ಧಾರಾವಿಯಲ್ಲೂ ಹೆಚ್ಚುತ್ತಿದೆ ಕೊರೋನಾ ಸೋಂಕು, ಆಗಲೇ 11 ಮಂದಿ ಬಲಿ
ದೇಶದಲ್ಲಿಯೇ ಹೆಚ್ಚು ಕೊರೋನಾ ವೈರಸ್ ಸೋಂಕಿತರು ಇರುವುದು ಮಹಾರಾಷ್ಟ್ರದಲ್ಲಿ. ಆಗಲೇ 4,200 ಮಂದಿಯನ್ನು ಸೋಂಕು ಕಾಡಿದ್ದು, ಹಲವರು ಅಸುನೀಗಿದ್ದಾರೆ. ಅದರಲ್ಲಿಯೂ ಮುಂಬೈ ಅಂದರೆ ನೆನಪಾಗುವುದು ಅಲ್ಲಿಯ ಅತೀ ದೊಡ್ಡ ಸ್ಲಂ. ಅಲ್ಲಿಗೆ ಮಾತ್ರ ಸೋಂಕು ತಾಗದಿರಲಿ ಎನ್ನುವುದು ಎಲ್ಲರ ಆಶಯವಾಗಿತ್ತು. ಆದರೆ, ದುಷ್ಟ ಕ್ರಿಮಿ ಅಲ್ಲೀಯವರನ್ನು ಹೇಗೆ ಬಿಡುತ್ತೆ? ಆಗಲೇ ಅಲ್ಲಿ 168 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 11 ಮಂದಿ ಅಸುನೀಗಿದ್ದಾರೆ. ವೈದ್ಯರು ತಂಡೋಪ ತಂಡವಾಗಿ ಇಲ್ಲಿನ ನಿವಾಸಿಗಳನ್ನು ಪರೀಕ್ಷಿಸುತ್ತಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಹೇಗಿದೆ ನೋಡಿ ಅಲ್ಲಿಯ ಚಿತ್ರಣ?

ಭಾರತದಲ್ಲಿಯೇ ಕೋವಿಡ್-19 ಪ್ರಕರಣದ ಹಾಟ್‌ಸ್ಪಾಟ್ ಎಂದು ದಾರಾವಿಯನ್ನು ಪರಿಗಣಿಸಲಾಗಿದೆ.

ಏಷ್ಯಾದ ಹೆಚ್ಚು ಜನ ಸಾಂದ್ರಿತ ಸ್ಲಮ್ ಇದು.

ಏಷ್ಯಾದ ಹೆಚ್ಚು ಜನ ಸಾಂದ್ರಿತ ಸ್ಲಮ್ ಇದು.

ಸುಮಾರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನ 17 ಮಂದಿಗೆ ಇಲ್ಲಿ ಸೋಂಕು ತಗುಲಿದೆ.

ಅಲ್ಲದೇ 15 ವರ್ಷದ ಮಗುವಿನಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಸೋಮವಾರ ದಾಖಲಾದ ಪ್ರಕರಣದಲ್ಲಿ ಇಬ್ಬರು 60 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ.

ಇಲ್ಲಿ ಸೋಂಕು ಹರಡದಂತೆ ಎಚ್ಚರ ವಹಿಸುವುದು ಮುಂಬೈ ಮುನಿಸಿಪಾಲಿಟಿ ಅಧಿಕಾರಿಗಳ ಮುಂದಿರುವ ದೊಡ್ಡ ಚಾಲೆಂಜ್.

ಇಲ್ಲಿ ಬದುಕುವವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಷ್ಟೂ ಜಾಗವಿಲ್ಲ.

ಮುಂಬೈನಲ್ಲಿ ದಾಖಲಾದ 187 ಪ್ರಕರಣಗಳಲ್ಲಿ 30 ದಾರಾವಿಗೆ ಸಂಬಂಧಿಸಿದ್ದು. ದೇಶದಲ್ಲಿಯೇ ಅತೀ ಹೆಚ್ಚು ಸೋಂಕಿತರು ಇರುವ ಭಾರತದ ನಗರವಿದು.

ಸುಮಾರು 2.1 ಕಿ.ಮೀ ಪ್ರದೇಶದಲ್ಲಿ ವ್ಯಾಪಿಸಿರುವ ಈ ಸ್ಲಮ್ಮಿನಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ.

ದೇಶದ ಬಹು ಭಾಗಗಳಿಂದ ಕೆಲಸ ಅರಸಿ ಹೋಗುವ ಬಹುತೇಕ ಬಡವರು ವಾಸಿಸಲು ಇದೇ ಏರಿಯಾಯವನ್ನು ಆರಿಸಿಕೊಳ್ಳುತ್ತಾರೆ.

ಇಲ್ಲಿ ಬಹು ಧಾರ್ಮಿಕ, ಬಹು ಭಾಷೀಯ ಹಾಗೂ ವೈವಿಧ್ಯತೆ ಇರೋ ಮಂದಿ ಒಟ್ಟಾಗಿ ವಾಸಿಸುತ್ತಿದ್ದಾರೆ.

ಸಾಮಾನ್ಯವಾಗಿ ಮನೆಗೆಲಸದವರಾಗಿ ಜೀವನ ನಡೆಸುವ ಅನೇಕರು ಇದೇ ಪ್ರದೇಶದಲ್ಲಿದ್ದಾರೆ.

ದಾರಾವಿಯಲ್ಲಿಯೇ ಚರ್ಮ, ವಸ್ತ್ರ ಹಾಗೂ ಮಣ್ಣಿಗೆ ಸಂಬಂಧಿಸಿದ ವಸ್ತುಗಳು ತಯಾರಾಗುತ್ತವೆ.

1896ರಲ್ಲಿ ಪ್ಲೇಗ್ ಇಡೀ ದೇಶವನ್ನು ಆವರಿಸಿದಾಗಲೂ ಹೆಚ್ಚು ತೊಂದರೆಗೊಳಗಾದ ಪ್ರದೇಶವಿದು.

ಆಗ ರೋಗಕ್ಕೆ ಸುಮಾರು ಅರ್ಧದಷ್ಟು ಜನಸಂಖ್ಯೆ ಬಲಿಯಾಗಿತ್ತು.

ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಲು ಮಹಾರಾಷ್ಟ್ರದ ಹಲವು ಸರಕಾರಗಳು ಸಾಕಷ್ಟು ಹಣ ತಂದಿದ್ದರೂ, ಯಾವುದೂ ಫಲಕಾರಿಯಾಗದಿರುವುದು ಮಾತ್ರ ದುರಂತ.