- Home
- News
- India News
- ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು: ಪುರುಷ ಜನನಾಂಗ ಪ್ರವೇಶವಾಗದೆ ವೀರ್ಯ ವಿಸರ್ಜನೆಯಾದ್ರೆ ಅದು ಅ*ತ್ಯಾಚಾರವಲ್ಲ!
ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು: ಪುರುಷ ಜನನಾಂಗ ಪ್ರವೇಶವಾಗದೆ ವೀರ್ಯ ವಿಸರ್ಜನೆಯಾದ್ರೆ ಅದು ಅ*ತ್ಯಾಚಾರವಲ್ಲ!
Ejaculation Without Penetration is Attempt to Rape, Not Rape: HC ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಯೋನಿಯೊಳಗೆ ಜನನಾಂಗವನ್ನು ನುಗ್ಗಿಸದೆ ಮೇಲಿನಿಂದ ಉಜ್ಜುವುದು 'ಅ*ತ್ಯಾಚಾರ' ಅಲ್ಲ, ಬದಲಿಗೆ 'ಅ*ತ್ಯಾಚಾರಕ್ಕೆ ಯತ್ನ' ಎಂದು ಸ್ಪಷ್ಟಪಡಿಸಿದೆ.

ಪುರುಷ ಜನನಾಂಗವನ್ನು ಯೋನಿಯ ಒಳಗಡೆ ನುಗ್ಗಿಸದೇ, ಮೇಲಿಂದಲೇ ಉಜ್ಜುವುದು ಅ*ತ್ಯಾಚಾರವಲ್ಲ, ಇದು 'ಅ*ತ್ಯಾಚಾರಕ್ಕೆ ಪ್ರಯತ್ನ' ಎಂದಾಗುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅ*ತ್ಯಾಚಾರ ಯತ್ನ ಮತ್ತು ಅ*ತ್ಯಾಚಾರದ ನಡುವಿನ ಕಾನೂನು ವ್ಯತ್ಯಾಸವನ್ನು ಆಧರಿಸಿ, ಸಂತ್ರಸ್ಥೆ ಹುಡುಗಿಯ ಕನ್ಯಾಪೊರೆಗೆ ಏನೂ ಆಗಿಲ್ಲ ಎನ್ನುವ ವೈದ್ಯಕೀಯ ಪುರಾವೆಗಳು ಗಮನಾರ್ಹ ಅಂಶವಾಗಿರುವುದರಿಂದ, ನ್ಯಾಯಾಲಯವು ಅಪರಾಧಿಯ ಶಿಕ್ಷೆಯನ್ನು ಏಳು ವರ್ಷಗಳಿಂದ ಮೂರುವರೆ ವರ್ಷಗಳಿಗೆ ಮಾರ್ಪಾಡು ಮಾಡಿದೆ.
ಅ*ತ್ಯಾಚಾರಕ್ಕೆ ಯತ್ನಿಸಿದವನ ಉದ್ದೇಶ ಸ್ಪಷ್ಟವಾಗಿದೆ. ಆದರೆ, ಪುರುಷ ಜನನಾಂಗವನ್ನು ಯೋನಿಯ ಒಳಗಡೆ ಹಾಕಿರುವ ಯಾವುದೇ ಸಾಕ್ಷ್ಯ ಇಲ್ಲದೇ ಇರುವ ಕಾರಣ ಈ ಕೃತ್ಯವು ನಿಜವಾದ ಅ*ತ್ಯಾಚಾರವೆಂದು ಪರಿಗಣಿಸಲ್ಪಡುವುದಿಲ್ಲ ಎಂದು ನ್ಯಾಯಮೂರ್ತಿ ನರೇಂದ್ರ ಕುಮಾರ್ ವ್ಯಾಸ್ ಗಮನಿಸಿದರು.
2004ರ ಮೇ 21 ರಂದು ನಡೆದ ಪ್ರಕರಣದಲ್ಲಿ ಛತ್ತೀಸ್‌ಗಢ ಹೈಕೋರ್ಟ್ ಈ ತೀರ್ಪು ನೀಡಿದೆ. ಆರೋಪಿಯು ಸಂತ್ರಸ್ತೆ ಒಂಟಿಯಾಗಿದ್ದಾಗ ಅವಳನ್ನು ತನ್ನ ಮನೆಗೆ ಎಳೆದುಕೊಂಡು ಹೋಗಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಭೋಗಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376(1) ರ ಅಡಿಯಲ್ಲಿ ಅತ್ಯಾಚಾರ ಮತ್ತು ಸೆಕ್ಷನ್ 342 ರ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಲಾಯಿತು. ವಿಚಾರಣಾ ನ್ಯಾಯಾಲಯ ಆತನಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತು.
ನಂತರ ಹೈಕೋರ್ಟ್ ಸೆಕ್ಷನ್ 376(1) ರ ಅಡಿಯಲ್ಲಿ ಶಿಕ್ಷೆಯನ್ನು ರದ್ದುಗೊಳಿಸಿ, ಮೇಲ್ಮನವಿ ಸಲ್ಲಿಸಿದ ವ್ಯಕ್ತಿಗೆ ಸೆಕ್ಷನ್ 376 ರ ಅಡಿಯಲ್ಲಿ ಅ*ತ್ಯಾಚಾರ ಯತ್ನಕ್ಕಾಗಿ ಸೆಕ್ಷನ್ 511 ರ ಅಡಿಯಲ್ಲಿ ಶಿಕ್ಷೆ ವಿಧಿಸಿತು. ಶಿಕ್ಷೆಯನ್ನು ಮೂರು ವರ್ಷ ಆರು ತಿಂಗಳ ಕಠಿಣ ಜೈಲು ಶಿಕ್ಷೆ ಮತ್ತು ₹200 ದಂಡಕ್ಕೆ ಮಾರ್ಪಡಿಸಲಾಯಿತು. ಉಳಿದ ಶಿಕ್ಷೆಯನ್ನು ಅನುಭವಿಸಲು ಮೇಲ್ಮನವಿ ಸಲ್ಲಿಸಿದ ವ್ಯಕ್ತಿ ಎರಡು ತಿಂಗಳೊಳಗೆ ಶರಣಾಗುವಂತೆ ನಿರ್ದೇಶಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

