ಕೋವಿಡ್ ಸೆಂಟರ್‌ನಲ್ಲಿ ಬೆಂಕಿ, ಐವರು ಸಾವು: ಇಲ್ಲಿವೆ ಶಾಕಿಂಗ್ ಫೋಟೋಸ್
First Published Nov 27, 2020, 5:15 PM IST
ರಾಜ್‌ಕೋಟ್‌ನಲ್ಲಿ ಗುರುವಾರ ತಡೆರಾತ್ರಿ ಕೋವಿಡ್ ಕೇಂದ್ರವೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ನಡೆಯುತ್ತಿದ್ದ ವೇಳೆ ತೆಗೆದ ಫೋಟೋಗಳು ಸದ್ಯ ಲಭಿಸಿವೆ. ಆನಂದ್ ಬಂಗಲಾ ಚೌರಾಹಾದಲ್ಲಿರುವ ಶಿವಾನಂದ ಕೋವಿಡ್ ಸೆಂಟರ್‌ನಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿ 33 ಮಂದಿ ಚಿಕಿತ್ಸೆ ಪಡೆಯುತ್ತಿದ್ದರೆನ್ನಲಾಗಿದೆ. ಸಿಎಂ ವಿಜಯ್ ರೂಪಾನಿ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.

ಈ ಘಟನೆ ಆಸ್ಪತ್ರೆಯ ಎರಡನೇ ಅಂತಸ್ತಿನಲ್ಲಿರುವ ಐಸಿಯು ವಾರ್ಡ್‌ನಲ್ಲಿ ಸಂಭವಿಸಿದೆ. ಮಾಹಿತಿ ಲಭಿಸುತ್ತಿದ್ದಂತೆಯೇ ಅನೇಕ ಮಂದಿ ರಕ್ಷಣೆಗೆ ಧಾವಿಸಿದ್ದಾರೆ. ರೋಗಿಗಳನ್ನು ಕಿಟಕಿ ಗಾಜು ಒಡೆದು ಹೊರಗೊಯ್ದಿದ್ದಾರೆ. ಹೀಗಿದ್ದರೂ ಅನೇಕ ಮಂದಿಗೆ ಸುಟ್ಟ ಗಾಯಗಳಾಗಿವೆ.

ಅನೇಕ ರೋಗಿಗಳು ಹೊಗೆ ಹಾಗೂ ಆತಂಕದಿಂದ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಜನರು ಅವರನ್ನು ಹೆಗಲ ಮೇಲೆ ಹೊತ್ತುಕೊಂಡೇ ತೆರಳಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?