ ಓದಿದರು ಮತ್ತು ಮೂರು ವರ್ಷಗಳ ಕಾಲ UK ಯಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.
ಮೆಹ್ತಾ ಯುಕೆಯಲ್ಲಿ ಅರ್ಥಶಾಸ್ತ್ರ ಮತ್ತು ವ್ಯವಹಾರ ವಿದ್ಯಾರ್ಥಿಯಾಗಿದ್ದರು. ಅವರು ನ್ಯಾಷನಲ್ ಜಿಯಾಗ್ರಫಿಕ್ ಸೇರಿದಂತೆ ವಿವಿಧ ಪ್ರಕಟಣೆಗಳಿಗೆ ಸ್ವತಂತ್ರ ಬರಹಗಾರರಾಗಿದ್ದಾರೆ. ಅವರು ಸಾಮಾನ್ಯ TEDx ನಿರೂಪಕಿಯಾಗಿದ್ದಾರೆ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್‌ನಲ್ಲಿ ಹಲವಾರು ಬಾರಿ ಮಾತನಾಡಿದ್ದಾರೆ.