ಸಾಮಾನ್ಯ ಜನರಿಗೆ ತೊಂದರೆ ಗಮನಿಸಿ ತಮಗೆ ನೀಡಿದ್ದ ಕಚೇರಿಯನ್ನ ಸರ್ಕಾರಕ್ಕೆ ಹಿಂದಿರುಗಿಸಿದ ಡಿಸಿಎಂ ಪವನ್ ಕಲ್ಯಾಣ!
ಅಧಿಕಾರಕ್ಕೇರುತ್ತಿದ್ದಂತೆ ಸರ್ಕಾರದಿಂದ ಸಿಗುವ ಬಂಗಲೆ, ಕಾರು ಇನ್ನಿತರ ಸವಲತ್ತುಗಳನ್ನು ಬಿಡದೆ ಬಳಸಿಕೊಳ್ಳುವುದು ಜನಪ್ರತಿನಿಧಿ ನಡುವೆ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ತನ್ನಿಂದಾಗಿ ಜನರಿಗೆ ತೊಂದರೆ ಗಮನಿಸಿ ತಮಗೆ ನೀಡಿದ್ದ ಕಚೇರಿಯನ್ನೇ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ.
Pawan Kalyan
ಒಂದು ದಶಕಗಳ ನಿರಂತರ ಹೋರಾಟದ ಬಳಿಕ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿರುವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಚಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ. ಹುದ್ದೆಗೆ ಅನುಗುಣವಾಗಿ ಸರ್ಕಾರದಿಂದ ತಮಗೆ ಮಂಜೂರಾಗಿದ್ದ ಕಚೇರಿ, ಪೀಠೋಪಕರಣಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವ ಮೂಲಕ ಸುದ್ದಿಯಾಗಿದ್ದಾರೆ.
Pawan Kalyan
ಹೌದು, ಸಾಮಾನ್ಯವಾಗಿ ಅಧಿಕಾರಕ್ಕೇರು ಜನಪ್ರತಿನಿಧಿಗಳು ಸರ್ಕಾರದಿಂದ ಸಿಗುವ ಕಾರು, ಬಂಗಲೆ ಇನ್ನಿತರ ಸವಲತ್ತುಗಳು ಬಿಡದೇ (ಕ)ಬಳಸಿಕೊಳ್ಳುವುದನ್ನು ನೋಡಿರಬಹುದು. ಆದರೆ ಸರ್ಕಾರ ನೀಡಿದ್ದ ಶಿಬಿರ ಕಚೇರಿಯನ್ನು ಉಪಮುಖ್ಯಮಂತ್ರಿ ಪವನ್ ಕಲ್ಯಾಣವನ್ನು ಸರ್ಕಾರಕ್ಕೆ ಹಿಂತಿರುಗಿಸಿ ಅಚ್ಚರಿ ಮೂಡಿಸಿದ್ದಾರೆ.
Pawan Kalyan
ಈ ಹಿಂದೆ, ವಿಜಯವಾಡದಲ್ಲಿ ಆಡಳಿತಾತ್ಮಕ ಕಾರ್ಯಗಳಿಗಾಗಿ ನೀರಾವರಿ ಇಲಾಖೆಯ ಕಟ್ಟಡ ನೀಡಲಾಗಿತ್ತು. ಪವನ್ ಕಲ್ಯಾಣಗಾಗಿ ವಿಶೇಷವಾಗಿ ಬದಲಾವಣೆ ಮಾಡಲಾಗಿತ್ತು. ಆದರೆ ಸ್ವಲ್ಪ ಸಮಯ ಆಲೋಚಿಸಿ ಕಟ್ಟಡ ಮತ್ತು ಅದರೊಂದಿಗೆ ಬಂದಿರುವ ಪೀಠೋಪಕರಣಗಳನ್ನು ಆಂಧ್ರಪ್ರದೇಶ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದಿರುವ ಉಪಮುಖ್ಯಮಂತ್ರಿ ಪವನ್ ಕಲ್ಯಾಣ, ಹುದ್ದೆಯಲ್ಲಿ ನಮಗೆ ಮಂಜೂರಾಗಿದ್ದ ಕಚೇರಿ, ಅದರ ಪೀಠೋಪಕರಣಗಳನ್ನು ಸರ್ಕಾರಕ್ಕೆ ಹಿಂದಿರುಗಿಸುತ್ತಿದ್ದೇನೆ ಅದರ ಬದಲಾಗಿ ಮಂಗಳಗಿರಿಯಲ್ಲಿ ಕಚೇರಿಯನ್ನು ಬಳಸುತ್ತೇನೆ. ವಿಜಯವಾಡದ ಕಚೇರಿ ಅಗತ್ಯವಿಲ್ಲ ಎಂದು ಬರೆದಿದ್ದಾರೆ. ಅಲ್ಲದೆ ಕಚೇರಿ ಮಂಜೂರು ಮಾಡಿದ್ದ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಧನ್ಯವಾದ ತಿಳಿಸಿದ್ದಾರೆ.
pawan kalyan
ಕಚೇರಿ ಹಿಂದಿರುಗಿಸಿದ್ದು ಏಕೆ?
ಉಪ ಮುಖ್ಯಮಂತ್ರಿ ಮತ್ತು ಪ್ರಮುಖ ಇಲಾಖೆಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಪವನ್ ಕಲ್ಯಾಣ ಅವರಿಗೆ ಸರ್ಕಾರ ವಿಜಯವಾಡದಲ್ಲಿ ಕ್ಯಾಂಪ್ ಕಚೇರಿ ಮಂಜೂರು ಮಾಡಿದೆ. ಅಲ್ಲಿ ಅಧಿಕಾರಿಗಳ ಜತೆ ಸರಣಿ ಪರಿಶೀಲನಾ ಸಭೆ ಏರ್ಪಡಿಸಿದ್ದರು. ಆದರೆ ಈಗ ಆ ಕಚೇರಿಯಿಂದಲೇ ಸಮಸ್ಯೆಗಳು ಎದುರಾಗಿರುವ ಬಗ್ಗೆ ದೂರು ಕೇಳಿಬಂದಿದೆ.
Pawan Kalyan
ಕಚೇರಿ ಕಟ್ಟಡದ ಹಿಂದೆ ನ್ಯಾಯಾಲಯ ಸಂಕೀರ್ಣವಿದೆ. ಪವನ್ ಕಲ್ಯಾಣ ಕಚೇರಿಗೆ ಬಂದಾಗ ವಾಹನ ಸಂಚಾರ ಹೆಚ್ಚಾಗಿ ನ್ಯಾಯಾಲಯಕ್ಕೆ ಬರುವ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ. ತನ್ನ ಕಚೇರಿಯಿಂದಾಗಿ ಸಾಮಾನ್ಯ ಜನರು ಎದುರಿಸುತ್ತಿರುವ ತೊಂದರೆ ಗಮನಿಸಿದ ಪವನ್ ಕಲ್ಯಾಣ ಕಟ್ಟಡವನ್ನು ಖಾಲಿ ಮಾಡಲು ನಿರ್ಧರಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಇಲ್ಲಿಯೇ ಸಭೆ ನಡೆಸಲಾಗಿತ್ತು. ಆದರೆ ಇನ್ನುಮುಂದೆ ಮನೆಯ ಸಮೀಪದ ಕಾರ್ಯಾಲಯ ಆಡಳಿತಾತ್ಮಕ ಕಾರ್ಯಗಳಿಗೆ ಪಕ್ಷದ ಕಚೇರಿ ಬಳಸಲು ನಿರ್ಧರಿಸಿದ್ದಾರೆ. ಮಂಗಳಗಿರಿಯಲ್ಲಿ ಜನಸೇನೆಗಾಗಿ ಐದು ಅಂತಸ್ತಿನ ಕಚೇರಿ ನಿರ್ಮಿಸಲಾಗುತ್ತಿದೆ. ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. ಅವರು ಮೊದಲ ಎರಡು ಮಹಡಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಸೂಚಿಸಿದ್ದಾರೆ. ಅಲ್ಲಿವರೆಗೆ ತಂಗಿರುವ ಕ್ಯಾಂಪ್ ಕಚೇರಿಯಲ್ಲಿ ತಾತ್ಕಾಲಿಕ ಕಾರ್ಯಾಲಯವನ್ನ ಮಾಡಿಕೊಂಡಿರುವ ಪವನ್ ಕಲ್ಯಾಣ. ಜನಪರ ಹೋರಾಟದ ಮೂಲಕವೇ ಅಧಿಕಾರಕ್ಕೆ ಬಂದಿರುವ ಪವನ್ ಕಲ್ಯಾಣ. ಇದೀಗ ಜನರ ತೊಂದರೆ ಗಮನಿಸಿ ಸರ್ಕಾರ ಮಂಜೂರು ಮಾಡಿದ್ದ ಜಾಗವನ್ನೇ ಸರ್ಕಾರಕ್ಕೆ ವಾಪಸ್ ನೀಡಿ ಜನನಾಯಕರೆಸಿದ್ದಾರೆ.