ಇಂದಿರಾ ಗಾಂಧಿಯವರ 36ನೇ ಪುಣ್ಯಸ್ಮರಣೆ: ಅಜ್ಜಿ ನೆನೆದು ರಾಹುಲ್ ಅಂತರಾಳದ ಮಾತು
ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರ 36ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಹಲವಾರು ಗಣ್ಯರು ನಮನ ಸಲ್ಲಿಸಿದ್ದಾರೆ. ಇನ್ನು ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಧಿ ವಾದ್ರಾ ಸೇರಿದಂತೆ ಹಲವರು ದೆಹಲಿಯ ಶಕ್ತಿ ಸ್ಥಳದಲ್ಲಿರುವ ಇಂದಿರಾ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದರು. ಇನ್ನು ರಾಹುಲ್ ಗಾಂಧಿ ಅಜ್ಜಿಯನ್ನು ನೆನೆದು ತಮ್ಮ ಅಂತರಾಳದ ಮಾತನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.
![article_image1](https://static-gi.asianetnews.com/images/01enycftanrhhaz5zjkw4wbea5/indira-gandhi-123-jpg_380x214xt.jpg)
ಇಂದು (ಶನಿವಾರ) ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರ 36ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಹಲವಾರು ಗಣ್ಯರು ನಮನ ಸಲ್ಲಿಸಿದರು,
![article_image2](https://static-gi.asianetnews.com/images/01enyxw3cvvfng3ywn4xrxehs3/9f9f33f9-1842-432a-a849-7a443a28ae2d-jpg_380x253xt.jpg)
ದೆಹಲಿಯ ಶಕ್ತಿ ಸ್ಥಳದಲ್ಲಿರುವ ಇಂದಿರಾ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದರು.
ಪ್ರಿಯಾಂಕ ಗಾಧಿ ವಾದ್ರಾ ಇಂದಿರಾ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದರು
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ನಮನ
ಇನ್ನು ರಾಹುಲ್ ಗಾಂಧಿ ಅವರು, ಸುಳ್ಳಿನಿಂದ ಸತ್ಯದೆಡೆಗೆ. ಕತ್ತಲೆಯಿಂದ ಬೆಳಕಿನೆಡೆಗೆ. ಸಾವಿನಿಂದ ಜೀವನದೆಡೆಗೆ. ಈ ಮಾತುಗಳ ಪ್ರಕಾರ ಬದುಕುವುದುರ ಅರ್ಥವೇನೆಂದು ನನಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು ದಾದಿ ಎಂದು ಟ್ವೀಟ್ ಮಾಡಿದ್ದಾರೆ.
ಕುಟುಂಬಸ್ಥರು ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ಗಣ್ಯರು ಇಂದಿರಾಗಾಂಧಿ ಅವರ ನೆನೆದು ಟ್ವೀಟ್ ಮಾಡಿದ್ದಾರೆ.