ಮಮತಾ ಬ್ಯಾನರ್ಜಿಗೆ ಮತ್ತೆ ಮುಖಭಂಗ; ಸುಳ್ಳು ಆರೋಪಕ್ಕೆ ಎಚ್ಚರಿಕೆ ಕೊಟ್ಟ ಆಯೋಗ!
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಹೈಡ್ರಾಮಗಳೇ ನಡೆಯುತ್ತಿದೆ. ಮತದಾನ ಆರಂಭಕ್ಕೂ ಮುನ್ನ ಬಿಜೆಪಿ ದಾಳಿಯಿಂದ ಆಸ್ಪತ್ರೆ ಸೇರಿದ್ದೇನೆ ಎಂದಿದ್ದ ಮಮತಾಗೆ, ರಾಜ್ಯ ಪೊಲೀಸರು ಶಾಕ್ ನೀಡಿತ್ತು. ಇದೀಗ ನಂದಿಗ್ರಾಮ ಗಲಭೆ, ಬಿಜೆಪಿಯಿಂದ ಬೂತ್ ವಶಕ್ಕೆ ಪಡೆದ ಆರೋಪ ಮಾಡಿದ್ದ ಮಮತಾಗೆ ಚುನಾವಣಾ ಆಯೋಗ ಶಿಕ್ಷೆ ನೀಡುವುದಾಗಿ ಎಚ್ಚರಿಸಿದೆ.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಆರೋಪ-ಪ್ರತ್ಯಾರೋಪ, ಗಲಭೆ-ಹಿಂಸಾಚಾರದಿಂದ ಇಡೀ ದೇಶದ ಗಮನಸೆಳೆದಿದೆ. ಇದರ ನಡುವೆ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿ ಮೇಲೆ ಒಂದರ ಮೇಲೊಂದರಂತೆ ಆರೋಪ ಮಾಡುತ್ತಿದ್ದಾರೆ. ಆದರೆ ಅಷ್ಟೇ ಮುಖಭಂಗಕ್ಕೂ ಒಳಗಾಗುತ್ತಿದ್ದಾರೆ.

ನಂದಿಗ್ರಾಮದಲ್ಲಿನ ಮತದಾನದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ಗಲಭೆಗೆ ಬಿಜೆಪಿ ಕಾರಣ ಎಂದು ಆರೋಪಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಮಮತಾ ಬ್ಯಾನರ್ಜಿ ಬೋಯಲ್ ಮತಗಟ್ಟೆಯಲ್ಲಿ ತಮ್ಮ ಎಜೆಂಟರನ್ನು ಮತಗಟ್ಟೆ ಕೇಂದ್ರದೊಳಕ್ಕೆ ಬಿಡುತ್ತಿಲ್ಲ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆದರೆ ಇದೀಗ ಆಯೋಗ ಮಮತಾಗೆ ಚಾಟಿ ಬೀಸಿದೆ.

ಮಮತಾ ದೂರಿನಲ್ಲಿ ಆರೋಪಿಸಿದ ಯಾವುದೇ ಘಟನೆಗಳು ನಡೆದಿರುವ ಸಾಕ್ಷ್ಯಗಳಿಲ್ಲ. ಮತಗಟ್ಟೆಗಳಲ್ಲಿ ಭದ್ರತಾ ಪಡೆಗಳು ನಿಯಮ ಉಲ್ಲಂಘಿಸಿಲಲ್ಲ. ಮಮತಾ ನೀಡಿದ ದೂರಿನಲ್ಲೇ ಹಲವು ತಪ್ಪುಗಳು ಎದ್ದುಕಾಣುತ್ತಿದೆ. ಸುಖಾಸುಮ್ಮನೆ ಆರೋಪ ಮಾಡುತ್ತಿರುವ ಮಮತಾಗೆ ಶಿಕ್ಷೆ ನೀಡುವುದಾಗಿ ಚುನಾವಣಾ ಆಯೋಗ ಎಚ್ಚರಿಸಿದೆ.

ಮತದಾನದಂದು ಬೋಯಲ್ ಮತಗಟ್ಟೆಗೆ ಆಗಮಿಸಿದ ಮಮತಾಗೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಇದರಿಂದ ತೀವ್ರ ಕೆರಳಿದ ಮಮತಾ ಬ್ಯಾನರ್ಜಿ, ಬಿಹಾರ ಹಾಗೂ ಉತ್ತರ ಪ್ರದೇಶದಿಂದ ಜನರನ್ನು ಕರೆಸಿ ಹಿಂಸೆಗೆ ಕುಮ್ಮಕ್ಕು ನೀಡಲಾಗುತ್ತಿದೆ. ಬಿಜೆಪಿ ಗೂಂಡಾಗಳು ಹಲವು ಮತಗಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು

ಕೈಬರಹದಲ್ಲಿ ನೀಡಿದ ದೂರಿನಲ್ಲಿ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಮತದಾನಕ್ಕೆ ಅಡ್ಡಿಯಾಗಿಲ್ಲ. ಎಲ್ಲಾ ಭದ್ರತಾ ಪಡೆಗಳು ಸೂಸೂತ್ರವಾಗಿ ಮತದಾನಕ್ಕೆ ಸಹಕರಿಸಿದ್ದಾರೆ. ಹೀಗಾಗಿ ಮಮತಾ ಆರೋಪದಲ್ಲಿ ಹುರುಳಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಬಿಜೆಪಿ ದಾಳಿಯಿಂದ ಆಸ್ಪತ್ರೆ ಸೇರಿದ್ದೇನೆ ಎಂದಿದ್ದ ಮಮತಾಗೆ ಇದು ಆಕಸ್ಮಿಕ ಘಟನೆ ಎಂದು ತನಿಖೆ ಬಹಿಂಗ ಪಡಿಸಿತ್ತು. ಈ ಹಿನ್ನಡೆ ಬಳಿಕ ಇದೀಗ ಆಯೋಗ ಕೂಡ ಮಮತಾ ಸುಳ್ಳು ಆರೋಪಗಳನ್ನು ಖಂಡಿಸಿದೆ. ನೀತಿ ಸಂಹಿತೆ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಕ್ರಮ ಜರುಗಿಸುವ ಕುರಿತು ಚುನಾವಣಾ ಆಯೋಗ ಚಿಂತನೆ ನಡೆಸಿದೆ.

ಪಶ್ಚಿಮ ಬಂಗಾಳದಲ್ಲಿ 2 ಹಂತದ ಚುನಾವಣೆ ಮುಕ್ತಾಯಗೊಂಡಿದೆ. ಇನ್ನು 6 ಹಂತದ ಚುನಾವಣೆ ಬಾಕಿ ಇದೆ. ಜಿದ್ದಾಜಿದ್ದಿನ ಕಣವಾಗಿದ್ದ ನಂದಿಗ್ರಾಮಕ್ಕೆ 2ನೇ ಹಂತದಲ್ಲಿ ಮತದಾನ ಮಾಡಲಾಗಿದೆ. ಮಮತಾ ಬ್ಯಾನರ್ಜಿಗೆ ಸವಾಲೊಡ್ಡಿರುವ ಮಾಜಿ ಆಪ್ತ, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ