ಭಾರತದ ಈ ಹಳ್ಳಿಯಲ್ಲಿ ಸಿಕ್ತು ವಜ್ರದ ಖಜಾನೆ, ಗುಡ್ಡ ಕೊರೆದು ಲೂಟಿ ಹೊಡೆದ ಗ್ರಾಮಸ್ಥರು!
ವಜ್ರ ಎಂಬುವುದು ಭಾರೀ ಬೆಲೆಬಾಳುವ ಕಲ್ಲು. ಜ್ಯುವೆಲ್ಲರಿ ಶಾಪ್‌ನಿಂದ ಇದನ್ನು ಖರೀದಿಸುವುದಾದರೆ ಭಾರೀ ಮೊತ್ತ ನೀಡಬೇಕಾಗುತ್ತದೆ. ಹಾಗಾದ್ರೆ ಒಂದು ಕಡೆ ಅಗೆಯುವಾಗ ನಿಮಗೆ ವಜ್ರ ಸಿಕ್ಕರೆ? ಅಲ್ಲಿ ಮತ್ತಷ್ಟು ಕೊರೆದು ವಜ್ರಗಳನ್ನು ಪಡೆಯಲು ಯತ್ನಿಸುತ್ತಾರೆ ಎಂಂಬುವುದರಲ್ಲಿ ಅನುಮಾನವಿಲ್ಲ. ಇಂತಹುದೇ ಘಟನೆ ಸದ್ಯ ನಾಗಾಲ್ಯಾಂಡ್‌ನ ಮೋನಾ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ವಾಂಚಿಂಗ್ ಹೆಸರಿನ ಈ ಹಳ್ಳಿಯಲ್ಲಿ ವಾಸಿಸುವ ಜನರಿಗೆ ಅಲ್ಲಿನ ಗುಡ್ಡದಡಿ ವಜ್ರಗಳಿರಬಹುದೆಂಬ ಸುಳಿವು ಸಿಕ್ಕಿದೆ. ಇದನ್ನು ತಿಳಿದ ಮರುಕ್ಷಣವೇ ಗ್ರಾಮಸ್ಥರು ಗುದ್ದಲಿ, ಹಾರೆ ಹಿಡಿದು ಗುಡ್ಡದತ್ತ ಹೆಜ್ಜೆ ಹಾಕಿ, ಅಗೆಯಲಾರಂಭಿಸಿದ್ದಾರೆ. ಇನ್ನು ಅಲ್ಲಿ ಹಲವರಿಗೆ ಹೊಳೆಯುವ ಕಲ್ಲುಗಳು ಸಿಕ್ಕಿವೆ ಎನ್ನಲಾಗಿದೆ. ಆದರೆ ಇವು ವಜ್ರಗಳಾ ಎಂಬುವುದು ಮಾತ್ರ ಇನ್ನೂ ಖಚಿತವಾಗಿಲ್ಲ. ಇಲ್ಲಿದೆ ನೊಡಿ ವಜ್ರ ಲೂಟಿ ಹೊಡೆದ ಸುದ್ದಿಯ ವಿವರ.
ಈ ಘಟನೆ ಮಯನ್ಮಾರ್‌ನ ಗಡಿಯಲ್ಲಿರುವ ನಾಗಾಲ್ಯಾಂಡ್ ಹಳ್ಳಿಯದ್ದಾಗಿದೆ. ಇಲ್ಲಿನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದರಲ್ಲಿ ಗುಡ್ಡವೊಂದನ್ನು ಕೊರೆಯುವ ಮಂದಿ ಅಲ್ಲಿಂದ ಹೊಳೆಯುವ ಕಲ್ಲುಗಳನ್ನು ಕೊಂಡೊಯ್ಯುವ ದೃಶ್ಯವಿದೆ.
ಈ ಗುಡ್ಡ ಕೊರೆದಾಗ ಭಾರೀ ಮೌಲ್ಯದ ವಜ್ರಗಳು ಸಿಕ್ಕಿವೆ ಎನ್ನಲಾಗಿದೆ. ಇದಾಧ ಬಳಿಕ ಜನರ ಗಮನ ಈ ಹಳ್ಳಿಯತ್ತ ತಿರುಗಿದೆ. ಇನ್ನು ವರದಿಯನ್ವಯ ಅನೇಕ ಗ್ರಾಮಸ್ಥರು ಈಗಾಗಲೇ ಅಲ್ಲಿ ಅಗೆದು ವಜ್ರವನ್ನು ಲೂಟಿ ಹೊಡೆದಿದ್ದಾರೆನ್ನಲಾಗಿದೆ.
ಕೆಲ ದಿನಗಳ ಹಿಂದೆ ಈ ಗುಡ್ಡದಡಿ ವಜ್ರಗಳಿರಬಹುದೆಂಬ ವದಂತಿ ಹಬ್ಬಿತ್ತು. ಈ ವಿಚಾರ ಗ್ರಾಮಸ್ಥರ ಕಿವಿಗೂ ಬಿದ್ದಿದ್ದು, ಎಲ್ಲರೂ ಸೇರಿ ಇಲ್ಲಿ ಅಗೆಯಲಾರಂಭಿಸಿದ್ದಾರೆ.
ಸೋಮ್ ಹಳ್ಳಿಯಿಂದ ಲಭ್ಯವಾದ ಮಾಹಿತಿ ಅನ್ವಯ ಕರೆಲವರಿಗೆ ಇಲ್ಲಿ ಹೊಳೆಯುವ ಕಲ್ಲುಗಳೂ ಸಿಕ್ಕಿವೆ. ಅದರೆ ಇದು ವಜ್ರವೇ ಅಥವಾ ಬೇರಾವುದಾದರೂ ಕಲ್ಲುಗಳೋ ಎಂಬುವುದು ತಿಳಿದು ಬಂದಿಲ್ಲ. ವಜ್ರವಾದರೂ ಇವೆಷ್ಟು ಗುಣಮಟ್ಟ ಹೊಂದಿವೆ ಎಂದೂ ತಿಳಿದಿಲ್ಲ.
ಸೋಮ್‌ನ ಡೆಪ್ಯುಟಿ ಕಮಿಷನರ್ ಥವಸೆಲನ್ ಈ ಬಗ್ಗೆ ಮಾತನಾಡುತ್ತಾ ಈವರೆಗೂ ಕೆಲ ಕಲ್ಲುಗಳು ಸಿಕ್ಕಿವೆ. ಆದರೆ ಇವುಗಳನ್ನು ಪರಿಶೀಲಿಸಿಲ್ಲ. ಇಲ್ಲಿ ತಂಡ ತಲುಪುತ್ತಿದ್ದಂತೆಯೇ ಅವರು ಈ ಕಲ್ಲುಗಳನ್ನು ತಮ್ಮ ವಶಕ್ಕೆ ಪಡೆಯಲಿದ್ದಾರೆ. ಅಲ್ಲದೇ ತಾಔಉ ಇಲ್ಲಿಗೆ ತಲುಪುವ ಮೊದಲೇ ಗ್ರಾಮಸ್ಥರು ಲೂಟಿ ಹೊಡೆದಿದ್ದಾರೆ ಎಂದಿದ್ದಾರೆ.
ನಾಗಾಲ್ಯಾಂಡ್ ಭೂವಿಜ್ಞಾನ ಹಾಗೂ ಗಣಿಗಾರಿಕೆ ಇಲಾಖೆ ಅಧಿಕಾರಿಗಳು ತಲುಪಲಿದ್ದಾರೆ. ಅಧ್ಯಯನದನ್ವಯ ಇಲ್ಲಿನ ಗುಡ್ಡಗಳಡಿ ವಜ್ರಗಳಿವೆ ಎನ್ನಲಾಗಿದೆ.
ಆದರೀಗ ಇದು ವಜ್ರವೆಂದೇ ಖಚಿತಗೊಂಡರೆ ಈಗಾಗಲೇ ಗ್ರಾಮಸ್ಥರು ಕೊಂಡೊಯ್ದ ವಜ್ರಗಳನ್ನೇನು ಮಾಡುತ್ತಾರೆ ಎಂಬುವುದೇ ಪ್ರಶ್ನೆ.