ಇ20 ಇಂಧನ ರಹಸ್ಯ: ನಿಮ್ಮ ವಾಹನಕ್ಕೆ ಕಾದಿದೆಯೇ ಅಪಾಯ? ರಾಹುಲ್ ಗಾಂಧಿ ಹೇಳಿದ್ದೇನು?
ರಾಹುಲ್ ಗಾಂಧಿ, ಇ20 (ಎಥನಾಲ್) ಇಂಧನ ಮಿಶ್ರಣ ನೀತಿಯು ಒಂದು ದೊಡ್ಡ ಹಗರಣವಾಗಿದ್ದು, ಜನರ ವಾಹನಗಳನ್ನು ಹಾಳುಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಭ್ರಷ್ಟಾಚಾರದಿಂದ ಸಾರ್ವಜನಿಕರಿಗೆ ನೇರ ನಷ್ಟವಾಗುತ್ತಿದೆ ಎಂದ ಅವರು, ತೈಲ ಕಂಪನಿಗಳು ಇಂಧನ ಮಾಲಿನ್ಯದ ವರದಿಗಳನ್ನು ತಳ್ಳಿಹಾಕಿವೆ.

ಇ20 (ಎಥನಾಲ್) ಇಂಧನ ಮಿಶ್ರಣ ನೀತಿ
‘ಇ20 (ಎಥನಾಲ್) ಇಂಧನ ಮಿಶ್ರಣ ನೀತಿಯು ಒಂದು ಬೃಹತ್ ಸಮಸ್ಯೆಯಾಗಿದ್ದು, ಇದು ಜನರನ್ನು ವಂಚಿಸುತ್ತಿದೆ ಮತ್ತು ಅವರ ವಾಹನಗಳನ್ನು ಹಾಳುಮಾಡುತ್ತಿದೆ’ ಎಂದು, ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.
ಬೇಳೆಯಲ್ಲಿ ಏನೋ ಕಪ್ಪು ಇದೆ
ಎಕ್ಸ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಮಾತನಾಡಿರುವ ಅವರು, ‘ದೇಶದಲ್ಲಿ ಎಲ್ಲೆಡೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಸಾಮಾನ್ಯವಾಗಿ ನಾವು ‘ಬೇಳೆಯಲ್ಲಿ ಏನೋ ಕಪ್ಪು ಇದೆ’ ಎನ್ನುತ್ತೇವೆ, ಆದರೆ ಇ20 ವಿಷಯದಲ್ಲಿ ಇಡೀ ಬೇಳೆಯೇ ಕಪ್ಪಾಗಿದೆ (ಸಂಪೂರ್ಣ ವ್ಯವಸ್ಥೆಯೇ ಭ್ರಷ್ಟವಾಗಿದೆ)’ ಎಂದು ಟೀಕಿಸಿದ್ದಾರೆ.
ಸಾರ್ವಜನಿಕರ ಜೇಬಿಗೆ ಮತ್ತು ಜೀವನಕ್ಕೆ ನೇರ ನಷ್ಟ
‘ನಮ್ಮ ಹೋರಾಟಗಳಲ್ಲಿ ವಿಷಯಗಳನ್ನು ಯಾವ ಕ್ರಮದಲ್ಲಿ ಕೈಗೆತ್ತಿಕೊಳ್ಳಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ. ಏಕೆಂದರೆ ಅಷ್ಟೊಂದು ಭ್ರಷ್ಟಾಚಾರದ ವಿಚಾರಗಳು ಸಾಲುಗಟ್ಟಿ ನಿಂತಿವೆ. ಈ ವಿಷಯವನ್ನು ಕಾಂಗ್ರೆಸ್ ಪಕ್ಷವು ಅತ್ಯಂತ ಪ್ರಮುಖವಾಗಿ ಕೈಗೆತ್ತಿಕೊಳ್ಳಲಿದೆ. ಇ20ಯಿಂದಾಗಿ ಜನರ ವಾಹನಗಳು ಬಹುಬೇಗ ಹಾಳಾಗುತ್ತಿದ್ದು, ಸಾರ್ವಜನಿಕರ ಜೇಬಿಗೆ ಮತ್ತು ಜೀವನಕ್ಕೆ ನೇರ ನಷ್ಟ ಉಂಟಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಲಿನ್ಯವಿಲ್ಲ- ತೈಲ ಕಂಪನಿಗಳು:
ಇ20 ಇಂಧನದಲ್ಲಿ ತೇವಾಂಶ ಮತ್ತು ಕ್ಲೋರೈಡ್ ಇದೆ. ಅದು ಮಾಲಿನ್ಯಕಾರಕ ಎಂಬ ಮಾಧ್ಯಮ ವರದಿಗಳನ್ನು ತೈಲ ಕಂಪನಿಗಳು ತಳ್ಳಿಹಾಕಿವೆ. ಇಂಧನವು ನಿಗದಿತ ಮಾನದಂಡಗಳ ಅನುಸಾರ ಇದೆ ಎಂದಿವೆ.
ಇದನ್ನೂ ಓದಿ: ಓದಿದ್ದಕ್ಕೂ ಬರೆದಿದ್ದಕ್ಕೂ ಸಂಬಂಧವೇ ಇಲ್ಲ; ರಾಹುಲ್ ಗಾಂಧಿಗೆ ಟಾಂಗ್ ಕೊಡಲು ಹೋಗಿ ಮುಖಭಂಗ! ವಿಡಿಯೋ ವೈರಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

