ಪ್ಯಾಂಗಾಂಗ್ ಲೇಕ್ ಬಳಿ ಭಾರತ ಸೇನಾ ನಿಯೋಜನೆ, ಸ್ಯಾಟಲೈಟ್ ಚಿತ್ರದ ಬೆನ್ನಲ್ಲೇ ಸೇನೆ ರವಾನಿಸಿದ ಚೀನಾ!

First Published Jan 1, 2021, 5:55 PM IST

ಭಾರತ ಹಾಗೂ ಚೀನಾ ನಡುವಿನ ಗಡಿ ಸಮಸ್ಯೆ ತಣ್ಣಾಗಾಯ್ತು ಅನ್ನೋವಷ್ಟರಲ್ಲೇ ಮತ್ತೆ ಘರ್ಷಣೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿದೆ. ಚೀನಾ ಅತಿಕ್ರಮಕ್ಕೆ ಪ್ರತಿಯಾಗಿ ಪ್ಯಾಂಗಾಂಗ್ ಸರೋವರದ ಬಳಿ ಭಾರತ ಕೆಲ ಪರ್ವತ ಶ್ರೇಣಿಗಳನ್ನು ವಶಪಡಿಸಿಕೊಂಡಿತ್ತು. ಇದೀಗ ಚೀನಾ ಸ್ಯಾಟ್‌ಲೈಟ್ ಚಿತ್ರಕ್ಕೆ ಕೆರಳಿ ಕೆಂಡವಾಗಿರುವ ಚೀನಾ, ಪ್ರತಿಯಾಗಿ ಸೇನಾ ತುಕುಡಿ ನೀಯೋಜಿಸಿದೆ.

ಭಾರತ ಹಾಗೂ ಚೀನಾ ನಡುವಿನ ಗಡಿ ಸಮಸ್ಯೆ ಸುದೀರ್ಘ ದಿನಗಳಿಂದ ತಲೆನೋವಾಗಿ ಪರಿಣಮಿಸಿದೆ. ಇದೀಗ ಚೀನಾ ಮತ್ತೆ ಅತಿಕ್ರಮಣಕ್ಕೆ ಮುಂದಾಗಿದೆ. ಈ ಕುರಿತು ಚೀನಾ ಸೇನೆ ತುಕಡಿಗಳನ್ನು  ನಿಯೋಜಿಸುತ್ತಿದೆ.

ಇತ್ತೀಚೆಗೆ ಭಾರತ ಹಾಗೂ ಚೀನಾ ವಾಸ್ತವಿಕ ಗಡಿ ನಿಯಂತ್ರಣಾ ರೇಖೆ ಬಳಿಕ ಸ್ಯಾಟಲೈಟ್ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಭಾರತ ತನ್ನ ಸೇನಾ ತುಕಡಿಗಳನ್ನು ನಿಯೋಜಿಸಿರುವುದುನ್ನು ಚೀನಾ ಗಂಭೀರವಾಗಿ ಪರಿಗಣಿಸಿದೆ.

ಪ್ಯಾಂಗಾಂಗ್ ಸರೋವರ ಹಾಗೂ ಸ್ಪ್ಯಾನ್‌ಗ್ಗರ್ ಸರೋವರ ತಟದಲ್ಲಿ ಭಾರತ ಸೇನಾ ತುಕಡಿ ನಿಯೋಜಿಸಿದೆ. ಇದಕ್ಕೆ ಪ್ರತಿಯಾಗಿ ಇದೀಗ ಚೀನಾ ಕೂಡ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ.

2019ರ ಆಗಸ್ಟ್ ತಿಂಗಳಲ್ಲಿ SFF ಫೋರ್ಸ್ ಹಾಗೂ ವಿಕಾಸ್ ಬೆಟಾಲಿಯನ್ ಪಡೆ, ಚೀನಾ ವಶದಲ್ಲಿದ್ದ 13 ನಿರ್ಣಾಯಕ ಎತ್ತರ ಮತ್ತು ಪರ್ವತ ಶ್ರೇಣಿಗಳನ್ನು ಪಶಪಡಿಸಿಕೊಂಡಿತ್ತು.

ಇದೀಗ ಭಾರತ, ಸದ್ದಿಲ್ಲದ ಸೇನಾ ತುಕಡಿ ನಿಯೋಜಿಸಿದೆ ಎಂದು ಚೀನಾ ಆರೋಪಿಸಿದೆ. ಆದರೆ ಭಾರತ ಪರ್ವತ ಶ್ರೇಣಿ ವಶಪಡಿಸಿದ ಬಳಿಕ ಈ ಆಯಕಟ್ಟಿನ ಸ್ಥಳಗಳಲ್ಲಿ ಭಾರತ ತುಕಡಿ ನಿಯೋಜಿಸಿತ್ತು. ಆಧರೆ ಚೀನಾ ಇದೀಗ ಖ್ಯಾತೆ ತೆಗೆಯೋ ಮೂಲಕ ಮತ್ತೆ ಕಿರಿಕ್ ಮಾಡುತ್ತಿದೆ.

ಚೀನಾ ಈಗಾಗಲೇ ಎಲ್‌ಎಸಿಯ ಉದ್ದಕ್ಕೂ ಆಕ್ರಮಣಕಾರಿಯಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿದೆ. ವರದಿಗಳ ಪ್ರಕಾರ, ಚೀನಾ ಸೇನೆ ಕರಕೋರಂ ಪಾಸ್ ಮತ್ತು ರೆಚಿನ್ ಲಾ ಬಳಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಭಾರತ ಸೇನೆ ಪೂರ್ವ ಲಡಾಖ್‌ನಲ್ಲಿ ಸೈನಿಕರ ನಿಯೋಜನೆ ಮಾತುಕತೆ ನಡೆಸಲು ಇದೀಗ ಚೀನಾ ಮುಂದಾಗಿದೆ.  ಕಮಾಂಡರ್ ಮಟ್ಟದ ಸಭೆಯ ಒಂಬತ್ತನೇ ಸುತ್ತಿನ ಸಭೆ ನಡೆಸಲು ಭಾರತ ಹಾಗೂ ಚೀನಾ ಸಜ್ಜಾಗಿದೆ.

ಭಾರತ ಸೇನಾ ತುಕಡಿ ನಿಯೋಜನೆ ಹೆಸರಿನಲ್ಲಿ ಇದೀಗ ಚೀನಾ ಕೂಡ ಹೆಚ್ಚುವರಿ ಸೇನೆ ನಿಯೋಜಿಸಿದ್ದು ಮಾತ್ರವಲ್ಲ, ಗಡಿ ರೇಖೆ ಬಳಿ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಇದು ಭಾರತದ ಕೋಪಕ್ಕೆ ಕಾರಣವಾಗಿದೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?