MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • ಇರಾನ್-ಇಸ್ರೇಲ್ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ, ಭಾರತಕ್ಕೆ ಹಣದುಬ್ಬರದ ಭೀತಿ!

ಇರಾನ್-ಇಸ್ರೇಲ್ ಸಂಘರ್ಷ, ಕಚ್ಚಾ ತೈಲ ಬೆಲೆ ಏರಿಕೆ, ಭಾರತಕ್ಕೆ ಹಣದುಬ್ಬರದ ಭೀತಿ!

ಇರಾನ್-ಇಸ್ರೇಲ್ ಸಂಘರ್ಷವು ತೈಲ ಬೆಲೆ ಏರಿಕೆ ಮತ್ತು ವ್ಯಾಪಾರ ಅಡಚಣೆಗಳ ಭೀತಿ ಹುಟ್ಟಿಸಿದೆ. ಹಾರ್ಮುಜ್ ಜಲಸಂಧಿ ಮುಚ್ಚುವ ಆತಂಕದಿಂದ ಭಾರತದ ಮೇಲೆ ಹಣದುಬ್ಬರದ ಒತ್ತಡ ಹೆಚ್ಚಾಗಬಹುದು. ಶನಿವಾರ  ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 6 ಡಾಲರ್‌ಗಿಂತಲೂ ಹೆಚ್ಚಾಗಿದೆ.

2 Min read
Gowthami K
Published : Jun 15 2025, 06:30 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Gemini

ಜಾಗತಿಕ ಹಡಗು ಮಾರ್ಗಗಳು ಸರಕು ಸಾಗಣೆ ದರಗಳಿಂದ ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದಂತೆಯೇ, ಕೇಪ್ ಆಫ್ ಗುಡ್ ಹೋಪ್‌ನ ಉದ್ದವಾದ ಮಾರ್ಗದಿಂದ ಹಡಗುಗಳು ಮರಳಿ ಮತ್ತೆ ಕೆಂಪು ಸಮುದ್ರ ಮಾರ್ಗಕ್ಕೆ ವಾಪಸ್ಸಾಗುತ್ತಿದ್ದಂತೆಯೇ, ಇರಾನ್ ಮತ್ತು ಇಸ್ರೇಲ್ ನಡುವಿನ ನೇರ ಸಂಘರ್ಷ ತೈಲ ಬೆಲೆಗಳು ಹಾಗೂ ವ್ಯಾಪಾರದ ಅಡಚಣೆಗಳ ಭೀತಿಯನ್ನು ಮತ್ತೆ ಹುಟ್ಟುಹಾಕಿದೆ. ಇದು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಪ್ರಭಾವ ಬೀರಿದ್ದು, ಭಾರತೀಯ ಬಿಎಸ್‌ಇ ಸೆನ್ಸೆಕ್ಸ್ ಶುಕ್ರವಾರದ ವಹಿವಾಟಿನಲ್ಲಿ 573 ಅಂಕಗಳ ಕುಸಿತ ದಾಖಲಿಸಿತು.

27
Image Credit : X-@IDF

ಹಾರ್ಮುಜ್ ಜಲಸಂಧಿಯ ಭೀತಿ

ಜಾಗತಿಕ ತೈಲ ಸಾಗಣೆದಾರರಲ್ಲಿ ಶೇಕಡಾ 20-25 ರಷ್ಟು ಸಾಗಣೆ ಆಗುವ ಪ್ರಮುಖ ಕೊಂಡಿ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಬಹುದು ಎಂಬ ಆತಂಕ ತಜ್ಞರಲ್ಲಿ ಮೂಡಿದೆ. ಈ ಮಾರ್ಗವು ಕತಾರ್ ಮತ್ತು ಯುಎಇಗಳಿಂದ ನೈಸರ್ಗಿಕ ಕಚ್ಚಾ ತೈಲ (LNG) ಸಾಗಿಸಲು ಅತ್ಯಂತ ಪ್ರಮುಖ ಜಲಮಾರ್ಗವಾಗಿದೆ. ಭಾರತಕ್ಕೆ ಕಚ್ಚಾ ತೈಲ ಪೂರೈಕೆದಾರರಲ್ಲಿ ಕತಾರ್ ಪ್ರಮುಖ ಸ್ಥಾನದಲ್ಲಿದೆ. ಶನಿವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 6 ಡಾಲರ್‌ಗಿಂತಲೂ ಹೆಚ್ಚಾಗಿ ಐದು ತಿಂಗಳ ಗರಿಷ್ಠ ಮಟ್ಟವಾದ 78 ಡಾಲರ್‌ಗಳನ್ನು ದಾಟಿದೆ.

37
Image Credit : freepik

ಭಾರತದ ಮೇಲೆ ಹಣದುಬ್ಬರ ಭೀತಿ

ಮಧ್ಯಪ್ರಾಚ್ಯದ ಎರಡು ದೇಶಗಳಲ್ಲಿನ ಉದ್ವಿಗ್ನ ಪರಿಸ್ಥಿತಿಯ ಪರಿಣಾಮ ಭಾರತದಲ್ಲಿಯೂ ಕಾಣಬಹುದು, ವಿಶೇಷವಾಗಿ ತೈಲ ಆಮದಿಗೆ ಭಾರತ ಹೆಚ್ಚು ಅವಲಂಬಿತವಾಗಿರುವ ಹಿನ್ನೆಲೆಯಲ್ಲಿ ಸ್ಥೂಲ ಆರ್ಥಿಕ ಸವಾಲುಗಳು ತಲೆದೋರಬಹುದು. 2019ರಲ್ಲಿ ಅಮೆರಿಕ ಆಮಿಷ ಬಿದ್ದ ನಂತರ ಭಾರತ ಇರಾನ್‌ನಿಂದ ತೈಲ ಆಮದು ನಿಲ್ಲಿಸಿತ್ತು. ಆದರೆ, ಗೋಲ್ಡ್‌ಮನ್ ಸ್ಯಾಚ್ಸ್ ಅಂದಾಜು ಪ್ರಕಾರ, ಇರಾನ್ ತನ್ನ ತೈಲ ಪೂರೈಕೆಯನ್ನು ದಿನಕ್ಕೆ 1.75 ಮಿಲಿಯನ್ ಬ್ಯಾರೆಲ್‌ಗಳಷ್ಟು ಕಡಿಮೆ ಮಾಡಬಹುದು. ಬ್ರೆಂಟ್ ಕ್ರೂಡ್ ಬೆಲೆ 90 ಡಾಲರ್ ದಾಟಬಹುದು ಎಂಬ ಸಾಧ್ಯತೆ ಇದೆ ಮತ್ತು 2026ರ ಹೊತ್ತಿಗೆ 60 ಡಾಲರ್‌ಗೆ ಇಳಿಯಬಹುದು ಎಂದು ಹೂಡಿಕೆದಾರರು ಭರವಸೆ ಹೊಂದಿದ್ದಾರೆ.

47
Image Credit : google

ಆರ್ಥಿಕ ನೀತಿಯ ಮೇಲೆ ಬರುವ ಒತ್ತಡ

ಮೇ 2025 ರಲ್ಲಿ ಭಾರತದ ಪ್ರಮುಖ ಚಿಲ್ಲರೆ ಹಣದುಬ್ಬರವನ್ನು 75 ತಿಂಗಳ ಕನಿಷ್ಠ ಮಟ್ಟವಾದ 2.82 ಪ್ರತಿಶತಕ್ಕೆ ಇಳಿಸಲು ಪ್ರಮುಖ ಕಾರಣ ಹಣ್ಣುಗಳು, ಬೇಳೆಕಾಳುಗಳು ಮತ್ತು ಧಾನ್ಯಗಳ ಬೆಲೆಗಳಲ್ಲಿನ ಕುಸಿತ. ಇದು ಹಣದುಬ್ಬರ ಪ್ರವೃತ್ತಿಯು ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (MPC) ನೀತಿ ರೆಪೊ ದರವನ್ನು ನಿರೀಕ್ಷೆಗಿಂತ ಹೆಚ್ಚಿನ 50 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಲು ಪ್ರೇರಣೆಯಾಯ್ತು. ಆದರೆ ಹಣಕಾಸು ನೀತಿಯು ಬೆಳವಣಿಗೆಯನ್ನು ಬೆಂಬಲಿಸಲು ಬಹಳ ಸೀಮಿತ ಸ್ಥಳವನ್ನು ಹೊಂದಿದೆ ಎಂದು RBI ಎಚ್ಚರಿಸಿದೆ.

57
Image Credit : our own

ಇಂಧನ ಮೂಲಸೌಕರ್ಯ ಗುರಿಯಾಗದಿರುವುದು ತಾತ್ಕಾಲಿಕ ಶಾಂತಿ

ಇಸ್ರೇಲ್ ಮತ್ತು ಇರಾನ್ ಇಂಧನ ಮೂಲಸೌಕರ್ಯಗಳ ಮೇಲೆ ನೇರ ದಾಳಿಗೆ ಮುಂದಾಗಿಲ್ಲ ಎಂದು S&P Global ವರದಿ ಮಾಡಿದೆ. ಆದರೆ ಇಸ್ರೇಲ್ ಲೆವಿಯಾಥನ್ ಅನಿಲ ಕ್ಷೇತ್ರವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಇರಾನ್ ತನ್ನ ತೈಲ ಶುದ್ಧೀಕರಣ ಘಟಕ ಅಥವಾ ಡಿಪೋಗಳಿಗೆ ಹಾನಿಯಾಗಿಲ್ಲವೆಂದು ವರದಿ ಮಾಡಿದೆ. ಇರಾನ್‌ ದಿನಕ್ಕೆ 2.2 ಮಿಲಿಯನ್ ಬ್ಯಾರೆಲ್ ಶುದ್ಧೀಕರಣ ಸಾಮರ್ಥ್ಯ ಹೊಂದಿದ್ದು, ಹೆಚ್ಚುಮಟ್ಟದಲ್ಲಿ 4 ಮಿಲಿಯನ್ ಬ್ಯಾರೆಲ್ ಉತ್ಪಾದನೆ ಮಾಡುತ್ತಿದೆ. ಆದರೆ ಈ ತಿಂಗಳು ರಫ್ತು ದಿನಕ್ಕೆ 1.5 ಮಿಲಿಯನ್ ಬ್ಯಾರೆಲ್‌ಗಿಂತ ಕಡಿಮೆಯಾಗಬಹುದು.

67
Image Credit : Getty

ಸಾಗಣೆ ವೆಚ್ಚಗಳು ಮತ್ತೆ ಏರಿಕೆ

FIEO ಅಧ್ಯಕ್ಷ ಎಸ್.ಸಿ. ರಾಲ್ಹನ್ ಮೇ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಸಂಘರ್ಷ ವಿಸ್ತಾರಗೊಳ್ಳುವ ಭೀತಿಯಿಂದ, ಹಡಗುಗಳು ಕೇಪ್ ಆಫ್ ಗುಡ್ ಹೋಪ್ ಮಾರ್ಗವನ್ನು ಬಳಸಲು ಮುಂದಾಗಬಹುದು. ಈ ಪರ್ಯಾಯ ಮಾರ್ಗವು ಸಾಗಣೆ ಸಮಯವನ್ನು 10–14 ದಿನಗಳವರೆಗೆ ಹೆಚ್ಚಿಸುವುದರೊಂದಿಗೆ ದರಗಳ ಮೇಲೂ ಒತ್ತಡ ಬೀರುತ್ತಿದೆ.

77
Image Credit : Getty

ಕಚ್ಚಾ ಲೈಲ ಸಾಗಣೆ ದತ್ತಾಂಶದಲ್ಲಿ ಬದಲಾವಣೆ

ಸೂಯೆಜ್ ಕಾಲುವೆಯ ಮೂಲಕ LNG ಹರಿವು 2024 ರಲ್ಲಿ ಕೇವಲ 4.15 ಮಿಲಿಯನ್ ಟನ್‌ಗಳಿಗೆ ಇಳಿದಿದ್ದು, 2023 ರಲ್ಲಿ 32.36 ಮಿಲಿಯನ್ ಟನ್ ಮತ್ತು 2022 ರಲ್ಲಿ 34.94 ಮಿಲಿಯನ್ ಟನ್‌ಗಳಿಂದ ತೀವ್ರ ಕುಸಿತವಾಗಿದೆ. ಕೇಪ್ ಆಫ್ ಗುಡ್ ಹೋಪ್ ಮೂಲಕ ಸಾಗಣೆ ಮಾತ್ರ ಐದು ಪಟ್ಟು ಹೆಚ್ಚಾಗಿ 2022 ರ 11.76 ಮಿಲಿಯನ್ ಟನ್‌ನಿಂದ 2024 ರಲ್ಲಿ 59.37 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಇರಾನ್
ಇಸ್ರೇಲ್
ಭಾರತ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved