ತಾಯಿಯ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಖ್ಯಾತ ಟಿವಿ ನಿರೂಪಕಿ ಆತ್ಮಹತ್ಯೆ!
ಪ್ರಖ್ಯಾತ ಟಿವಿ ನಿರೂಪಕಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ಅವರು ತಾಯಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಾಯಿಯ ಜೊತೆ ನಗರದ ಪ್ರಮುಖ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಪ್ರಖ್ಯಾತ ಟಿವಿ ನಿರೂಪಕಿ (famous tv anchor) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದ ಚಕ್ಕಡಪಲ್ಲಿಯಲ್ಲಿ (chikkadpally) ಈ ಘಟನೆ ನಡೆದಿದೆ.
ತೆಲುಗು ಸುದ್ದಿವಾಹಿನಿಯೊಂದರ (Telugu News Anchor) ನ್ಯೂಸ್ ನಿರೂಪಕಿ 35 ವರ್ಷದ ಸ್ವೇಚ್ಛಾ ವೋಟರ್ಕರ್ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಅನುಸಾರ ಇದು ಆತ್ಮಹತ್ಯೆ ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಶುಕ್ರವಾರ ರಾತ್ರಿ 9.20ರ ವೇಳೆಗೆ ತಮಗೆ ಈ ಮಾಹಿತಿ ಸಿಕ್ಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಜವಾಹರ್‌ನಗರದಲ್ಲಿನ ಆರ್‌ಟಿಸಿ ಗ್ರಾಸ್ ರೋಡ್ ಶಾಲಂ ಲತಾ ನಿಲಯಂನ ಪೆಂಟ್‌ಹೌಸ್‌ನಲ್ಲಿ ಸ್ವೇಚ್ಛಾ ತನ್ನ ತಾಯಿ ಹಾಗೂ ಶಾಲೆಗೆ ಹೋಗುವ ಹೆಣ್ಣು ಮಗುವಿನ ಜೊತೆ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್‌ನ ಬಾಗಿಲು ಒಡೆದು ಒಳಹೊಕ್ಕು ನೋಡಿದಾಗ ಸ್ವೇಚ್ಛಾ ವೋಟರ್ಕರ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಂದಾಜು ರಾತ್ರಿ 8.30ರ ವೇಳೆಗೆ ಈ ಕೃತ್ಯ ಮಾಡಿಕೊಂಡಿರಬಹುದು ಎಂದು ಅಂದಾಜಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ವೇಚ್ಛಾ ಮಗಳು ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗಿದ ನಂತರ, ಬೆಡ್‌ರೂಮ್ ಬಾಗಿಲನ್ನು ಪದೇ ಪದೇ ತಟ್ಟಿದಾಗ ಒಳಗಿನಿಂದ ಯಾವುದೇ ಉತ್ತರ ಬಂದಿರಲಿಲ್ಲ. ಗಾಬರಿಗೊಂಡ ಮಗು ನೆರೆಹೊರೆಯವರಿಗೆ ಮಾಹಿತಿ ನೀಡಿತು, ನಂತರ ಅವರು ಬಾಗಿಲನ್ನು ಬಲವಂತವಾಗಿ ತೆರೆದಾಗ ಶ್ವೇತಾಳ ಒಳಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಘಟನಾ ಸ್ಥಳಕ್ಕೆ ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಯಿತು, ಆದರೆ ವೈದ್ಯರು ಸ್ವೇಚ್ಛಾಅದಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ವಿಷಯ ತಿಳಿದ ಸ್ವಲ್ಪ ಹೊತ್ತಿನಲ್ಲೇ ಚಿಕ್ಕಡಪಲ್ಲಿ ಪೊಲೀಸರು ಆಗಮಿಸಿ ಆಕೆಯ ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ತನಿಖೆ ಆರಂಭಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.
ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಐದು ವರ್ಷದ ಹಿಂದೆ ತನ್ನ ಪತಿಗೆ ಈಕೆ ವಿಚ್ಛೇದನ ನೀಡಿದ್ದಳು. ಆ ಬಳಿಕ ತನ್ನ 14 ವರ್ಷದ ಮಗಳೊಂದಿಗೆ ಪ್ರತ್ಯೇಕವಾಗಿ ವಾಸವಿದ್ದಳು ಎನ್ನಲಾಗಿದೆ.
ಪತ್ರಕರ್ತ ವಸತಿ ಸಮಾಜದ ಚುನಾವಣೆಯಲ್ಲಿ ಅವರು ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಸ್ವೇಚ್ಛಾ ಸಾವಿನ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಚಿಕ್ಕಡಪಲ್ಲಿ ಇನ್ಸ್‌ಪೆಕ್ಟರ್ ರಾಜುನಾಯಕ್ ತಿಳಿಸಿದ್ದಾರೆ.
ಸ್ವೇಚ್ಛಾ ಅವರ ತಾಯಿ ರಾಮನಗರದಲ್ಲಿ ವಾಸವಿದ್ದರು. ಆಕೆಯ ತಂದೆ ಶಂಕರ್ ಪಿಡಿಎಸ್‌ಯು ರಾಜ್ಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆಕೆಯ ತಾಯಿ ಶ್ರೀದೇವಿ, ಚೈತನ್ಯ ಮಹಿಳಾ ಸಂಘದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸ್ವೇಚ್ಛಾ ನ್ಯೂಸ್ ರೀಡರ್, ಪ್ರೆಸೆಂಟರ್ ಹಾಗೂ ಸಾಕಷ್ಟು ನ್ಯೂಸ್ ಚಾನೆಲ್‌ಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದರು. ಅದಲ್ಲದೆ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿಯೂ ಹೆಸರು ವಾಸಿಯಾಗಿದ್ದರು.